ಗೋಕಾಕ:ಮುಖ್ಯಶಿಕ್ಷಕ ಐ.ಸಿ.ಕೊಣ್ಣೂರ ಅವರ ಸೇವಾ ನಿರತ ದಿನಗಳು ಶ್ಲಾಘಿನೀಯವಾಗಿವೆ : ಬಿ.ಟಿ.ಪುಂಜಿ
ಮುಖ್ಯಶಿಕ್ಷಕ ಐ.ಸಿ.ಕೊಣ್ಣೂರ ಅವರ ಸೇವಾ ನಿರತ ದಿನಗಳು ಶ್ಲಾಘಿನೀಯವಾಗಿವೆ : ಬಿ.ಟಿ.ಪುಂಜಿ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಜೂ 12 :
ಶಿಕ್ಷಕರಾಗಿ ಮೂವತ್ತೊಂಬತ್ತು ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಸಮೀಪದ ನಿಂಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮುಖ್ಯಶಿಕ್ಷಕ ಐ.ಸಿ.ಕೊಣ್ಣೂರ ಅವರ ಸೇವಾ ನಿರತ ದಿನಗಳು ಶ್ಲಾಘಿನೀಯವಾಗಿವೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಸಿಆರ್‍ಸಿ ಬಿ.ಟಿ.ಪುಂಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಕ್ಲಸ್ಟರ್ ಮಟ್ಟದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ವತಿಯಿಂದ ಬೆಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಐ.ಸಿ.ಕೊಣ್ಣೂರ ಅವರು ಇತ್ತೀಚೆಗೆ ಶಿಕ್ಷಕ ಸೇವೆಯಿಂದ ನಿವೃತ್ತಿ ಹೊಂದಿದ ಪ್ರಯುಕ್ತ ಶುಕ್ರವಾರ ಜೂ.12 ರಂದು ಆಯೋಜಿಸಿದ ಸೇವಾ ನಿವೃತ್ತಿ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಮುಖ್ಯಶಿಕ್ಷಕ ವೈ.ಸಿ.ಶೀಗಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಇಲ್ಲಿಯ ಹೆಣ್ಣು ಮಕ್ಕಳ ಶಾಲೆಯ ಮುಖ್ಯಶಿಕ್ಷಕ ಆರ್.ಬಿ.ಬೆಟಗೇರಿ ಅವರು ಕೊಣ್ಣೂರ ಅವರ ಸದ್ಗುಣ, ಒಡನಾಟ ಹಾಗೂ ಸೇವೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಆರ್.ಎಸ್.ಕಲ್ಲಪ್ಪನ್ನವರ, ಎಸ್.ವೈ.ಸನದಿ ಈರಪ್ಪ ಕೆಳಗೇರಿ, ಎಸ್.ವೈ.ಪಾಟೀಲ, ಬಿ.ಎ.ಕೋಟಿ, ಈರಪ್ಪ ಹಸಬಿ, ಎ.ಎಮ್.ನಗಾರ್ಸಿ, ಶಿಕ್ಷಕಿಯರಾದ ಎಮ್.ಎಸ್.ಪಾಟೀಲ, ಜಿ.ಎಮ್.ಕಮತ, ಉಮಾ ಹೊಸಕೋಟಿ, ಎಸ್.ಎಮ್.ಬಿರಾದಾರ, ಎನ್.ಆರ್.ಹುಣಶ್ಯಾಳ, ಸೇರಿದಂತೆ ಬೆಟಗೇರಿ ಕ್ಲಸ್ಟರ್ ಮಟ್ಟದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ-ಶಿಕ್ಷಕಿಯರು, ಇತರರು ಇದ್ದರು.