RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ನಾಳೆ ನಗರದ ಶೂನ್ಯ ಸಂಪಾದನ ಮಠಕ್ಕೆ ಭೇಟಿ

ಗೋಕಾಕ:ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ನಾಳೆ ನಗರದ ಶೂನ್ಯ ಸಂಪಾದನ ಮಠಕ್ಕೆ ಭೇಟಿ 

ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ನಾಳೆ ನಗರದ  ಶೂನ್ಯ  ಸಂಪಾದನ ಮಠಕ್ಕೆ ಭೇಟಿ    

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 13 :   ನೂತನವಾಗಿ ರಾಜ್ಯ ಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಈರಣ್ಣಾ ಕಡಾಡಿಯವರು ರವಿವಾರದಂದು ಪ್ರಥಮ ಬಾರಿಗೆ ಗೋಕಾಕ ನಗರಕ್ಕೆ ಆಗಮಿಸಲಿದ್ದಾರೆ. ರವಿವಾರ ದಿ.14ರಂದು ಬೆಳಿಗ್ಗೆ 9.30ಗಂಟೆಗೆ ಆಗಮಿಸಲಿರುವ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿಯವರು ನಗರದ ಶೂನ್ಯ ಸಂಪಾದನ ಮಠಕ್ಕೆ ಭೇಟಿ ನೀಡಿ ಶ್ರೀ ಮುರುಘರಾಜೇಂದ್ರ ಸ್ವಾಮಿಜಿಯವರ ಆಶೀರ್ವಾದ ಪಡೆದು, 9.45 ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದ ಶ್ರೀ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ. ನಂತರ 10ಗಂಟೆಗೆ ಬಸವೇಶ್ವರ ವೃತ್ತದ ಶ್ರೀ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿ, 10.15 ಗಂಟೆಗೆ ನಗರದ ಮಿನಿವಿಧಾನ ಸೌಧ ಬಳಿಯಿರುವ ಡಾ.ಬಾಬಾಸಾಹೇಬ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಬೆಳಿಗ್ಗೆ 10.30 ಗಂಟೆಗೆ ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಅವರ ಕಾರ್ಯಾಲಯಕ್ಕೆ ಆಗಮಿಸಿ, ಬಿಜೆಪಿ ಕಾರ್ಯಕರ್ತರ ಭೇಟಿಯ ನಂತರ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯಾಲಯ(ಎನ್‍ಎಸ್‍ಎಫ್)ಕ್ಕೆ ಭೇಟಿ ನೀಡಲಿದ್ದಾರೆ. ಕರೋನಾ ಮಹಾಮಾರಿ ಸಂದರ್ಭದಲ್ಲಿ ಕಾರ್ಯಕರ್ತರು ಹೂವುಗುಚ್ಛ, ಶಾಲುಗಳನ್ನು ತರದೆ, ಕಡ್ಡಾಯವಾಗಿ ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮಣ್ಣವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: