ಗೋಕಾಕ:ವಿದ್ಯಾರ್ಥಿಗಳ ಏಳ್ಗೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ : ಶಿಕ್ಷಣಾಧಿಕಾರಿ ಜಿ.ಬಿ ಬಳಗಾರ
ವಿದ್ಯಾರ್ಥಿಗಳ ಏಳ್ಗೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ : ಶಿಕ್ಷಣಾಧಿಕಾರಿ ಜಿ.ಬಿ ಬಳಗಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 14 :
ವಿದ್ಯಾರ್ಥಿಗಳ ಏಳ್ಗೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ .ಬಳಗಾರ ಹೇಳಿದರು
ಶನಿವಾರದಂದು ನಗರದ ಶಿಕ್ಷಣಾಧಿಕಾರಿ ಬಳಗಾರ ಅವರ ಮನೆಯಲ್ಲಿ ಜೆಎಸ್ಎಸ್ ಕಾಲೇಜಿನ 2005 ರ ಪದವಿ ವಿದ್ಯಾರ್ಥಿಗಳ ಗೆಳೆಯ ಬಳಗದಿಂದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಮಾಸ್ಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಸ್ಕ ಸ್ವೀಕರಿಸಿ ಅವರು ಮಾತನಾಡಿದರು
ಕಲಿಕೆ ಮುಗಿದು 15 ವರ್ಷಗಳಾದರೂ ಸಹ ಇನ್ನುವರೆಗು ಗೆಳೆತನ ಉಳಿಸಿಕೊಳ್ಳುವದರ ಜೊತೆಗೆ ತಮ್ಮನ್ನು ತಾವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವ 2005ರ ಜೆಎಸ್ಎಸ್ ಪದವಿ ಗೆಳೆಯರ ಬಳಗದ ಕಾರ್ಯ ಇತರರಿಗೆ ಮಾದರಿಯಾಗಿದೆ . ಇವರ ಸಾಮಾಜಿಕ ಕಳಕಳಿ ಉಳ್ಳ ಕಾರ್ಯಗಳು ಹಿಗೆಯೆ ಮುಂದುವರೆಯಲ್ಲಿ ಎಂದು ಹಾರೈಸಿದರು
ಈ ಸಂಧರ್ಭದಲ್ಲಿ 2005ರ ಬ್ಯಾಚ್ ನ ಸುರೇಶ ಸನದಿ , ಮುಬಾರಕ ಪಿಂಜಾರ , ವಿವೇಕ ಹಳ್ಳೂರ , ಸಾದಿಕ ಹಲ್ಯಾಳ , ಬಸವರಾಜ ದೇಶನೂರ , ರಾಜು ಗೋಲಬಾಂವಿ , ಗಂಗಾಧರ ಹಾರುಗೋಪ್ಪ, ಬಸು ಹುಣಶ್ಯಾಳ , ರವಿ ಗುಡಕೇತರ , ಬಾಳು ಕಮತ್ಯಾನಟ್ಟಿ , ಅಶೋಕ ಕೌಜಲಗಿ , ಗಜಾನನ್ ಬಾಗಾಯಿ, ರವಿ ಅಜ್ಜನವರ , ಚನ್ನಮಲ್ಲ ಕಳಿಗುದ್ದಿ ಸೇರಿದಂತೆ ಇತರರು ಇದ್ದರು .