RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸರಕಾರ ಕಳಪೆ ಬೀಜಗಳನ್ನು ವಿತರಣೆ: ರೈತರಿಗೆ ಹಾನಿ ರಾಜ್ಯ ರೈತ ಸಂಘದ ಆರೋಪ

ಗೋಕಾಕ:ಸರಕಾರ ಕಳಪೆ ಬೀಜಗಳನ್ನು ವಿತರಣೆ: ರೈತರಿಗೆ ಹಾನಿ ರಾಜ್ಯ ರೈತ ಸಂಘದ ಆರೋಪ 

ಸರಕಾರ ಕಳಪೆ ಬೀಜಗಳನ್ನು ವಿತರಣೆ: ರೈತರಿಗೆ ಹಾನಿ ರಾಜ್ಯ ರೈತ ಸಂಘದ ಆರೋಪ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 14 :

 
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಮಿತಿ ಸಭೆಯು ಜಿಲ್ಲಾಧ್ಯಕ್ಷ ಸತ್ತೆಪ್ಪ ಮಲ್ಲಾಪೂರೆ ಅವರ ಅಧ್ಯಕ್ಷತೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿತು.
ಸಭೆಯಲ್ಲಿ ಬಿತ್ತನೆ ಸಂದರ್ಭದಲ್ಲಿ ಸರಕಾರ ಕಳಪೆ ಬೀಜಗಳನ್ನು ವಿತರಿಸಿದ್ದು ಅವುಗಳಿಂದಾಗಿ ರೈತರು ಸಾಕಷ್ಟು ಹಾನಿಗೊಳಗಾಗಿದ್ದಾರೆ ಅದನ್ನು ಸರಕಾರವೇ ನೀಡಬೇಕು. ಕಳೆದ ವರ್ಷ ಜಿಲ್ಲೆಯಾದ್ಯಂತ ಕೆಲವು ತಾಲೂಕುಗಳು ಪ್ರವಾಹಕ್ಕೆ ಸಿಕ್ಕು ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ, ಆ ಪ್ರವಾಹದಲ್ಲಿ ಬೆಳೆ ಹಾನಿ ಮತ್ತು ಸಾವಿರಾರು ಮನೆಗಳು ಬಿದ್ದು ಸಾಕಷ್ಟು ಹಾನಿಗೊಳಗಾಗಿದ್ದು ಇನ್ನೂ ಪರಿಹಾರ ಬಂದಿಲ್ಲ, ಇದಕ್ಕೆ ಸಂಬಂಧ ಪಟ್ಟಂತೆ ಎಲ್ಲ ತಾಲೂಕುಗಳ ತಹಶೀಲದಾರ ಅವರಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರುವದಿಲ್ಲ ಅದಕ್ಕಾಗಿ ದಿ.16 ರಂದು ಮುಂಜಾನೆ ಗೋಕಾಕ ತಹಶೀಲದಾರ ಕಚೇರಿಗೆ ರೈತ ಸಂಘದ ನೇತ್ರತ್ವದಲ್ಲಿ ಸಾವಿರಾರು ನೆರೆ ಸಂತ್ರಸ್ತರೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ತಿರ್ಮಾನಿಸಲಾಯಿತು.
ಸಭೆಯಲ್ಲಿ ರಾಜ್ಯ ಪದಾಧಿಕಾರಿಗಳಾದ ಭೀಮಶಿ ಗದಾಡಿ, ಗಣಪತಿ ಈಳಿಗೇರ, ಮಲ್ಲಿಕಾರ್ಜುನ ರಾಮದುರ್ಗ, ಮಂಜುನಾಥ್ ಪೂಜೇರಿ, ರವಿ ಸಿದ್ದಮ್ಮನವರ, ಮುತ್ತೆಪ್ಪ ಬಾಗನ್ನವರ, ಮಾದೇವ ಮಡಿವಾಳ, ತ್ಯಾಗರಾಜ್ ಕದಂ, ಜಗದೀಶ ದೇವರೆಡ್ಡಿ, ಮಹಾಂತೇಶ ಹಿರೇಮಠ, ಶಿವಾನಂದ ದೊಡವಾಡ, ಕುಮಾರ ಗಾಣಿಗೇರ, ಮಂಜುನಾಥ ಪರಗೌಡ, ಲಕ್ಷ್ಮಣ ಹೊಸಟ್ಟಿ, ಬಾಬು ಹಿರೇಮಠ ಸೇರಿದಂತೆ ಅನೇಕರು ಇದ್ದರು.

Related posts: