RNI NO. KARKAN/2006/27779|Tuesday, December 24, 2024
You are here: Home » breaking news » ಗೋಕಾಕ:ಕೇಂದ್ರದ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ : ಕಡಾಡಿ

ಗೋಕಾಕ:ಕೇಂದ್ರದ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ : ಕಡಾಡಿ 

ಕೇಂದ್ರದ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ : ಕಡಾಡಿ

 

 
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಜೂ 15 :

 

 

ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಹಿತಾಸಕ್ತಿಗೊಸ್ಕರ ರೂಪಿಸುತ್ತಿರುವ ಆದಾಯ ದ್ವಿಗುಣ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕಲ್ಲೋಳಿಯ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ನಿ. ಶಾಖೆಗೆ ಸೋಮವಾರ ಜೂ.15 ರಂದು ಭೇಟಿ ನೀಡಿ, ಶಾಖೆಯ ಸಲಹಾ ಸಮಿತಿಯವರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ನಮ್ಮದು ಕೃಷಿ ಪ್ರಧಾನ ದೇಶವಾಗಿದೆ. ನಾನೊಬ್ಬ ಸಾಮಾನ್ಯ ರೈತ ಕುಟುಂಬದಿಂದ ಬಂದ ವ್ಯಕ್ತಿಯಾಗಿದ್ದೇನೆ. ರೈತರ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ ಎಂದÀರು.
ದೇಶದಲ್ಲಿ ನೇಗಿಲಯೋಗಿಗೆ ಶ್ರೇಷ್ಠ ಸ್ಥಾನಮಾನವಿದೆ. ವಿದ್ಯಾವಂತರು ಕೃಷಿ ಕ್ಷೇತ್ರದ ಕಡೆ ಮುಖಮಾಡುತ್ತಿಲ್ಲ, ಕೃಷಿ ವಲಯಕ್ಕೆ ಹೆಚ್ಚು ಪ್ರಾಧ್ಯನ್ಯತೆ ನೀಡಬೇಕಾಗಿದೆ. ಕೃಷಿ ಆಧಾರಿತ ಹೊಸ ಹೊಸ ತಂತ್ರಜ್ಞಾನಗಳನ್ನು ರೈತರು ಕೃಷಿ ಚಟುವಟಿಕಗಳಲ್ಲಿ ಅಳವಡಿಸಿಕೊಂಡು ವಾರ್ಷಿಕ ಹೆಚ್ಚು ಆದಾಯ ಪಡೆದು ಆರ್ಥಿಕವಾಗಿ ಸಬಲರಾಗಬೇಕಾಗಬೇಕು ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸ್ಥಳೀಯ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಈರಪ್ಪ ದೇಯಣ್ಣವರ, ಶ್ರೀಕಾಂತ ಕರೆಪ್ಪಗೋಳ, ಮಾಯಪ್ಪ ಬಾಣಸಿ, ರಾಮಪ್ಪ ಮುಧೋಳ, ರಮೇಶ ಬ್ಯಾಗಿ, ವಿಠಲ ಕೋಣಿ, ಈಶ್ವರ ಮುಧೋಳ, ಪರಪ್ಪ ಗಿರೆಣ್ಣವರ, ಮಹಾದೇವ ಇಟ್ನಾಳ, ಗಂಗಯ್ಯ ಹಿರೇಮಠ ಸೇರಿದಂತೆ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಶಾಖೆಯ ಸಲಹಾ ಸಮಿತಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಗ್ರಾಮಸ್ಥರು, ಇತರರು ಇದ್ದರು.

Related posts: