RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಭ್ರಷ್ಟಾಚಾರ ನಡೆಸುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಕಠಿಣ ಜರುಗಿಸುವಂತೆ ಆಗ್ರಹಿಸಿ ಕರವೇ ಮನವಿ

ಗೋಕಾಕ:ಭ್ರಷ್ಟಾಚಾರ ನಡೆಸುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಕಠಿಣ ಜರುಗಿಸುವಂತೆ ಆಗ್ರಹಿಸಿ ಕರವೇ ಮನವಿ 

ಭ್ರಷ್ಟಾಚಾರ ನಡೆಸುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಕಠಿಣ ಜರುಗಿಸುವಂತೆ ಆಗ್ರಹಿಸಿ ಕರವೇ ಮನವಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 16 :

 
ಭ್ರಷ್ಟಾಚಾರ ನಡೆಸುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಕರವೇ ಕಾರ್ಯರ್ತರು ಪ್ರತಿಭಟನೆ ನಡೆಯಿಸಿದರು.

ಮಂಗಳವಾರದಂದು ನಗರ ಸಭೆ ಕಾರ್ಯಾಲಯದಲ್ಲಿ ಸೇರಿದ ಕರವೇ ಕಾರ್ಯಕರ್ತರು ನಗರಸಭೆಯಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕತ್ತಪಡಿಸಿ ಕಛೇರಿ ಅಧೀಕ್ಷಕ ಎಂ.ಎನ್.ಸಾಗರೇಕರ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮತ್ತು ಲೋಕಾಯುಕ್ತರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು

ಸರಿ ಸುಮಾರು 20 ತಿಂಗಳು ಮುಗಿಯುತ್ತ ಬಂದರು ಸಹ ನಗರಸಭೆಗೆ ಚುನಾಯಿತ ರಾಗಿರುವ 31 ಸದ್ಯಸರು ಇನ್ನುವರೆಗೂ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗಿಲ್ಲ . ಇದರಿಂದ ನಗರಸಭೆಯಲ್ಲಿ ಅಧಿಕಾರಿಗಳ ದರ್ಬಾರ್ ಅತಿಯಾಗಿ ನಡೆದಿದೆ .ಹಿಂದಿನ ಪೌರಾಯುಕ್ತರು , ಕಛೇರಿಯ ವ್ಯವಸ್ಥಾಪರಕು ನಿವೃತ್ತಿ ಹೊಂದಿದಾಗಿನಿಂದಲೂ ಸಹ ಇಲ್ಲಿ ಯಾವುದೇ ಕಾರ್ಯ ಸುಸೂತ್ರವಾಗಿ ಜರುಗುತ್ತಿಲ್ಲ , ಪೌರಿಯುಕ್ತರಾಗಿ ಬಂದಿರುವ ಶಿವಾನಂದ ಹಿರೇಮಠರಿಗೆ ಗೋಕಾಕ ಜೊತೆಗೆ ಕೊಣ್ಣೂರ ಪಟ್ಟಣ ಪಂಚಾಯಿತಿಯ ಜವಾಬ್ದಾರಿ ಇರುವದರಿಂದಲೊ ಏನೋ ಇಲ್ಲಿಯ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ

ಇದರಿಂದ ಇಲ್ಲಿಯ ಕಾರ್ಯನಿರ್ವಹಿಸುವ ಅಧಿಕಾರಿಗಳು ನಮಗೆ ಯಾರು ಹೇಳುವವರಿಲ್ಲ , ಯಾರು ಕೇಳುವವರಿಲ್ಲ ಎಂದು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಿ ಸಾರ್ವಜನಿಕರಿಂದ ಬೇಕಾಬಿಟ್ಟಿಯಾಗಿ ದುಡ್ಡ ಹೊಡೆಯುವ ಕಾಯಕದಲ್ಲಿ ನಿರತರಾಗಿದ್ದಾರೆ .
ಇಲ್ಲಿ ಕಾರ್ಯನಿರ್ವಹಿಸುವ ಸಂಯೋಜನಾ ಅಧಿಕಾರಿ, ಹಿರಿಯ ಆರೋಗ್ಯ ನಿರೀಕ್ಷಕ ಕಂದಾಯ ಅಧಿಕಾರಿ , ಕಿರಿಯ ಅಭಿಯಂತರ , ಕಂದಾಯ ನಿರೀಕ್ಷರು , ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಇಲ್ಲಿ ಕಾರ್ಯನಿರ್ವಹಿಸುವ ಖಾಸಗಿ ನೌಕರರು ನಗರಸಭೆಗೆ ಬರುವ ಸಾರ್ವಜನಿಕರಲ್ಲಿ ಬೇಕಾಬಿಟ್ಟಿ ಹಣ ವಸೂಲಿ ಮಾಡಿ ಸಾರ್ವಜನಿಕರ ರಕ್ತ ಹಿರುತ್ತಿದ್ದಾರೆ ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, ತಪ್ಪಿಸ್ಥ ಅಧಿಕಾರಿಗಳ ಮೇಲೆ ತನಿಖೆ ಕೈಗೊಂಡು ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನಗರಸಭೆಯನ್ನು ಭ್ರಷ್ಟಾಚಾರ ಮುಕ್ತ ಮಾಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ .

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ , ಪದಾಧಿಕಾರಿಗಳಾದ ಸಾದಿಕ ಹಲ್ಯಾಳ ,ಕೃಷ್ಣಾ ಖಾನಪ್ಪನವರ , ಮುಗುಟ ಪೈಲವಾನ, ಅಶೋಕ ಬಂಡಿವಡ್ಡರ , ರಾಜು ಬಂಡಿವಡ್ಡರ , ಸುರೇಶ ಬಂಡಿವಡ್ಡರ , ಕೃಷ್ಣಾ ಬಂಡಿವಡ್ಡರ , ವಿಶ್ವನಾಥ್ ಹಿರೇಮಠ , ಸಾಗರ ಕಪಲಿ , ಪ್ರತೀಕ ಪಾಟೀಲ್ , ಸತಾರ ಬೇಪಾರಿ, ದೀಪಕ ಹಟ್ಟಿ , ಹನುಮಂತ ಅಮ್ಮಣಗಿ, ಸುರೇಶ ಪತ್ತಾರ ಸೇರಿದಂತೆ ಇತರರು ಇದ್ದರು

Related posts: