ಘಟಪ್ರಭಾ:ತರಕಾರಿ ಮಾರುಕಟ್ಟೆಯಲ್ಲಿ ತಕ್ಷಣ ಮೂಲಸೌಕರ್ಯ ಒದಗಿಸುವಂತೆ ತರಕಾರಿ ವ್ಯಾಪರಸ್ಥರ ಪ್ರತಿಭಟನೆ
ತರಕಾರಿ ಮಾರುಕಟ್ಟೆಯಲ್ಲಿ ತಕ್ಷಣ ಮೂಲಸೌಕರ್ಯ ಒದಗಿಸುವಂತೆ ತರಕಾರಿ ವ್ಯಾಪರಸ್ಥರ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜೂ 16 :
ಜಿಲ್ಲೆಯಲ್ಲಿ ತರಕಾರಿಗೆ ಹೆಸರುವಾಸಿಯಾದ ಘಟಪ್ರಭಾ ತರಕಾರಿ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯವಿಲ್ಲದ ಕಾರಣ ತಕ್ಷಣ ಮೂಲಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ತರಕಾರಿ ವ್ಯಾಪರಸ್ಥರು ಇಂದು ಇಲ್ಲಿನ ಪಟ್ಟಣ ಪಂಚಾಯತಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಇಲ್ಲಿನ ತರಕಾರಿ ಮಾರುಕಟ್ಟೆಗೆ ಪ್ರತಿನಿತ್ಯ ನೂರಾರು ರೈತರು ತಮ್ಮ ಹೊಲದಲ್ಲಿ ಬೆಳೆದ ತರಕಾರಿ ತೆಗೆದುಕೊಂಡು ಬರುತ್ತಿದ್ದಾರೆ ಆದರೆ ಅಲ್ಲಿ ಯಾವುದೆ ಮೂಲ ಸೌಕರ್ಯವಿಲ್ಲ. ಮಳೆಗಾಲದಲ್ಲಿ ಕಾಲಿಡಲು ಆಗದ ಪರಿಸ್ಥಿತಿ ಉಂಟಾಗಿ ಸಂಪೂರ್ಣ ಮಾರುಕಟ್ಟೆ ಕೊಳಚೆಯಗಿ ಗಬ್ಬು ನಾರುತ್ತದೆ ಆದ್ದರಿಂದ ಮಾರುಕಟ್ಟೆಗೆ ಸಂಪೂರ್ಣ ಕಾಂಕ್ರೇಟ್ ಹಾಕಬೇಕು, ಪ್ರತಿನಿತ್ಯ ಸ್ವಚ್ಚ ಮಾಡಬೇಕು, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆಯಾಗಬೇಕು, ಮಳೆ ಬಂದಾಗ ಕೊಳಚೆ ತುಂಬುತ್ತಿರುವ ಕಾರಣ ಮೇಲ್ಚಾವಣೆ ಹಾಕಬೇಕು, ವ್ಯಾಪರಸ್ಥರಿಗೆ ತಮ್ಮ ತರಕಾರಿಗಳನ್ನು ಸುರಕ್ಷಿತವಾಗಿಡಲು ಕಾಂಪ್ಲೆಕ್ಸ್ ಮಾಡಿಕೋಡಬೇಕು, ರಾತ್ರಿ ಹೊತ್ತಿನಲ್ಲಿ ಮಾರುಕಟ್ಟೆಯಲ್ಲಿ ಲೈಟ್‍ನ ವ್ಯವಸ್ಥೆಯಾಗಬೇಕು, ಮಾರ್ಕೆಟಿನ ಸುತ್ತ-ಮುತ್ತ ಕಾಂಪೌಂಡ ಮತ್ತು ಗೇಟಿನ ವ್ಯವಸ್ಥೆಯಾಗ ಬೇಕೆಂದು ಮನವಿಯಲ್ಲಿ ಸಲ್ಲಿಸಿದ್ದು ತಮ್ಮ ಬೇಡಿಕೆಗಳು ಪೂರ್ಣಗೊಳ್ಳುವರೆಗು ವ್ಯಾಪಾರಸ್ಥರು ತಮ್ಮ ತರಕಾರಿ ವ್ಯಾಪಾರವನ್ನು ಸ್ಥಗತಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.
ಮನವಿಯನ್ನು ಪಟ್ಟಣ ಪಂಚಾಯತ್ ಸಹಾಯಕಾಧಿಕಾರಿ ಲಕ್ಷ್ಮಣ ಹುಣಶ್ಯಾಳ ಸ್ವೀಕರಿಸಿದ್ದು ಈ ಸಂದರ್ಭದಲ್ಲಿ ತರಕಾರಿ ವ್ಯಾಪಾರಸ್ಥರಾದ ಬಾಳು ದೇವಮಾನಿ, ಮದರ ಬಳಿಗಾರ, ಶೇಖರ ಕುಲಗೋಡ, ಸಲೀಮ ಸನದಿ, ಸುರೇಶ ಮುಸಲ್ಮಾರಿ ಸೇರಿ 50ಕ್ಕೂ ಹೆಚ್ಚು ತರಕಾರಿ ವ್ಯಾಪಾರಸ್ಥರು ಹಾಜರಿದ್ದರು.