RNI NO. KARKAN/2006/27779|Sunday, December 22, 2024
You are here: Home » breaking news » ಘಟಪ್ರಭಾ:ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಪತ್ರಕರ್ತರಿಗೆ ಮಾಸ್ಕ ಹಾಗೂ ಸೆನಿಟೈಸರ ವಿತರಣೆ

ಘಟಪ್ರಭಾ:ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಪತ್ರಕರ್ತರಿಗೆ ಮಾಸ್ಕ ಹಾಗೂ ಸೆನಿಟೈಸರ ವಿತರಣೆ 

ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಪತ್ರಕರ್ತರಿಗೆ ಮಾಸ್ಕ ಹಾಗೂ ಸೆನಿಟೈಸರ ವಿತರಣೆ

 

 
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜೂ 18 :

 

ಮಾಸ್ಕ ಧರಿಸಿ ಕೊರೋನಾ ತೊಲಗಿಸಿ ಎಂಬ ಅಭಿಯಾನದೊಂದಿಗೆ ಜು-18 ರಂದು ಮಾಸ್ಕ ದಿನಾಚರಣೆಯನ್ನು ಸರ್ಕಾರ ಘೋಷಿಸಿರುವ ಹಿನ್ನಲೆಯಲ್ಲಿ ನ್ಯಾಯವಾದಿ ಹಾಗೂ ಬಿಜೆಪಿ ಹಿರಿಯ ಧುರೀಣರಾದ ಲಕ್ಷ್ಮಣ ತಪಸಿ ಅವರು ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಪತ್ರಕರ್ತರಿಗೆ ಮಾಸ್ಕ ಹಾಗೂ ಸೆನಿಟೈಸರಗಳನ್ನು ವಿತರಿಸಿದರು.
ಕೊರೋನಾ ದಂತಹ ಮಹಾ ಮಾರಿಯನ್ನು ನಿಯಂತ್ರಿಸಲು ಎಲ್ಲರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ ಧರಿಸುವದರೊಂದಿಗೆ ಸಾಮಾಜಿಕ ಅಂತರವನ್ನು ಕಾಯಬೇಕೆಂದು ಲಕ್ಷ್ಮಣ ತಪಸಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ಜಿ.ಎಸ್.ರಜಪೂತ, ಸುರೇಶ ಪಾಟೀಲ, ಪ್ರವೀಣ ಚುನಮುರಿ, ಹಣಮಂತ ಪಾಲಕಿ, ಚಿರಾಕಲಿಶಾ ಮಕಾನದಾರ, ರಾಜು ಕತ್ತಿ, ಶೇಖರ ರಜಪೂತ, ಕಿರಣ ವಾಲಿ, ಎಸ್.ಎಚ್.ಗಿರೆಡ್ಡಿ, ಗುರುಬಸಯ್ಯಾ ಕರ್ಪೂರಮಠ, ಪತ್ರಕರ್ತರಾದ ಸುಭಾಸ ಗಾಯಕವಾಡ, ಗಣೇಶ ಗಾಣಿಗ, ದಿಲಾವರ ಬಾಳೇಕುಂದ್ರಿ, ಸಲೀಮ ಕಬ್ಬೂರ, ರಮೇಶ ಜಿರಲಿ ಸೇರಿದಂತೆ ಅನೇಕರು ಇದ್ದರು.

Related posts: