RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಶಿಕ್ಷಕರ ವರ್ಗಾವಣೆ ನೀತಿ ನಿಯಮಾವಳಿಗಳ ಬದಲಾವಣೆಗೆ ಆಗ್ರಹಿಸಿ ಸರಕಾರಕ್ಕೆ ಮನವಿ

ಗೋಕಾಕ:ಶಿಕ್ಷಕರ ವರ್ಗಾವಣೆ ನೀತಿ ನಿಯಮಾವಳಿಗಳ ಬದಲಾವಣೆಗೆ ಆಗ್ರಹಿಸಿ ಸರಕಾರಕ್ಕೆ ಮನವಿ 

ಶಿಕ್ಷಕರ ವರ್ಗಾವಣೆ ನೀತಿ ನಿಯಮಾವಳಿಗಳ ಬದಲಾವಣೆಗೆ ಆಗ್ರಹಿಸಿ ಸರಕಾರಕ್ಕೆ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 21 :

 

ನೂತನವಾಗಿ ರಚಿಸಲ್ಪಟ್ಟಿರುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ನೀತಿ ನಿಯಮಾವಳಿಗಳಲ್ಲಿ ಸಾಕಷ್ಟು ಬದಲಾವಣೆ ಆಗಬೇಕೆಂದು ಆಗ್ರಹಿಸಿ ರಾಜ್ಯ ಸರಕಾರಿ ನೌಕರರ ಸಂಘದ ಗೋಕಾಕ ಘಟಕದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಹೊಸ ವರ್ಗಾವಣೆ ಮಾರ್ಗಸೂಚಿಯಿಂದ ಶಿಕ್ಷಕರಿಗೆ ಆಗುವ ತೊಂದರೆಗಳನ್ನು ವಿವರಿಸಿ ತಾಲೂಕಿನಲ್ಲಿ ಶೇ.25 ಖಾಲಿ ಹುದ್ದೆಗಳಿದ್ದರೆ ವರ್ಗಾವಣೆಗೆ ಅವಕಾಶವಿರುವದಿಲ್ಲ. ಬದಲಾಗಿ ಎಲ್ಲ ತಾಲೂಕುಗಳಿಗೂ ಮುಕ್ತ ಅವಕಾಶ ನೀಡಬೇಕು. ಪರಸ್ಪರ ವರ್ಗಾವಣೆಗೆ 7 ವರ್ಷ ಕಡ್ಡಾಯ ಸೇವೆ ಬದಲಾಗಿ ಈ ಮೊದಲಿನ 3 ವರ್ಷ ಸೇವೆಯಂತೆ ಮುಂದುವರೆಸುವದು. ಹೊರಗಿನ ವರ್ಗಾವಣೆ ಮೀತಿಯನ್ನು ಶೇ.2 ಬದಲಾಗಿ ಶೇ.5ಕ್ಕೆ ಹೆಚ್ಚಿಸಬೇಕು. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶಾಲೆಯ ಸೇವಾ ಅವಧಿಯನ್ನು ಪರಿಗಣಿಸಿ ಸೇವಾ ಹಿರಿತನಕ್ಕೆ ಆದ್ಯತೆ ನೀಡಬೇಕು. ಪತಿ-ಪತ್ನಿ ಪ್ರಕರಣಗಳಲ್ಲಿ ಸರಕಾರಿ ನೌಕರರಾಗಿದ್ದರೆ ಆದ್ಯತೆ ನೀಡಿ ಅರೆ ಸರಕಾರಿ ನೌಕರರಿಗೂ ಅವಕಾಶ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ವರ್ಗಾವಣೆಯಲ್ಲಿ ಪುರುಷ ಮಹಿಳೆ ತಾರತಮ್ಯ ತೆಗೆದು ಸೇವಾ ಜೇಷ್ಠತೆ ವರ್ಗಾವಣೆಯಲ್ಲಿ ಆದ್ಯತೆ ನೀಡಬೇಕು. ಹಿಂದೀ ಭಾಷಾ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಿಗೆ ಕೌನ್ಸಲಿಂಗದಲ್ಲಿ ಹುದ್ದೆಗಳ ಸಮಸ್ಯೆ ಇದ್ದು, 6 ರಿಂದ 8 ನೇ ತರಗತಿಯವರೆಗೆ ಖಾಲಿ ಹುದ್ದೆಗಳನ್ನು ನೀಡುವದು. ಮುಖ್ಯೋಪಾಧ್ಯಾಯರ ವರ್ಗಾವಣೆಯಲ್ಲಿ ಶೇಕಡಾ ಮಿತಿ ನಿಗದಿಗೊಳಿಸದೆ ಖಾಲಿ ಇರುವ ಎಲ್ಲ ಹುದ್ದೆಗಳಿಗೆ ಅವಕಾಶ ನೀಡಬೇಕು. ಪ್ರಸಕ್ತ ಸಾಲಿನಲ್ಲಿ ವಿಕಲಚೇತನ ಶಿಕ್ಷಕರಿಗೆ ಸೇವಾವಧಿಯಲ್ಲಿ ಒಂದು ಬಾರಿ ಮಾತ್ರ ವರ್ಗಾವಣೆಗೆ ಅವಕಾಶ ನೀಡಿದ್ದು ಈ ನಿಯಮವನ್ನು ರದ್ದುಗೊಳಿಸಿ ಮೊದಲಿನಂತೆ ಆದ್ಯತೆ ನೀಡಬೇಕು. ವಲಯ ವರ್ಗಾವಣೆಯಲ್ಲಿ ದಂಪತಿ ಪ್ರಕರಣಗಳಿಗೆ ವಿನಾಯಿತಿ ನೀಡುವ ಮೂಲಕ ಶಿಕ್ಷಕರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಮಾಸ್ಕ ಹಾಗೂ ಸ್ಯಾನಿಟೈಸರ್ ವಿತರಿಸಲು ರಾಜ್ಯ ಸರಕಾರಿ ನೌಕರರ ಸಂಘದ ಗೋಕಾಕ ಘಟಕದಿಂದ 10 ಸಾವಿರ ರೂ.ಗಳ ಚೆಕ್‍ನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿ.ಆರ್. ಮುರಗೋಡ, ಪದಾಧಿಕಾರಿಗಳಾದ ಬಿ.ಎ.ಮಾಲದಿನ್ನಿ, ಪಿ.ಆರ್.ಧನ್ಯಾಳಮಠ, ಎಸ್.ಬಿ.ಕಟ್ಟೀಮನಿ, ಅಶೋಕ ಮೇತ್ರಿ, ಟಿ.ಬಿ.ಬಿಲ್, ಎ.ಎಮ್.ಬಡಿಗೇರ, ಬಿ.ಎಮ್. ಶಿವಾಪೂರ ಸೇರಿದಂತೆ ಅನೇಕರು ಇದ್ದರು.

Related posts: