ಗೋಕಾಕ:ಶಿಕ್ಷಕ ಐ.ಸಿ.ಕೊಣ್ಣೂರ ಅವರ ಸೇವಾ ನಿರತ ದಿನಗಳು ಶ್ಲಾಘಿನೀಯವಾಗಿವೆ : ಬಿ.ಟಿ.ಪುಂಜಿ
ಶಿಕ್ಷಕ ಐ.ಸಿ.ಕೊಣ್ಣೂರ ಅವರ ಸೇವಾ ನಿರತ ದಿನಗಳು ಶ್ಲಾಘಿನೀಯವಾಗಿವೆ : ಬಿ.ಟಿ.ಪುಂಜಿ
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಜೂ 23 :
ಮೂವತ್ತೊಂಬತ್ತು ವರ್ಷಗಳ ಕಾಲ ಶಿಕ್ಷಕರಾಗಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ನಿಂಗಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮುಖ್ಯಶಿಕ್ಷಕ ಐ.ಸಿ.ಕೊಣ್ಣೂರ ಅವರ ಸೇವಾ ನಿರತ ದಿನಗಳು ಶ್ಲಾಘಿನೀಯವಾಗಿವೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಸಿಆರ್‍ಸಿ ಬಿ.ಟಿ.ಪುಂಜಿ ಹೇಳಿದರು.
ಸಮೀಪದ ನಿಂಗಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷ-ಸದಸ್ಯರು, ಗ್ರಾಮಸ್ಥರ ಹಾಗೂ ಶಾಲೆಯ ಶಿಕ್ಷಕರ ವತಿಯಿಂದ ಇತ್ತೀಚೆಗೆ ಶಿಕ್ಷಕ ಸೇವೆಯಿಂದ ನಿವೃತ್ತಿ ಹೊಂದಿದ ಶಾಲೆಯ ಮುಖ್ಯ ಶಿಕ್ಷಕ ಐ.ಸಿ.ಕೊಣ್ಣೂರ ಅವರ ಸೇವಾ ನಿವೃತ್ತಿ ಪ್ರಯುಕ್ತ ಸೋಮವಾರ ಜೂ.22 ರಂದು ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಣ್ಣೂರ ಅವರ ಸದ್ಗುಣ, ಒಡನಾಟ ಹಾಗೂ ಸೇವೆಯ ಕುರಿತು ಮಾತನಾಡಿದರು.
ನಿಂಗಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷ-ಸದಸ್ಯರು, ಗ್ರಾಮಸ್ಥರು ಹಾಗೂ ಶಾಲೆಯ ಶಿಕ್ಷಕರ ವತಿಯಿಂದ ಇತ್ತೀಚೆಗೆ ಶಿಕ್ಷಕ ಸೇವೆಯಿಂದ ನಿವೃತ್ತಿ ಹೊಂದಿದ ಐ.ಸಿ.ಕೊಣ್ಣೂರ ಅವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸತ್ಕರಿಸಿದರು.
ಗೋಕಾಕ ತಾಲೂಕಾ ಅಕ್ಷರ ದಾಸೋಹ ಸಹ ನಿರ್ದೇಶಕ ಎ.ಜಿ.ಮಲಬನ್ನವರ, ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷ ಶಿವಾನಂದ ಮಾಡಮಗೇರಿ, ಮಾರುತಿ ಬಡಿಗೇರ, ಖಾನಪ್ಪ ಪಟ್ಟಿಹಾಳ, ಆರ್.ಬಿ.ಬೆಟಗೇರಿ, ಎಸ್.ವೈ.ಪಾಟೀಲ, ಬಿ.ಎ.ಕೋಟಿ, ಆರ್.ಎಸ್.ಕಲ್ಲಪ್ಪನ್ನವರ, ಎಮ್.ಎಲ್.ವಗ್ಗರ, ಪ್ರಕಾಶ ಕುರಬೇಟ, ಶಾಲೆಯ ಎಸ್‍ಡಿಎಮ್‍ಸಿ ಸದಸ್ಯರು, ಶಿಕ್ಷಕರು, ಅತಿಥಿ ಶಿಕ್ಷಕರು, ಬಿಸಿಯೂಟ ಅಡುಗೆ ಸಿಬ್ಬಂದಿ, ಗ್ರಾಮದ ಗಣ್ಯರು, ಶಿಕ್ಷಣಪ್ರೇಮಿಗಳು, ಇತರರು ಇದ್ದರು.