ಗೋಕಾಕ:ಆತ್ಮ ನಿರ್ಭರ ಭಾರತ ಕರ್ನಾಟಕ ಜನಸಂವಾದ ಕಾರ್ಯಕ್ರಮ
ಆತ್ಮ ನಿರ್ಭರ ಭಾರತ ಕರ್ನಾಟಕ ಜನಸಂವಾದ ಕಾರ್ಯಕ್ರಮ
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಜೂ 23 :
ಭಾರತೀಯ ಜನತಾ ಪಾರ್ಟಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದಿಂದ ಆತ್ಮ ನಿರ್ಭರ ಭಾರತ ಕರ್ನಾಟಕ ಜನಸಂವಾದ ಹಾಗೂ ರೈತ ಆಯಾಮ ಫಲಾನುಭವಿಗಳ ವಚ್ರ್ಯುಲ್ ರ್ಯಾಲಿಯಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರತಾಪ ಸಿಂಹ ರ್ಯಾಲಿ ಉದ್ಧೇಶಿಸಿ ಮಾತನಾಡಿದರು.
ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ರೈತರನ್ನು ಉದ್ಧೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ, ಗ್ರಾಮೀಣ ಘಟಕ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಮುಖಂಡರಾದ ಭೀಮಗೌಡ ಪೋಲಿಸಗೌಡ್ರ, ಹನಮಂತ ದುರ್ಗನ್ನವರ, ಸುರೇಶ ಸನದಿ, ಲಕ್ಕಪ್ಪ ತಹಶೀಲ್ದಾರ, ಸದರಜೋಶಿ, ರಾಜು ಹಿರೇಅಂಬಿಗೇರ, ಶಿವು ಹಿರೇಮಠ, ವಿರೇಂದ್ರ ಎಕ್ಕೇರಿಮಠ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ರೈತರು ಇದ್ದರು.