ಘಟಪ್ರಭಾ:ಯಾವುದೇ ತೊಂದರೆಗಳಿಲ್ಲದೆ ಸರಳವಾಗಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ
ಯಾವುದೇ ತೊಂದರೆಗಳಿಲ್ಲದೆ ಸರಳವಾಗಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜೂ 25 :
ಕೊರೋನಾ ಭೀತಿಯ ಮಧ್ಯೆಯೂ ಗುರುವಾರದಿಂದ ಪ್ರಾರಂಭವಾದ ಎಸ್.ಎಸ್.ಎಲ್.ಸಿ ಪರೀಕ್ಷೆ ಯಾವುದೇ ತೊಂದರೆಗಳಿಲ್ಲದೆ ಇಲ್ಲಿಯ ಮಧುಕರ ದೇಶಪಾಂಡೆ ಇನಾಮದಾರ ಪ್ರೌಢ ಶಾಲೆ ಹಾಗೂ ಕೆ.ಆರ್.ಎಚ್ ಶಾಲೆಯಲ್ಲಿನ ಕೇಂದ್ರಗಳಲ್ಲಿ ಸರಳವಾಗಿ ನಡೆಯಿತು.
ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಕೊಳ್ಳಲಾಗಿದ್ದು, ಮಧುಕರ ದೇಶಪಾಂಡೆ ಇನಾಮದಾರ ಪ್ರೌಢ ಶಾಲೆಯಲ್ಲಿ 284 ವಿದ್ಯಾರ್ಥಿಳು ಹಾಗೂ ಕೆ.ಆರ್.ಎಚ್ ಶಾಲೆಯಲ್ಲಿ 325 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರು.
ಒಂದು ಗಂಟೆ ಮುಂಚೆಯ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ಮಕ್ಕಳಿಗೆ ಆರೋಗ್ಯ ಕಾರ್ಯಕರ್ತರು ಮಾಸ್ಕ ವಿತರಿಸಿ ಥರ್ಮಲ್ ಸ್ಕ್ಯಾನಿಂಗ ನಡೆಸಿದ ನಂತರ ಕೇಂದ್ರಗಳಿಗೆ ಕಳುಹಿಸಿದರು. ಬೇರೆಕಡೆಯಿಂದ ಬಂದ ಒಟ್ಟು 11 ಮಕ್ಕಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡಲ್ಲಿ ಅಂಥವರಿಗೆ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಬೇರೆ ಊರುಗಳಿಂದ ಬರುವ ಮಕ್ಕಳಿಗೆ ಬಸ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರಗಳ ಅಧೀಕ್ಷಕರಾದ ಬಿ.ಬಿ.ನಾಯಿಕ ಹಾಗೂ ಬಿ.ವಾಯ್.ಬಾವಿಮನಿ ತಿಳಿಸಿದ್ದಾರೆ.