RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಎಪಿಎಂಸಿ ಅಧ್ಯಕ್ಷರಾಗಿ ಶ್ರೀಪತಿ ಗಣೇಶವಾಡಿ ಹಾಗೂ ಉಪಾಧ್ಯಕ್ಷರಾಗಿ ಕೆಂಚಪ್ಪ ಸಕ್ರೆಪ್ಪಗೋಳ ಅವಿರೋಧ ಆಯ್ಕೆ

ಗೋಕಾಕ:ಎಪಿಎಂಸಿ ಅಧ್ಯಕ್ಷರಾಗಿ ಶ್ರೀಪತಿ ಗಣೇಶವಾಡಿ ಹಾಗೂ ಉಪಾಧ್ಯಕ್ಷರಾಗಿ ಕೆಂಚಪ್ಪ ಸಕ್ರೆಪ್ಪಗೋಳ ಅವಿರೋಧ ಆಯ್ಕೆ 

ಎಪಿಎಂಸಿ ಅಧ್ಯಕ್ಷರಾಗಿ ಶ್ರೀಪತಿ ಗಣೇಶವಾಡಿ ಹಾಗೂ ಉಪಾಧ್ಯಕ್ಷರಾಗಿ ಕೆಂಚಪ್ಪ ಸಕ್ರೆಪ್ಪಗೋಳ ಅವಿರೋಧ ಆಯ್ಕೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 30:

 

ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಕಹಾಮ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಗಣೇಶವಾಡಿ ಗ್ರಾಮದ ಶ್ರೀಪತಿ ಹಾಲಪ್ಪ ಗಣೇಶವಾಡಿ ಹಾಗೂ ನಾಗನೂರಿನ ಕೆಂಚಪ್ಪ ಕೃಷ್ಣಪ್ಪ ಸಕ್ರೆಪ್ಪಗೋಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದಿಲ್ಲಿ ನಡೆದ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ತಲಾ ಒಬ್ಬೊಬ್ಬರು ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಪ್ರಕಟಿಸಿದರು.
ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ದಿಗ್ಧರ್ಶಕ ಮಂಡಳಿ ಸದಸ್ಯರಾದ ಬಸವರಾಜ ಸಾಯನ್ನವರ, ಮಾರುತಿ ಹರಿಜನ, ಲಕ್ಷ್ಮೀಬಾಯಿ ಕೊಂಗಾಲಿ, ಪರಸಪ್ಪ ಚೌಕಾಶಿ, ಅಕ್ಕವ್ವ ಬಾಂವಿಹಾಳ, ಶಂಕರ ಹುರಕಡ್ಲಿ, ರೇವಣಸಿದ್ಧ ಕಣಕಿಕೋಡಿ, ಬಾಹುಬಲಿ ಪಾಟೀಲ, ಮಹಾಂತೇಶ ಕಲ್ಲೋಳಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎಪಿಎಂಸಿಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅಭಿನಂದಿಸಿದರು. ಎಪಿಎಂಸಿ ಕಾರ್ಯದರ್ಶಿ ಬಿ.ಆರ್. ಜಾಲಿಬೇರಿ, ಸಹಾಯಕ ಕಾರ್ಯದರ್ಶಿಗಳಾದ ಎಸ್.ಎಸ್. ಮಾಳವಾಡಿ ಮತ್ತು ಆರ್.ಎಂ. ದೊಡಮನಿ ಉಪಸ್ಥಿತರಿದ್ದರು.
ಎಪಿಎಂಸಿ ಅಭಿವೃದ್ಧಿಗೆ ಪ್ರಯತ್ನ : ಜಾರಕಿಹೊಳಿ ಸಹೋದರರ ಮಾರ್ಗದರ್ಶನದಲ್ಲಿ ಎಪಿಎಂಸಿ ಅಭಿವೃದ್ಧಿಗೆ ಶ್ರಮಿಸುವುದಾಗಿ ನೂತನ ಅಧ್ಯಕ್ಷ ಶ್ರೀಪತಿ ಗಣೇಶವಾಡಿ ತಿಳಿಸಿದರು.
ಚುನಾವಣೆ ನಂತರ ಸಭಾಗೃಹದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ವಿವಿಧ ಸಂಘ-ಸಂಸ್ಥೆಗಳಿಗೆ ಚುನಾವಣೆ ನಡೆಸದೇ ಒಮ್ಮತದ ಮೂಲಕ ಅವಿರೋಧವಾಗಿ ಆಯ್ಕೆ ಮಾಡುವ ಸಂಪ್ರದಾಯವನ್ನು ಜಾರಕಿಹೊಳಿ ಸಹೋದರರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಅಧಿಕಾರ ಕಲ್ಪಿಸಿಕೊಡುವ ಮೂಲಕ ಸಾಮಾಜಿಕ ನ್ಯಾಯವನ್ನು ಪರಿಪಾಲನೆ ಮಾಡುತ್ತಿದ್ದಾರೆ. ಅಭಿವೃದ್ಧಿಯೇ ನಮ್ಮ ಪರಮ ಗುರಿಯಾಗಿದ್ದು, ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಎಪಿಎಂಸಿ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಿರಿಯರು, ವರ್ತಕರು ಹಾಗೂ ರೈತರ ಸಹಕಾರದೊಂದಿಗೆ ಸಂಘದ ಏಳ್ಗೆಗೆ ದುಡಿಯುವುದಾಗಿ ಶ್ರೀಪತಿ ಗಣೇಶವಾಡಿ ಹೇಳಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ಕೆಂಚಪ್ಪ ಸಕ್ರೆಪ್ಪಗೋಳ, ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಪ್ರಭಾಶುಗರ ನಿರ್ದೇಶಕ ಶಿವಲಿಂಗ ಪೂಜೇರಿ, ಪರಸಪ್ಪ ಬಬಲಿ, ದಾಸಪ್ಪ ನಾಯಿಕ, ನಿಂಗಪ್ಪ ಕುರಬೇಟ, ನರಸಪ್ಪ ನಿಡಸೋಶಿ, ಮಹಾದೇವ ಭಂಗಿ, ಎಪಿಎಂಸಿ ಆಡಳಿತ ಮಂಡಳಿ ಸದಸ್ಯರು, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Related posts: