RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಆರೋಗ್ಯ ಇಲಾಖೆಯ ವೈದ್ಯರಿಗೆ ಸಿ.ಜೆ.ಎಸ್.ಎಚ್ ಸ್ಕೇಲ್ ಅಡಿ ವೇತನ ನೀಡಿ : ಡಾ.ರವೀಂದ್ರ ಅಂಟಿನ

ಗೋಕಾಕ:ಆರೋಗ್ಯ ಇಲಾಖೆಯ ವೈದ್ಯರಿಗೆ ಸಿ.ಜೆ.ಎಸ್.ಎಚ್ ಸ್ಕೇಲ್ ಅಡಿ ವೇತನ ನೀಡಿ : ಡಾ.ರವೀಂದ್ರ ಅಂಟಿನ 

ಆರೋಗ್ಯ ಇಲಾಖೆಯ ವೈದ್ಯರಿಗೆ ಸಿ.ಜೆ.ಎಸ್.ಎಚ್ ಸ್ಕೇಲ್ ಅಡಿ ವೇತನ ನೀಡಿ : ಡಾ.ರವೀಂದ್ರ ಅಂಟಿನ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 1 :

 

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ವೈದ್ಯರಿಗೂ ಸಹ ಸಿ.ಜೆ.ಎಸ್.ಎಚ್ ಸ್ಕೇಲ್ ಅಡಿಯಲ್ಲಿ ವೇತನ ನೀಡಲು ಸರಕಾರ ಕ್ರಮ ಜರುಗಿಸಬೇಕೆಂದು ಮುಖ್ಯ ವೈದ್ಯಾಧಿಕಾರಿ ಡಾ‌. ರವೀಂದ್ರ ಅಂಟಿನ ಹೇಳಿದರು

ಬುಧವಾರದಂದು ನಗರದ ಸರಕಾರಿ ಆಸ್ಪತ್ರೆಯ ಗಣಪತಿ ಗುಡಿಯ ಆವರಣದಲ್ಲಿ ಜರುಗಿದ ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಅವರು ತುರ್ತು ಪರಿಸ್ಥಿತಿಯಲ್ಲಿ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ವೈದ್ಯರ ಕಷ್ಟಗಳನ್ನು ಸರಕಾರ ಅರ್ಥಮಾಡಿಕೊಂಡು ಕೇಂದ್ರದಲ್ಲಿ ಜಾರಿ ಇರುವ ಸಿ.ಜೆ.ಎಸ್.ಎಚ್ ಸ್ಕೇಲ್ ಅಡಿಯಲ್ಲಿ ರಾಜ್ಯ ಸರಕಾರದ ವೈದ್ಯರಿಗೆ ವೇತನ ನೀಡಲು ಕ್ರಮ ಜರುಗಿಸಬೇಕು ಎಂದು ಡಾ. ರವೀಂದ್ರ ಅಂಟಿನ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕಾ ವೈದ್ಯಾಧಿಕಾರಿ ಡಾ‌ ಜಗದೀಶ ಜಿಂಗಿ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಜೋರಾಗಿ ನಡೆದಿದೆ‌. ಇದರಿಂದ ಹೊರ ಬರಬೇಕಾದರೆ ಸರಕಾರ ಹಾಗೂ ಆರೋಗ್ಯ ಇಲಾಖೆ ನೀಡುವ ನಿರ್ದೇಶನಗಳನ್ನು ಚಾಚು ತಪ್ಪದೆ ಪಾಲಿಸಿ, ಸಮಾಜಿಕ ಅಂತರ ಕಾಪಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೊರೋನಾ ಮಹಾಮಾರಿಯಲ್ಲಿ ಜೀವ ಕಳೆದುಕೊಂಡ , ಮತ್ತು ಚೀನಾದ ಗಡಿ ಹುತಾತ್ಮರಾದ ವೀರ ಯೋಧರ ನೆನಪಿನಲ್ಲಿ ಒಂದು ನಿಮಿಷಗಳ ಕಾಲ ಮೌನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮವನ್ನು ಬಸನಗೌಡ ಈಶ್ವರಪ್ಪಗೋಳ ನಿರೂಪಿಸಿದರು. ಆರ್.ಜಿ.ಬಸಾಪೂರ ಸ್ವಾಗತಿಸಿ , ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ವಾಗಮೋಡೆ , ಡಾ.ಶಾಂತಕುಮಾರ, ಡಾ. ಕೋಣಿ, ಡಾ. ಬಾಗಲಕೋಟ, ಡಾ. ಸನದಿ, ಡಾ. ಸಾವಿತ್ರಿ ಚೌಗಲಾ , ಡಾ. ದಂಡಿನ , ಡಾ.ಪ್ರೀತಿ, ಡಾ.ಪಟ್ಟಣ, ಡಾ.ಅಂಗಡಿ, ಡಾ. ಎಂ.ಬಿ ಮದಬಾಂವಿ ಸೇರಿದಂತೆ ಇತರರು ಇದ್ದರು‌.

Related posts: