ನೇಗಿನಹಾಳ:ಮತ್ತೆ ಕಾಂಗ್ರೇಸ್ ನತ್ತ ಬಾಬಾಸಾಹೇಬ ಪಾಟೀಲ ನೇಗಿನಹಾಳದಲ್ಲಿ ಕಾಂಗ್ರೇಸ್ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಬಾಬಾಸಾಹೇಬ ಪಾಟೀಲ ಬೆಂಬಲ
ಮತ್ತೆ ಕಾಂಗ್ರೇಸ್ ನತ್ತ ಬಾಬಾಸಾಹೇಬ ಪಾಟೀಲ
ನೇಗಿನಹಾಳದಲ್ಲಿ ಕಾಂಗ್ರೇಸ್ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಬಾಬಾಸಾಹೇಬ ಪಾಟೀಲ ಬೆಂಬಲ
ನಮ್ಮ ಬೆಳಗಾವಿ ಇ – ವಾರ್ತೆ, ನೇಗಿನಹಾಳ ಜು 1 :
2018ರ ವಿಧಾನಸಭಾ ಚುಣಾವಣೆಯಲ್ಲಿ ಚನ್ನಮ್ಮನ ಕಿತ್ತೂರ ಮತಕ್ಷೇತ್ರದಿಂದ ಕಾಂಗ್ರೇಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಾಬಾಸಾಹೇಬ ಪಾಟೀಲರು ಇಂದು ಡಿ.ಕೆ ಶಿವಕುಮಾರ ಹಾಗೂ ಇತರ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಬಾಹ್ಯ ಬೆಂಬಲ ಸೂಚಿಸುವುದರೊಂದಿಗೆ ಕ್ಷೇತ್ರದ ಸುಮಾರು 20 ಸ್ಥಳಗಳಲ್ಲಿ ಬಾಬಾಸಾಹೇಬ ಪಾಟೀಲ ಅಭಿಮಾನಿ ಬಳಗದಿಂದ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ ಬ್ಯಾನರ್ ಗಳನ್ನು ಹಾಕಿ ಕಾರ್ಯಕ್ರಮ ವಿಕ್ಷೀಸಿದರು.
ಕಾಂಗ್ರೇಸ್ ನಿಂದ ಜಿ.ಪಂ ಸದಸ್ಯರಾಗಿ ಹತ್ತಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಇಂದು ಅವರ ಮಡದಿಯು ಸಹ ಕಾಂಗ್ರೇಸ್ ನಿಂದ ಜಿ.ಪಂ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಕಾಂಗ್ರೇಸ್ ಅಭ್ಯರ್ಥಿ ಎಂದು ಕೊನೆಯ ಕ್ಷಣದವರಿಗೂ ಕ್ಷೇತ್ರದಲ್ಲಿ ಪ್ರಚಾರಗೈದಿದ್ದರು. ಆದರೆ ಆಡಳಿತದ ಪಕ್ಷವಾಗಿದ್ದ ಕಾಂಗ್ರೇಸ್ ಹಾಲಿ ಶಾಸಕ ಡಿ.ಬಿ ಇನಾಮದಾರರಿಗೆ ಮರಳಿ ಟಿಕೇಟ್ ನೀಡಿದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಮಾರು 28,000 ಮತಗಳ ಪಡೆದು ಸೊಲ ಅನುಭವಿಸಿದ್ದರು. ಮತ್ತೆ ಕೆಲವೇ ದಿನಗಳಲ್ಲಿ ನಡೆದ ಉಪಚುಣಾವಣೆಗಳಲ್ಲಿ ಕಾಂಗ್ರೇಸ್ ನಾಯಕರೊಂದಿಗೆ ಪ್ರಚಾರಕ್ಕೆ ತೆರಳಿದ್ದರು ಮರಳಿ ಕಾಂಗ್ರೇಸ್ ಟಿಕೇಟ್ ಪಡೆಯುವ ಭರವಸೆಯಲ್ಲಿ ಮತ್ತೆ ಕಾಂಗ್ರೇಸ್ ಬಾಗಿಲು ಬಡೆದಿದ್ದಾರೆ.
ಬಾಬಾಸಾಹೇಬ ಪಾಟೀಲರು ತಮ್ಮ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು ಕ್ಷೇತ್ರದಲ್ಲಿ ಕಾಂಗ್ರೇಸ್ ಹಿಡಿತ ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ನೆರೆ ಹಾವಳಿ, ಕೊರೊನಾ ಸಂಬಂಧಿಸಿದಂತೆ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂಧಿಸಿದರು. ಕೆಲವೇ ದಿನಗಳ ಹಿಂದೆ ಬೈಲಹೊಂಗಲ ಎ.ಪಿ.ಎಂ.ಸಿ ಅದ್ಯಕ್ಷ ಸ್ಥಾನ ತಮ್ಮ ಬೆಂಬಲಿಗನಿಗೆ ಒದಗಿಸಿದ್ದು ಸಹ ಗಮನಾರ್ಹ ವಿಷಯ. ಕಾಂಗ್ರೇಸ್ ನಿಂದ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸುತ್ತ ಬರುತ್ತಿದ್ದಾರೆ. ಹಾಲಿ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ಕ್ಷೇತ್ರದಲ್ಲಿ ಸ್ಟಾರ್ ನಾಯಕರಾಗಿದ್ದು, ಪ್ರತಿದಿನ ಕ್ಷೇತ್ರದಲ್ಲಿ ಜನಸಾಮಾನ್ಯ ಮಹಿಳೆಯರೊಂದಿಗೆ ಚಟುವಟಿಕೆಯಲ್ಲಿ ಇರುತ್ತರೆ.
ಹಲವಾರು ವರ್ಷಗಳಿಂದ ಕಾಂಗ್ರೇಸ್ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ಪ್ರತಿದಿನ ಕ್ಷೇತ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತಾ ಬಂದಿದ್ದೇನೆ. ಕ್ಷೇತ್ರದಲ್ಲಿನ ವಾಸ್ತವ ಸಮಸ್ಯೆಗಳನ್ನು ಕಂಡಿದ್ದು ಕಾಂಗ್ರೇಸ್ ಪಕ್ಷದಲ್ಲಿದ್ದಾಗ ಹಿರಿಯ ನಾಯಕರ ಗಮನಕ್ಕೆ ತಂದು ಹಲವಾರು ಯೋಜನೆಗಳಿಗೆ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದ್ದೇನೆ. ಪಕ್ಷದ ವರಿಷ್ಠರು, ಹಿರಿಯ ನಾಯಕರು ಪಕ್ಷಕ್ಕೆ ಮರಳಿ ಬರಲು ಒಪ್ಪಿಗೆ ನೀಡಿದ್ದಾರೆ. ಅವರೆಲ್ಲರ ಮಾರ್ಗದಶನದಲ್ಲಿ ಮತ್ತೆ ಕಿತ್ತೂರಿನಲ್ಲಿ ಕಾಂಗ್ರೇಸ್ ಪಕ್ಷ ಕಟ್ಟಿ ಬೆಳೆಸುತ್ತೇನೆ.
ಬಾಬಾಸಾಹೇಬ ಪಾಟೀಲ ಮಾಜಿ ಜಿ.ಪಂ ಸದಸ್ಯರು.