RNI NO. KARKAN/2006/27779|Sunday, January 5, 2025
You are here: Home » breaking news » ಬೆಳಗಾವಿ:ಸಿಎಂ ಲಿಂಗಾಯತರನ್ನ ದಾರಿ ತಪ್ಪಿಸುತ್ತಿದ್ದಾರೆ : ಸಂಸದ ಅಂಗಡಿ ಆರೋಪ

ಬೆಳಗಾವಿ:ಸಿಎಂ ಲಿಂಗಾಯತರನ್ನ ದಾರಿ ತಪ್ಪಿಸುತ್ತಿದ್ದಾರೆ : ಸಂಸದ ಅಂಗಡಿ ಆರೋಪ 

ಸಿಎಂ ಲಿಂಗಾಯತರನ್ನ ದಾರಿ ತಪ್ಪಿಸುತ್ತಿದ್ದಾರೆ : ಸಂಸದ ಅಂಗಡಿ ಆರೋಪ

ಬೆಳಗಾವಿ ಅ 26: ನಗರದಲ್ಲಿ ಮೋನ್ನೆ ನಡೆದ ಸಮಾವೇಶ ಲಿಂಗಾಯತ ಸಮಾವೇಶವಲ್ಲಾ ಅದೊಂದು ಕಾಂಗ್ರೇಸ ಸಮಾವೇಶ ಆದುದರಿಂದ ಆ ಸಮಾವೇಶಕ್ಕೆ ಹೋಗಿರಲಿಲ್ಲ ಎಂದು ಸಂಸದ ಸುರೇಶ ಅಂಗಡಿ ಹೇಳಿದ್ದಾರೆ

ಪತ್ರಿಕಾಗೋಷ್ಠಿಲ್ಲಿ ಮಾತನಾಡಿದ ಅವರು, ಬಸವಣ್ಣನವರು 790ಜಾತಿಗಳನ್ನ ಒಂದು ಗೂಡಿಸಿದ್ದರು. ಜಗತ್ತಿಗೆ ಬಸವಣ್ಣನವರನ್ನ ನೋಡುವ ಹಾಗೆ ಪರಿಚಯ ಮಾಡಿ ಕೊಟ್ಟವರು ನಾವು. ಹೀಗಾಗಿ ಸಂಕುಚಿತ ಮನೋಭಾವದವರು ಸಮಾಜದ ದಿಕ್ಕು ತಪ್ಪಿಸಬಾರದು ಎಂದು ಅಂಗಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ಸಿಎಂ ಲಿಂಗಾಯತರನ್ನ ದಾರಿ ತಪ್ಪಿಸುತ್ತಿದ್ದಾರೆ. ಹಾಗೇ ಮಠಾಧೀಶರನ್ನ ಕಾಂಗ್ರೆಸಿಗರು ತಪ್ಪುದಾರಿಗೆ ಎಳೆದಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಎಲ್ಲ ಪ್ರಜ್ಞಾವಂತರು ಕೂಡಿ ಚರ್ಚೆ ಮಾಡಬೇಕು. ಅಲ್ಲದೆ, ಸಮಾವೇಶದಲ್ಲಿ ಭಾಗವಹಿಸಿದ್ದ ಮಠಾಧೀಶರು ನಾವು ಹಿಂದುಗಳೊ ಅಥವಾ ಲಿಂಗಾಯತರೊ ಅನ್ನೋದನ್ನ ಸ್ಪಷ್ಟಪಡಿಸಬೇಕು ಎಂದು ಸಂಸದ ಅಂಗಡಿ ಒತ್ತಾಯಿಸಿದ್ದಾರೆ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸ್ವಾಮೀಜಿಗಳು ಕಾಂಗ್ರೆಸ್‌ ಪರ ಇರಬಹುದು. ಅವರು ಸಮಾವೇಶದಲ್ಲಿ ಹಾಕಿದ್ದ ಟೋಪಿ ಕಾಂಗ್ರೆಸ್ ಟೋಪಿ. ನಾಗನೂರು ಸ್ವಾಮೀಜಿ ನನಗೆ ಲಿಂಗ ಕಟ್ಟಿದ್ದರೂ ಅವರೇ ನನಗೆ ಹಿಂದೂ ಎಂದು ಹೇಳಿದ್ದರು. ಈಗ ಅವರೇ ನನಗೆ ಸ್ಪಷ್ಟನೆ ನೀಡಬೇಕು. ಇಲ್ಲವಾದ್ರೆ ಅವರು ಮಸೀದಿ ಕಟ್ಟಿಕೊಳ್ಳಲಿ ಎಂದು ಅಂಗಡಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ

Related posts: