RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಒಗ್ಗಟ್ಟಿದ್ದಲ್ಲಿ ಮಾತ್ರ ಸಂಘಟನೆಗಳು ಬೆಳೆಯಲು ಸಾಧ್ಯ : ಮುರುಘರಾಜೇಂದ್ರ ಮಹಾಸ್ವಾಮಿಗಳು

ಗೋಕಾಕ:ಒಗ್ಗಟ್ಟಿದ್ದಲ್ಲಿ ಮಾತ್ರ ಸಂಘಟನೆಗಳು ಬೆಳೆಯಲು ಸಾಧ್ಯ : ಮುರುಘರಾಜೇಂದ್ರ ಮಹಾಸ್ವಾಮಿಗಳು 


ಒಗ್ಗಟ್ಟಿದ್ದಲ್ಲಿ ಮಾತ್ರ ಸಂಘಟನೆಗಳು ಬೆಳೆಯಲು ಸಾಧ್ಯ : ಮುರುಘರಾಜೇಂದ್ರ ಮಹಾಸ್ವಾಮಿಗಳು

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 5 :

 

ಒಗ್ಗಟ್ಟು, ಸಹಕಾರ ಹಾಗೂ ಏಕತಾ ಮನೋಭಾವನೆ ಇದ್ದಲ್ಲಿ ಮಾತ್ರ ಸಂಘಟನೆಗಳು ಬಲಾಢ್ಯವಾಗಲು ಸಾಧ್ಯವೆಂದು ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಗೋಕಾಕ ತಾಲೂಕಾ ಶ್ಯಾಮಿಯಾನ, ಸೌಂಡ್ ಮತ್ತು ಡೆಕೋರೇಟರ್ಸ್ ಮಾಲೀಕರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಗ್ಗಟ್ಟಿನಿಂದ ಮಾತ್ರ ಸಂಘಟನೆಗಳು ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಏಳು ವರ್ಣದ ಕಾಮನಬಿಲ್ಲು ನೋಡುಗರನ್ನು ಯಾವ ರೀತಿಯಾಗಿ ಆಕರ್ಷಿಸುತ್ತದೆಯೋ ಹಾಗೆಯೇ ಹೊಸದಾಗಿ ಅಸ್ಥಿತ್ವಕ್ಕೆ ಬಂದಿರುವ ಈ ಸಂಘಟನೆಯೂ ಕೂಡ ಆಕರ್ಷಿತವಾಗಿ ಉತ್ತರೋತ್ತರವಾಗಿ ಬೆಳೆಯಲಿ. ಒಗ್ಗಟ್ಟು ಮನೋಭಾವ ಪ್ರದರ್ಶಿಸುವ ಮೂಲಕ ಇತರರಿಗೆ ಮಾದರಿಯಾಗಲಿ. ಕಾಮನಬಿಲ್ಲಿನ ಬಣ್ಣದ ಒಗ್ಗಟ್ಟಿರಲಿ ಎಂದು ಸ್ವಾಮೀಜಿಗಳು ಸಂಘಟನೆಗೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಬಸವರಾಜ ಹತ್ತರಕಿ(ಗೋಕಾಕ ಸಪ್ಲಾಯರ್ಸ್) ಮಾತನಾಡಿ, ಜಗತ್ತಿನಾಧ್ಯಂತ ವ್ಯಾಪಿಸಿರುವ ಕೊರೋನಾ ವೈರಸ್ ಸಂದರ್ಭದಲ್ಲಿ ಶ್ಯಾಮಿಯಾನ, ಸೌಂಡ್ ಮತ್ತು ಡೆಕೋರೇಟರ್ಸ್ ಕಾರ್ಮಿಕರ ಸ್ಥಿತಿಯೂ ಕೂಡ ಚಿಂತಾಜನಕವಾಗಿದ್ದು, ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದೇವೆ. ಈ ದೃಷ್ಟಿಯಿಂದ ಸಂಘಟನೆಯ ಸದಸ್ಯರ ಹಾಗೂ ಕಾರ್ಮಿಕರಿಗೆ ಆರ್ಥಿಕ ನೆರವು ಕಲ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕರಾದ ಸತೀಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ಮೂಲಕ ಸರ್ಕಾರಕ್ಕೆ ಮನವಿಯನ್ನು ಕೂಡ ಮಾಡಿಕೊಳ್ಳಲಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಈ ಸಂಘಟನೆಯನ್ನು ಬಲವರ್ಧನೆಗೊಳಿಸೋಣ ಎಂದು ಹೇಳಿದರು.
ಘಟಪ್ರಭಾ ಸಬ್ ಇನ್ಸ್‍ಪೆಕ್ಟರ್ ಹೆಚ್.ವಾಯ್. ಬಾಲದಂಡಿ, ಕರವೇ ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ, ಸಂಘಟನೆಗೆ ಶುಭ ಕೋರಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಪುಂಡಲೀಕ ಗೌಳಿ, ಉಪಾಧ್ಯಕ್ಷ ಬಸವರಾಜ ಅಂಬನ್ನವರ, ಆನಂದ ಹಟ್ಟಿಗೌಡರ, ಬಸವರಾಜ ಎಮ್ಮಿ, ವಿಠ್ಠಲ ಸೂರ್ಯವಂಶಿ, ನ್ಯಾಯವಾದಿ ಸದಾನಂದ ದೊಡಮನಿ, ಸಂಘಟನೆಯ ಮುಜಮಿಲ್ ಕುರಬೇಟ, ಜಾವೇದ ಪಟೇಲ್, ಅರ್ಜುನ ನಾಶಿ, ಗಿರಿಯಪ್ಪ ದುರದುಂಡಿ, ಗಿರೆಪ್ಪ ಸಿಂಗೋಟಿ, ಮಾರುತಿ ಚಿಪ್ಪಲಕಟ್ಟಿ, ಕರೆಪ್ಪ ನಂದಿ, ರಂಗಪ್ಪ ನಿಂಗನ್ನವರ, ಮಲೀಕ ರಾಜಾಪೂರ, ಲಕ್ಕಪ್ಪ ಹಾದಿಮನಿ, ಮೈಬೂಬ ಸೈಯ್ಯದ, ರಾಜು ಪಣಿಬಂಧ, ಶಹಬಾಜ್ ಖಾಜಿ, ಹನಮಂತಪ್ಪ ದಳವಾಯಿ, ಆನಂದ ಜರತಾರಕರ, ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts: