RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ನಮ್ನ ದುಡ್ಡಿನಿಂದ ಕುಕ್ಕರ್ ಹಂಚಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಿದೆ : ಹೆಬ್ಬಾಳಕರ ವಿರುದ್ಧ ಮತ್ತೆ ಗುಡುಗಿದ ಸಚಿವ ರಮೇಶ

ಬೆಳಗಾವಿ:ನಮ್ನ ದುಡ್ಡಿನಿಂದ ಕುಕ್ಕರ್ ಹಂಚಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಿದೆ : ಹೆಬ್ಬಾಳಕರ ವಿರುದ್ಧ ಮತ್ತೆ ಗುಡುಗಿದ ಸಚಿವ ರಮೇಶ 

ನಮ್ನ ದುಡ್ಡಿನಿಂದ ಕುಕ್ಕರ್ ಹಂಚಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಿದೆ : ಹೆಬ್ಬಾಳಕರ ವಿರುದ್ಧ ಮತ್ತೆ ಗುಡುಗಿದ ಸಚಿವ ರಮೇಶ

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಜು 7 :

 

ಕಳೆದ ಚುನಾವಣೆಯಲ್ಲಿ ಕೊಟ್ಟ ಕುಕ್ಕರ್ ಇನ್ನೂ ಚೆನ್ನಾಗಿದೆಯಾ? ನನ್ನ ದುಡ್ಡಿನಿಂದ ಇಲ್ಲಿ ಕುಕ್ಕರ್ ಹಂಚಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಹಾಕಿದರು.‌

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾದ ವಿಜಯನಗರದಲ್ಲಿ ಮಂಗಳವಾರ ಬಿಜೆಪಿ ಗ್ರಾಮೀಣ ಮಂಡಲ ಕಚೇರಿ ಉದ್ಘಾಟಿಸಿ ಅವರು ಮಾತನಾಡಿ, ಕಳೆದ ಚುನಾವಣೆಯಲ್ಲಿ ನಮ್ನ ದುಡ್ಡಿನಿಂದ ಕುಕ್ಕರ್ ಹಂಚಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಿದೆ ಎಂದು ಗುಡುಗಿದರು.

ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಕೊಟ್ಟ ಕುಕ್ಕರ್ ಇನ್ನೂ ಚೆನ್ನಾಗಿದೆಯಾ ಎಂದು ಶಾಸಕಿ ಹೆಬ್ಬಾಳ್ಕರ ಬಗ್ಗೆ ವ್ಯಂಗ್ಯವಾಡಿದ ರಮೇಶ ಜಾರಕಿಹೊಳಿ‌, ಕಳೆದ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ನಾನು ಪ್ರಯತ್ನ ಮಾಡಿದ್ದೆ. ನನ್ನಿಂದ ಮಾಜಿ ಬಿಜೆಪಿಯ ಶಾಸಕ ಸಂಜಯ ಪಾಟೀಲ್ ಗೆ ಅನ್ಯಾಯ ಆಗಿದೆ ಎಂದರು.

ಬಿಜೆಪಿ ಕಾರ್ಯಕರ್ತರು ಸ್ವತಃ ಹಣದಿಂದ ಕಾರ್ಯಾಲಯ ಮಾಡಿದ್ದಾರೆ. ಗ್ರಾಮೀಣ ಕ್ಷೇತ್ರದಲ್ಲಿ 2023ರಲ್ಲಿ ಇತಿಹಾಸ ಸೃಷ್ಟಿ ಮಾಡಬೇಕಿದೆ. ಇದು ರಮೇಶ ಜಾರಕಿಹೊಳಿ, ಸುರೇಶ ಅಂಗಡಿಯಿಂದ ಸಾಧ್ಯವಿಲ್ಲ. ಕಾರ್ಯಕರ್ತರು ಇದಕ್ಕಾಗಿ ಸಿದ್ಧರಾಗಬೇಕು. ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡುವ ಶಕ್ತಿ ಕಾರ್ಯಕರ್ತರಿಗೆ ಇದೆ.

ಗ್ರಾಮೀಣ ಭಾಗದ ಶಾಸಕರಿಗೆ ಹಣದ ಅಹಂಕಾರ ಇದೆ. ಈ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಗೆಲ್ಲಲು ಎಲ್ಲ ರೀತಿಯ ಸಹಾಯ ಮಾಡಲು ನಾನು ಸಿದ್ಧ. ಯಾವುದೇ ಆಮಿಷಕ್ಕೆ ಬಲಿಯಾಗಬೇಡಿ. 2023ರಲ್ಲಿ ಗ್ರಾಮೀಣದಲ್ಲಿ ಬಿಜೆಪಿ ಧ್ವಜ ಹಾರಿಸಲೇಬೇಕು. ಡಿಸಿಸಿ ಬ್ಯಾಂಕ್, ಜಿಪಂ ಸೇರಿ ಎಲ್ಲ ಚುನಾವಣೆಯಲ್ಲಿ ಗೆಲ್ಲಬೇಕು. ಕಾಂಗ್ರೆಸ್ ‌ನವರು ಎಷ್ಟು ದುಡ್ಡು ಕೊಡುತ್ತಾರೋ ಅದಕ್ಕಿಂತ ಹೆಚ್ಚು ನಾನು ಕೊಡುತ್ತೇನೆ.‌ ನಮ್ಮದು ಬೆವುರು ಸುರಿಸಿ ದುಡಿದ ದುಡ್ಡು. ಅವರ ಹಾಗೆಯೇ ಹರಾಮಿ ಬಂದ ದುಡ್ಡಲ್ಲ.‌ ಇದು ಅಹಂಕಾರದ ಮಾತಲ್ಲ, ಸಾಲ ಮಾಡಿಯಾದರೂ ಕೊಡುತ್ತೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರಗೆ ಅವರ  ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಟಾಂಗ್ ಕೊಟ್ಟರು.

Related posts: