ಗೋಕಾಕ:ಕೊರೋನಾ ಶಂಕಿತ ಮೃತ ವೃದ್ದೆ ವರದಿ ಪಾಜಿಟಿವ ತಾಲೂಕಿನಲ್ಲಿ ಹೆಚ್ಚಿದ ಆತಂಕ
ಕೊರೋನಾ ಶಂಕಿತ ಮೃತ ವೃದ್ದೆ ವರದಿ ಪಾಜಿಟಿವ ತಾಲೂಕಿನಲ್ಲಿ ಹೆಚ್ಚಿದ ಆತಂಕ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 7 :
ಕೊರೋನಾ ಸೋಂಕಿನ ಸಾವಿನ ದವಡೆಯಿಂದ ಬಹಳ ದೂರದಲ್ಲಿ ಇದ್ದ ಗೋಕಾಕ ತಾಲೂಕು ಈಗ ಕೊಣ್ಣೂರ ಗ್ರಾಮದ ವೃದ್ಧೆಯೊಬ್ಬಳನ್ನು ಬಲಿ ಪಡೆದುಕೊಂಡಿದೆ.
ತೀವ್ರ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುತ್ತಾರೆ. ಕೊರೋನಾ ಶಂಕಿತೆ ಎಂದು ಕೊವೀಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬರುವದು ಬಾಕಿ ಇದೆ ಎಂದು ಮಂಗಳವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರನ್ನು ತಾಲೂಕಾ ವೈದ್ಯಾಧಿಕಾರಿ ಡಾ.ಜಗದೀಶ ಜಿಂಗಿ ಅವರು ತಿಳಿಸಿದ್ದರು.
ಆದರೆ ಸಂಜೆ ವೇಳೆಗೆ ಈ ವೃದ್ಧೆಯ ವರದಿಯು ಪಾಸಿಟಿವ್ ಆಗಿ ಬಂದಿದರಿಂದ ತಾಲೂಕಿನಾದ್ಯಂತ ಜನರು ಆತಂಕಗೊಂಡಿದ್ದಾರೆ. ತೀವ್ರ ಮಧುಮೇಹದಿಂದ ಬಳಲುತ್ತಿದ್ದ ವೃದ್ದೆಯು ಗೋಕಾಕ ತಾಲೂಕಿನವಳಾಗಿದ್ದು, ಮಹಿಳೆಗೆ ತೀವ್ರ ಮದುಮೇಹದ ಸಮಸ್ಯೆ ಉಂಟಾಗಿ ದೇಹದಲ್ಲಿ ಏರುಪೇರು ಆದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧುಮೇಹದ ಜೊತೆಗೆ ಜ್ವರ ಕಾಣಿಸಿಕೊಂಡ ಪರಿಣಾಮ ಜಿಲ್ಲಾ ಆಸ್ಪತ್ರೆ ವೈದ್ಯರು ರೋಗಿಯ ಗಂಟಲು ದ್ರವ್ಯವನ್ನು ಪರೀಕ್ಷೆ ಕಳುಹಿಸಿದ್ದಾರೆ. ವರದಿ ಬರುವ ಮುನ್ನವೇ ರೋಗಿಯು ಸಾವನ್ನಪ್ಪಿದ್ದಾರೆ. ಆದರೆ ಮಂಗಳವಾರ ಸಂಜೆ ಸರಕಾರದಿಂದ ಬಿಡುಗಡೆಯಾದ ವರದಿ ಪಾಜಿಟಿವ ಆಗಿ ಬಂದಿದ್ದರಿಂದ ಗೋಕಾಕ ತಾಲೂಕಿನ ಜನರಲ್ಲಿ ಆತಂಕ ಮನೆ ಮಾಡಿದೆ.