RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ನಾಳೆಯಿಂದ 4 ದಿನಗಳ ಕಾಲ ನಗರದಲ್ಲಿ ಮಧ್ಯಾಹ್ನ 1 ರಿಂದ ಬೆಳಿಗ್ಗೆ 5 ವರೆಗೆ ಶರತ್ತು ಬದ್ದ ಲಾಕಡೌನ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾಹಿತಿ

ಗೋಕಾಕ:ನಾಳೆಯಿಂದ 4 ದಿನಗಳ ಕಾಲ ನಗರದಲ್ಲಿ ಮಧ್ಯಾಹ್ನ 1 ರಿಂದ ಬೆಳಿಗ್ಗೆ 5 ವರೆಗೆ ಶರತ್ತು ಬದ್ದ ಲಾಕಡೌನ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾಹಿತಿ 

ನಾಳೆಯಿಂದ 4 ದಿನಗಳ ಕಾಲ ನಗರದಲ್ಲಿ ಮಧ್ಯಾಹ್ನ 1 ರಿಂದ ಬೆಳಿಗ್ಗೆ 5 ವರೆಗೆ ಶರತ್ತು ಬದ್ದ ಲಾಕಡೌನ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾಹಿತಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 8 :   ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂಕಿನಾದ್ಯಂತ ಗುರುವಾರದ ಮಧ್ಯಾಹ್ನ 1 ಗಂಟೆಯಿಂದ ಸೋಮವಾರದ ವರೆಗೆ ಶರತ್ತು ಬದ್ದ ಲಾಕಡೌನ ಜಾರಿಯಲ್ಲಿರುತ್ತದೆ ಎಂದು ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ ಮಂಗಳವಾರದಂದು ತಾಲೂಕಿನಲ್ಲಿ ಐದು ಕೊರೋನಾ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ನಗರದ ತಹಶೀಲ್ದಾರ್ ಕಛೇರಿ ಆವರಣದ ಹೊರಗಡೆಯೇ ಟಾಸ್ಕಪೋರ್ಸ ಕಮೀಟಿ ಸಭೆ ನಡೆಯಿಸಿ ಅವರು ಮಾತನಾಡಿದರು ಗುರುವಾರದಿಂದ ಬೆಳ್ಳಗೆ 5 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ತಾಲೂಕಿನಾದ್ಯಂತ ಕಟ್ಟು ನಿಟ್ಟಿನ ಶರತ್ತುಬದ್ದ ಲಾಕಡೌನ ಜಾರಿಯಲಿರಲಿದ್ದು ಸಾರ್ವಜನಿಕರು ಸಹಕರಿಸಬೇಕು ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಗೋಕಾಕ ನಗರಕ್ಕೆ ಬರುವ ಗ್ರಾಮಸ್ಥರನ್ನು ನಗರಕ್ಕೆ ಬರದಂತೆ ನೋಡಲ್ ಅಧಿಕಾರಿಗಳು ಕಡಿವಾಣ ಹಾಕಿ ಆಯಾ ಗ್ರಾಮಗಳಲ್ಲಿ ಡಂಗುರ ಸಾರಬೇಕು . 10 ವರ್ಷದ ಕೆಳಗಿನ ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟ ನಾಗರಿಕರು ಕಡ್ಡಾಯವಾಗಿ ಮನೆಯಲ್ಲಿ ಇದ್ದು ಅವಶ್ಯಕತೆ ಅನುಗುಣವಾಗಿ ಅಷ್ಷೆ ಮನೆಯಿಂದ ಹೋರ ಬರುವಂತೆ ಕಟ್ಟುನಿಟ್ಟಿನ ಕ್ರಮ ಕೈಗೋಳ್ಳಬೇಕು. ಶರತ್ತುಬದ್ದ ಲಾಕಡೌನ ಸಂದರ್ಭದಲ್ಲಿ ಹೋಟೆಲ್ , ಕಿರಾಣಿ ಅಂಗಡಿ , ಸಂತೆ ಸೇರಿದಂತೆ ಎಲ್ಲ.ರೀತಿಯ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಮಾಡಲಾಗುವದು. ಅಗತ್ಯ ವಸ್ತುಗಳಾದ ಹಾಲು , ತರಕಾರಿ , ಹಣ್ಣು , ಆಸ್ಪತ್ರೆಗಳು ಮತ್ತು ಔಷಧಿ ಅಂಗಡಿಗಳು ಯಾತಾ ಪ್ರಕಾರ ತನ್ನ ಕಾರ್ಯನಿರ್ವಹಿಸಲಿವೆ ಎಂದು ತಹಶೀಲ್ದಾರ ತಿಳಿಸಿದ್ದಾರೆ ಕೊಣ್ಣೂರ ಪಟ್ಟಣದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ವೃದ್ದೆಯ ಪ್ರಾಥಮಿಕ ಸಂರ್ಪಕಕ್ಕೆ ಬಂದಿರುವ 13 ಜನರಿಗೆ ಮತ್ತು ಬುಧವಾರ ಸೋಂಕು ಧೃಡಪಟ್ಟವರ ಪ್ರಾಥಮಿಕ ಸಂರ್ಪಕಕ್ಕೆ ಬಂದ 32 ಮತ್ತು ದ್ವಿತೀಯ ಸಂರ್ಪಕಕ್ಕೆ ಬಂದ 35 ಜನರನ್ನು ಹೋಮ್ ಕ್ವಾರಂಟೈನ ಮಾಡಲಾಗಿದ್ದು , ನಾಳೆಯಿಂದ 48 ಘಂಟೆಗಳ ಕಾಲ ತಹಶೀಲ್ದಾರ್ ಕಛೇರಿ ಮತ್ತು ಕೊಣ್ಣೂರ ಪಟ್ಟಣದ ಒಂದು ಖಾಸಗಿ ಆಸ್ಪತ್ರೆ ಮತ್ತು ನಗರದ ಸ್ಕ್ಯಾನಿಂಗ್ ಸೆಂಟರ್ ಮತ್ತು ಲ್ಯಾಬನ್ನು ಸೀಲಡೌನ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮದುವೆ ನಡೆಯುವ ಸ್ಥಳಗಳು ಸೋಂಕು ಹರಡುವಿಕೆ ಕೇಂದ್ರಗಳಾಗಿ ಮಾರ್ಪಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ 50 ಕ್ಕೂ ಹೆಚ್ಚು ಜನರು ಸೇರದಂತೆ ನೋಡಲ್ ಅಧಿಕಾರಿಗಳು ಕಟ್ಟನಿಟ್ಟಿನ ಕ್ರಮ ಜರಗಿಸಬೇಕು ಮತ್ತು ಮರಣ ಹೊಂದಿದ ವ್ಯಕ್ತಿಗಳ ಅಂತ್ಯಕ್ರಿಯೆ ಸಂದರ್ಭದಲ್ಲಿ ಕೆವಲ 20 ವ್ಯಕ್ತಿಗಳಿಗೆ ಮಾತ್ರ ಅವಕಾಶ ಕಲ್ಪಿ‌ಸಬೇಕು ಯಾರಾದರೂ ಕಾನೂನು ಉಲ್ಲಂಘನೆ ಮಾಡಿದರೆ ನಿರ್ಧಾಕ್ಷಣೀಯವಾಗಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಲು ಕ್ರಮ ಜರುಗಿಸಬೇಕು ಎಂದು ತಹಶೀಲ್ದಾರ ಹೋಳೆಪ್ಪಗೋಳ ತಿಳಿಸಿದ್ದಾರೆ .  

ಈ ಸಂದರ್ಭದಲ್ಲಿ ತಾಲೂಕಾ ಅಧಿಕಾರಿಗಳಾದ ಪೌರಾಯುಕ್ತರು ಶಿವಾನಂದ ಹಿರೇಮಠ , ಬಿಇಓ ಜಿ.ಬಿ‌.ಬಳಗಾರ , ಎಂ.ಎನ್.ನಧಾಫ , ಪಿಎಸ್ಐ ಅಮ್ಮಿನಬಾಂವಿ ಸೇರಿದಂತೆ ಇತರರು ಉಪಸ್ಥಿತರಿದ್ದರು

 

 

Related posts: