ಗೋಕಾಕ: ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಬಾಲುಕುಮಾರ ಅವರಿಗೆ ಕಾರಣ ಕೇಳಿ ನೋಟಿಸ್ : ಡಾ. ಜಗದೀಶ ಜಿಂಗಿ ಮಾಹಿತಿ
ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಬಾಲುಕುಮಾರ ಅವರಿಗೆ ಕಾರಣ ಕೇಳಿ ನೋಟಿಸ್ : ಡಾ. ಜಗದೀಶ ಜಿಂಗಿ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 8 :
ಕೊಣ್ಣೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಬಾಲುಕುಮಾರ ಅವರ ಬಿಮ್ಸ ಆಸ್ಪತ್ರೆಯಲ್ಲಿ ಕೊಣ್ಣೂರ ಗ್ರಾಮದ ವೃದ್ಧೆ ಒಬ್ಬರು ಕೊರೋನಾದಿಂದ ಮೃತಪಟ್ಟಿಲ್ಲ. ಆಕೆ ಮಧುಮೇಹದಿಂದ ಮೃತಪಟ್ಟಿದ್ದಾರೆ. ಆಕೆಗೆ ಬಿಮ್ಸನಲ್ಲಿ ಸರಿಯಾದ ಉಪಚಾರ ಫಲಿಸದೇ ಮೃತಪಟ್ಟಿದ್ದಾಳೆಂಬ ಹೇಳಿಕೆಗೆ ಸಂಬಂಧಪಟ್ಟಂತೆ ಡಾ.ಬಾಲಕುಮಾರ ಅವರಿಗೆ ಕಾರಣ ಕೇಳಿ ನೋಟೀಸ ನೀಡಲಾಗಿದೆ. ಅವರು ತಪ್ಪಾಗಿ ಹೇಳಿಕೆ ನೀಡಿದ್ದಾರೆ. ಅವರಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ ಜಿಂಗಿ ಅವರು ಪತ್ರಿಕೆಗೆ ತಿಳಿಸಿದ್ದಾರೆ .ಇದ್ದಲದೆ ಗೋಕಾಕ ತಾಲೂಕಿನಲ್ಲಿ ಒಟ್ಟು 5 ಪ್ರಕರಣಗಳು ಕಂಡು ಬಂದಿದ್ದು, ಗುಜನಾಳ, ಖನಗಾಂವ, ಶಿಂದಿಕುರಬೇಟ, ದುರದುಂಡಿ ಹಾಗೂ ನಗರದ ತಹಶೀಲದಾರ ಕಾರ್ಯಾಲಯದಲ್ಲಿ ಓರ್ವನಿಗೆ ಸೋಂಕು ದೃಢಪಟ್ಟಿದ್ದು ಇದರಿಂದ ಕೋರೋನಾ ವೈರಸ್ ಸಮುದಾಯದಲ್ಲಿ ಹರಡಿದೆ ಎಂದು ಸೃಷ್ಟವಾಗಿದ್ದು. ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸುವುದು ಅವಶ್ಯಕವಿದೆ. ಜನಜಂಗುಳಿ ಸೇರಿದಲ್ಲಿ ಜನರು ಹೋಗದಂತೆ ಎಚ್ಚರಿಕೆ ವಹಿಸಬೇಕೆಂದು ತಾಲೂಕಾಡಳಿತ ತಿಳಿಸಿದೆ.