ಗೋಕಾಕ:ತಾಯಿ ಮಗನಿಗೆ ಕೊರೋನಾ ಸೋಂಕು ದೃಢ : ಡಾ . ಜಗದೀಶ ಜಿಂಗಿ ಮಾಹಿತಿ
ತಾಯಿ ಮಗನಿಗೆ ಕೊರೋನಾ ಸೋಂಕು ದೃಢ : ಡಾ . ಜಗದೀಶ ಜಿಂಗಿ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 11 :
ಕೊರೋನಾ ಮಹಾಮಾರಿ ತನ್ನ ರುದ್ರನರ್ತನ ಮುಂದುವರೆಸಿದ್ದು, ನಗದಲ್ಲಿ ಮತ್ತೆ ಇಬ್ಬರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಅವರು ನಗರದ ನವಜೀವನ ಶಾಲೆಯ ಹಿಂದಿರುವ ಪ್ರದೇಶದಲ್ಲಿ ಒರ್ವ ವೃದ್ದೆ ಮತ್ತು ಅವಳ ಮಗನಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು , ಅವರು ವಾಸಿಸುವ 50 ಮೀಟರ ಪ್ರದೇಶವನ್ನು ಸಿಲ್ಡೌನ ಮಾಡಿ ಕ್ವಾಟನಮೆಂಟ್ ಝೋನ ಎಂದು ಘೋಷಿಸಲಾಗಿದ್ದು, ಸಾರ್ವಜನಿಕರು ಆ ಪ್ರದೇಶ ಒಳಗಡೆ ಮತ್ತು ಆ ಪ್ರದೇಶದಲ್ಲಿ ವಾಸಿಸುವವರು ಅಲ್ಲಿಂದ ಹೊರಗಡೆ ಬರಬಾರದು ಎಂದಿರುವ ಡಾ.ಜಿಂಗಿ ಅವರು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರಬಾರದು ಅವಶ್ಯಕತೆಗೆ ಅನುಗುಣವಾಗಿ ಹೋರಗಡೆ ಬಂದರು ಸಹ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.