RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಮಂಗಳವಾರ ರಾತ್ರಿ 8 ಘಂಟೆಯಿಂದ 8 ದಿನಗಳಕಾಲ ಗೋಕಾಕ ಮತ್ತು ಮೂಡಲಗಿ ತಾಲೂಕ ಸಂಪೂರ್ಣ ಲಾಕಡೌನ : ಸಚಿವ ರಮೇಶ ಜಾರಕಿಹೊಳಿ

ಗೋಕಾಕ:ಮಂಗಳವಾರ ರಾತ್ರಿ 8 ಘಂಟೆಯಿಂದ 8 ದಿನಗಳಕಾಲ ಗೋಕಾಕ ಮತ್ತು ಮೂಡಲಗಿ ತಾಲೂಕ ಸಂಪೂರ್ಣ ಲಾಕಡೌನ : ಸಚಿವ ರಮೇಶ ಜಾರಕಿಹೊಳಿ 

ಮಂಗಳವಾರ ರಾತ್ರಿ 8 ಘಂಟೆಯಿಂದ 8 ದಿನಗಳಕಾಲ ಗೋಕಾಕ ಮತ್ತು ಮೂಡಲಗಿ ತಾಲೂಕ ಸಂಪೂರ್ಣ ಲಾಕಡೌನ : ಸಚಿವ ರಮೇಶ ಜಾರಕಿಹೊಳಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 12 :

 

ಮಂಗಳವಾರ ರಾತ್ರಿ 8 ಘಂಟೆಯಿಂದ 8 ದಿನಗಳಕಾಲ ಗೋಕಾಕ ಮತ್ತು ಮೂಡಲಗಿ ತಾಲೂಕನ್ನು ಸಂಪೂರ್ಣ ಲಾಕಡೌನ ಮಾಡಲಾಗುವದು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು

ರವಿವಾರದಂದು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ, ಜನಪ್ರತಿನಿಧಿಗಳ ಹಾಗೂ ವ್ಯಾಪಾರಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

ಲಾಕಡೌನ ತೆರವು ಆದ ನಂತರ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸಿದ್ದರಿಂದ ಮತ್ತು ಬೇರೆ ರಾಜ್ಯಗಳಿಂದ ನಗರಕ್ಕೆ ಬಂದಿದ್ದರಿಂದ ಕೊರೋನಾ ಮಹಾಮಾರಿ ಗೋಕಾಕ ಮತ್ತು ಮೂಡಲಗಿ ತಾಲೂಕಿಗೆ ವಕ್ಕರಿಸಿದೆ. ಇದನ್ನು ತಡೆಗಟ್ಟಲು ಕೊರೋನಾ ಚೈನ್ ಮುರಿಯುವದು ಅತ್ಯಂತ ಅವಶ್ಯಕವಾಗಿದೆ ಆ ಉದ್ದೇಶದಿಂದ ನಗರದ ಎಲ್ಲಾ ಜನಪ್ರತಿನಿಧಿಗಳ ಮತ್ತು ವ್ಯಾಪಾರಸ್ಥರ ಅಭಿಪ್ರಾಯದಂತೆ 8 ದಿನಗಳ ಸ್ವಯಂ ಪ್ರೇರಿತ ಲಾಕಡೌನ ಜಾರಿಯಲ್ಲಿರಲ್ಲಿದ್ದು, ಸಾರ್ವಜನಿಕರು ಸಹಕರಿಬೇಕೆಂದು ಸಚಿವರು ಮನವಿ ಮಾಡಿಕೊಂಡರಲ್ಲದೆ ಅಗತ್ಯ ವಸ್ತುಗಳನ್ನು ಜನರಿಗೆ ತಲುಪಿಸಲು ಆಯಾ ವಾರ್ಡನ ಸದಸ್ಯರಿಗೆ ತಿಳಿಸಲಾಗುವದು ಲಾಕಡೌನ ಸಮಯದಲ್ಲಿ ಯಾರು ಅನಾವಶ್ಯಕವಾಗಿ ಮನೆಯಿಂದ ಹೋರಗಡೆ ಬರದೆ ಸಹಕರಿಸಿ ಲಾಕಡೌನನ್ನು ಯಶಸ್ವಿಗೋಳಿಸಬೇಕೆಂದು ಸಚಿವರು ವಿನಂತಿಸುತ್ತದ್ದಾರೆ.

ಅನಗತ್ಯವಾಗಿ ಹೊರಬರುವವರ ಮೇಲೆ ಕ್ರಮ: ಮಂಗಳವಾರ ರಾತ್ರಿ 8ಗಂಟೆಯಿಂದ ಜಾರಿಯಾಗಲಿರುವ ಲಾಕ್‍ಡೌನ್ ಸಮಯದಲ್ಲಿ ಅನಾವಶ್ಯಕವಾಗಿ ಸುತ್ತಾಡುವವರ ಮೇಲೆ ನಿರ್ದಾಕ್ಷಣೀಯವಾಗಿ ಕ್ರಮ ಜರುಗಿಸುವಂತೆ ಸಚಿವ ರಮೇಶ ಜಾರಕಿಹೊಳಿ ಪೋಲಿಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಮಾಸ್ಕ ಖಡ್ಡಾಯ: ನಗರದಲ್ಲಿ ಮಾಸ್ಕ ಧರಿಸದೆ ಅಂಗಡಿಕಾರರು ವ್ಯಾಪಾರ ವಹಿವಾಟು ಮಾಡಬಾರದು. ನಗರದಲ್ಲಿ ಪಾನ್, ಗುಟ್ಕಾ, ಜರ್ದಾ ಸೇವಿಸಿ ಎಲ್ಲೆಂದರಲ್ಲಿ ಉಗುಳವರ ಮೇಲೂ ಸಹ ಕೇಸ್ ದಾಖಲಿಸಲು ಕ್ರಮ ಜರುಗಿಸಲಾಗುವದು . ಮಾಸ್ಕ ಧರಿಸದವರಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸುವದಾಗಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಸೂಚನೆ ನೀಡಿದರು.

ಸತೀಶ ಜಾರಕಿಹೊಳಿ ಅವರು ಲಿಸ್ಟ್ ಕೊಟ್ಟರೆ ಕ್ರಮ ಜರುಗಿಸುತ್ತೇನೆ : ಸಚಿವ ರಮೇಶ ಜಾರಕಿಹೊಳಿ ಅವರ ಕಛೇರಿಯ ಐದು ಜನ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಮಾಡಿರುವ ಆರೋಪದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಸತೀಶ ಜಾರಕಿಹೊಳಿ ಅವರು ಲಿಸ್ಟ್ ಕೊಡಲಿ ಅವರನ್ನು ಬಂಧಿಸಲು ಹೇಳುತ್ತೇನೆ ಮೊದಲು ಅಂಬಿರಾವ ಅವರನ್ನು ಬಂಧಿಸಲು ಹೇಳುತ್ತೇನೆ ಎಂದು ಸಚಿವರ ಗೆಲಿ ಮಾಡಿದರು. ನಗರದ ಡಾ.ಹೊಸಮನಿ ಆಸ್ಪತ್ರೆಯವರು ಅಸೋಸಿಯೇಷನ್ ಮಾಡಿಕೊಂಡು ಬ್ಯ್ಲಾಕಮೇಲೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಹೇಳಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲು ಕ್ರಮ ಜರುಗಿಸಲು ಸೂಚಿಸಿದ್ದೇನೆ. ರಾಜಕೀಯ ಪ್ರೇರಣೆಯಿಂದ ಅದರಲ್ಲಿ ಭರಮನ್ನವರ ಹೆಸರು ಬಂದಿದೆ ಅಂದು ಭರಮನ್ನವರ ಇರಲಿಲ್ಲ ದುರ್ಗನ್ನವರ ಇದ್ದನು ಎಂದು ಸಚಿವರು ಹೇಳಿದರು.

ಸಭೆಯಲ್ಲಿ ಗೋಕಾಕ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ,ಮೂಡಲಗಿ ತಹಶೀಲ್ದಾರ ಡಿ.ಜಿ‌.ಮಹಾಂತ , ಡಿಎಸ್‍ಪಿ ಮನೋಜನಕುಮಾರ ನಾಯ್ಕ, ತಾ.ಪಂ ಅಧಿಕಾರಿ ಬಸವರಾಜ ಹೆಗ್ಗನಾಯಿಕ, , ಪೌರಾಯುಕ್ತ ಶಿವಾನಂದ ಹಿರೇಮಠ, ಸಿ.ಪಿ.ಐ ಗೋಪಾಲ ರಾಠೋಡ ಉಪಸ್ಥಿತರಿದ್ದರು

Related posts: