RNI NO. KARKAN/2006/27779|Tuesday, December 24, 2024
You are here: Home » breaking news » ಗೋಕಾಕ:ಬೆಂಗಳೂರಿನಲ್ಲಿ ಇಂಜನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗೋಕಾಕ ನಿವಾಸಿಗೆ ಕೊರೋನಾ ದೃಡ : ಡಾ.ಜಿಂಗಿ ಮಾಹಿತಿ

ಗೋಕಾಕ:ಬೆಂಗಳೂರಿನಲ್ಲಿ ಇಂಜನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗೋಕಾಕ ನಿವಾಸಿಗೆ ಕೊರೋನಾ ದೃಡ : ಡಾ.ಜಿಂಗಿ ಮಾಹಿತಿ 

ಬೆಂಗಳೂರಿನಲ್ಲಿ ಇಂಜನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗೋಕಾಕ ನಿವಾಸಿಗೆ ಕೊರೋನಾ ದೃಡ : ಡಾ.ಜಿಂಗಿ ಮಾಹಿತಿ

 

 

ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಜು 12 :

 

 
ಬೆಂಗಳೂರಿನಲ್ಲಿ ಇಂಜನೀಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಲ್ಲಿಯ ಬಸವ ನಗರದ ನಿವಾಸಿ, 27 ವರ್ಷದ ಯುವಕನೊರ್ವನಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಆತನೊಂದಿಗೆ ವಾಸವಾಗಿದ್ದ ಪೊಲೀಸ್ ಪೇದೆಗೆ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಇಂಜಿನಿಯರ್ ಅವರ ಗಂಟಲ ದ್ರವ್ಯವನ್ನು ಪರೀಕ್ಷೆ ಒಳಪಡಿಸಿ, ವರದಿ ಬರುವವರೆಗೂ ಹೋಮ್‍ಕ್ವಾರಂಟನ್‍ನಲ್ಲಿ ಇರಲು ಸೂಚಿಸಲಾಗಿತ್ತು. ಆದರೆ ಕಳೆದ 2 ದಿನಗಳ ಹಿಂದೆ ಯುವಕನು ರಾತ್ರೋತ್ರಿ ಬೆಂಗಳೂರಿನಿಂದ ಗೋಕಾಕ ನಗರಕ್ಕೆ ಆಗಮಿಸಿ ವಿಕೋಪ ನಿರ್ವಹಣಾ ಕಾಯ್ದೆ-2005ರ ಉಲ್ಲಂಘನೆ ಮಾಡಿದ್ದಾನೆ ಎಂದು ಡಾ. ಜಿಂಗಿ ಅವರು ಮಾಹಿತಿಯನ್ನು ನೀಡಿದ್ದಾರೆ.
ಈ ಪ್ರಕರಣದ ಕುರಿತು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು ಪ್ರತಿಕ್ರೀಯಿಸಿ ವಿಕೋಪ ನಿರ್ವಹಣಾ ಕಾಯ್ದೆ-2005ರ ಉಲ್ಲಂಘಿಸಿ ನಗರಕ್ಕೆ ಆಗಮಿಸಿರುವ ಸೋಂಕಿತ ಇಂಜಿನಿಯರ್ ಮೇಲೆ ಪ್ರಕರಣ ದಾಖಲಿಸಲು ಪೊಲೀಸ್‍ರಿಗೆ ಸೂಚಿಸಲಾಗಿದೆ. ಅಲ್ಲದೇ ಮನೆಯ ಸುತ್ತಮುತ್ತ 50 ಮೀಟರ್ ಸಿಲ್‍ಡೌನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸೋಂಕಿತ ಯುವಕನು ಗೋಕಾಕ ನಗರದ ವಿವಿಧೆಡೆ ಸಂಚರಿಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದಾನೆ ಎಂದು ತಿಳಿದು ಬಂದಿದೆ.

Related posts: