ಘಟಪ್ರಭಾ:ಬಡಕುಂದ್ರಿ ಕಲಾ & ವಾಣಿಜ್ಯ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ
ಬಡಕುಂದ್ರಿ ಕಲಾ & ವಾಣಿಜ್ಯ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜು 14 :
ಕಳೆದ ಮಾರ್ಚ 2020 ರಲ್ಲಿ ನಡೆದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಮಲ್ಲಾಪೂರ ಪಿ.ಜಿ ಪಟ್ಟಣದ ಶ್ರೀ ಜಿ.ಬಿ.ಬಡಕುಂದ್ರಿ ಕಲಾ & ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದ ಕು. ಅಶ್ವಿನಿ ಡಿ.ಬಹಾದೂರಗೋಳ ಹಾಗೂ ಕು.ಸಿದ್ಧವ್ವಾ ಹರಿಜನ ಇಬ್ಬರೂ ಶೇ:80 ರಷ್ಟು ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಶೇ:70 ರಷ್ಟು ಅಂಕ ಪಡೆಯುವ ಮೂಕ ಕು.ರೇವತಿ ದಡ್ಡಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕು.ತೈಸೀನ ಪೀರಜಾದೆ ಶೇ:92 ರಷ್ಟು ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಕು.ರಾಣಿ ನಾಯಿಕ ಶೇ:90 ರಷ್ಟು ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಕು.ಸರಸ್ವತಿ ತಳವಾರ ಶೇ:85 ರಷ್ಟು ಅಂಕ ಗಳಿಸಿ ತೃತೀಯ ಸ್ಥಾನ ಪಡೆಯುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಬಡಕುಂದ್ರಿ, ಹಾಗೂ ಆಡಳಿತಾಧಿಕಾರಿಗಳು, ಪ್ರಾಚಾರ್ಯರು & ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.