RNI NO. KARKAN/2006/27779|Sunday, December 15, 2024
You are here: Home » breaking news » ಗೋಕಾಕ:ರೋಗಿಯ ಸಾವಿಗೆ ಕಾರಣವಾದ ವೈದ್ಯರ ಮೇಲೆ ಕ್ರಮಕ್ಕೆ ಜೈ ಭೀಮ್ ಸಂಘರ್ಷ ಸಮಿತಿ ಆಗ್ರಹ

ಗೋಕಾಕ:ರೋಗಿಯ ಸಾವಿಗೆ ಕಾರಣವಾದ ವೈದ್ಯರ ಮೇಲೆ ಕ್ರಮಕ್ಕೆ ಜೈ ಭೀಮ್ ಸಂಘರ್ಷ ಸಮಿತಿ ಆಗ್ರಹ 

ರೋಗಿಯ ಸಾವಿಗೆ ಕಾರಣವಾದ ವೈದ್ಯರ ಮೇಲೆ ಕ್ರಮಕ್ಕೆ ಜೈ ಭೀಮ್ ಸಂಘರ್ಷ ಸಮಿತಿ ಆಗ್ರಹ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 15 :

 

 
ವೈದ್ಯಕೀಯ ಚಿಕಿತ್ಸೆ ನೀಡದೆ ರೋಗಿಯ ಸಾವಿಗೆ ಕಾರಣವಾದ ನಗರದ ನವಜೀವನ ಆಸ್ಪತ್ರೆ ವೈದ್ಯನನ್ನು ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ಜೈ ಭೀಮ್ ಸಂಘರ್ಷ ಸಮಿತಿ ಅಂಬೇಡ್ಕರ್ ವಾಣಿ ಪದಾಧಿಕಾರಿಗಳು ಬುಧವಾರದಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು.
ಉಪ್ಪಾರಟ್ಟಿ ಗ್ರಾಮದ ರಾಮಚಂದ್ರ ಹರಿಜನ ಎಂಬ ರೋಗಿಯನ್ನು ಚಿಕಿತ್ಸೆಗಾಗಿ ನವಜೀವನ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯ ಶ್ರೀಶೈಲ ಮಲ್ಲಿಕಾರ್ಜುನ ಹೊಸಮನಿ ಅವರು ಯಾವುದೇ ವೈದ್ಯಕೀಯ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ತೋರಿದ ಹಿನ್ನಲೆ ರೋಗಿ ರಾಮಚಂದ್ರ ಹರಿಜನ ಸಾವನ್ನಪ್ಪಿದ್ದು ಅಲ್ಲದೆ ಚಿಕಿತ್ಸೆ ನೀಡದೆ ಸದರಿ ಮೃತಪಟ್ಟ ರೋಗಿಗೆ 2ಲಕ್ಷ ರೂ. ಬಿಲ್ ಮಾಡಿದ್ದು, ಮೃತ ಕುಟುಂಬದ ಸದಸ್ಯ ಪೊಲೀಸ್ ಠಾಣೆಯಲ್ಲಿ ನವಜೀವನ ಆಸ್ಪತ್ರೆ ವೈದ್ಯನಾದ ಶ್ರೀಶೈಲ ಮಲ್ಲಿಕಾರ್ಜುನ ಹೊಸಮನಿ ವಿರುದ್ಧ ಪ್ರಕರಣ ದಾಖಲಿಸಿದ್ದರೂ ಸಹ ಇದುವರೆಗೆ ಪೊಲೀಸ್ ಇಲಾಖೆಯವರು ಹಾಗೂ ಸಂಬಂಧಪಟ್ಟ ಇಲಾಖೆಯವರು ಆತನ ಮೇಲೆ ಕ್ರಮ ತೆಗೆದುಕೊಳ್ಳದೆ ಇರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಕಾರಣ ಸಂಬಂಧಪಟ್ಟ ಅಧಿಕಾರಿಗಳು ರೋಗಿ ರಾಮಚಂದ್ರ ಸಾವಿಗೆ ಕಾರಣರಾದ ವೈದ್ಯರನ್ನು ತಕ್ಷಣ ಬಂಧಿಸಿ ಅವರು ನಡೆಸುವ ನವಜೀವನ ಆಸ್ಪತ್ರೆಯನ್ನು ಸೀಜ್ ಮಾಡುವ ಮೂಲಕ ಮೃತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಒಂದು ವೇಳೆ ಸದರಿ ವೈದ್ಯನನ್ನು ಬಂಧಿಸುವಲ್ಲಿ ವಿಫಲವಾದಲ್ಲಿ ಜಿಲ್ಲಾಧ್ಯಂತ ಎಲ್ಲಾ ದಲಿತ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಇದಕ್ಕೂ ಮುಂಚೆ ತಾಲೂಕ ಹಿರಿಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ ಅವರಿಗೆ ಹಾಗೂ ಗೋಕಾಕ ವೃತ್ತ ಪೋಲಿಸ್ ನೀರಿಕ್ಷಕ ಗೋಪಾಲ ರಾಠೋಡ ಅವರಿಗೆ ಪ್ರತ್ಯೇಕ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜೈ ಭೀಮ್ ಸಂಘರ್ಷ ಸಮಿತಿ ಅಂಬೇಡ್ಕರ್ ವಾಣಿಯ ರಾಜ್ಯ ಉಪಾಧ್ಯಕ್ಷ ಗೋವಿಂದ ಕಳ್ಳಿಮನಿ, ತಾಲೂಕ ಅಧ್ಯಕ್ಷ ಸತೀಶ್ ಹರಿಜನ, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮನೋಹರ್ ಮೇಗೆರಿ, ವಿಭಾಗಿಯ ಅಧ್ಯಕ್ಷ ರವಿ ಕಡಕೋಳ, ಬಸವರಾಜ್ ಮೇಸ್ತ್ರಿ, ವೀರಭದ್ರ ಮೈಲನ್ನವರ, ವಿಠ್ಠಲ್ ಸಣ್ಣಕ್ಕಿ, ವಿನಯ್ ಹಂಚಿನಾಳ, ಲೋಹಿತ್ ಬಾಗನ್ನವರ ಸೇರಿದಂತೆ ಇತರರು ಇದ್ದರು.

Related posts: