ಗೋಕಾಕ:21 ನೇ ತ್ರೈವಾರ್ಷಿಕ ಮಹಾ ಅಧಿವೇಶನಕ್ಕೆ ಸರ್ವೋತ್ತಮ ಭೀಮಶಿ ಜಾರಕಿಹೊಳಿ ಅವರ ಬೆಂಬಲಿತರು ಆಯ್ಕೆ
21 ನೇ ತ್ರೈವಾರ್ಷಿಕ ಮಹಾ ಅಧಿವೇಶನಕ್ಕೆ ಸರ್ವೋತ್ತಮ ಭೀಮಶಿ ಜಾರಕಿಹೊಳಿ ಅವರ ಬೆಂಬಲಿತರು ಆಯ್ಕೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 17 :
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರ ಸಂಘ ಬೆಳಗಾವಿಯಿಂದ 21 ನೇ ತ್ರೈವಾರ್ಷಿಕ ಮಹಾ ಅಧಿವೇಶನಕ್ಕೆ ಸರ್ವೋತ್ತಮ ಭೀಮಶಿ ಜಾರಕಿಹೊಳಿ ಅವರ ಬೆಂಬಲಿತ 13 ಅಭ್ಯರ್ಥಿಗಳು ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಿದ್ದಾರೆ.
50 ಜನ ಅಭ್ಯರ್ಥಿಗಳು ಸ್ವರ್ಧೆಯಲ್ಲಿ ಇದ್ದು ಅದರಲ್ಲಿ 17 ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿತ್ತು. ಅದರಲ್ಲಿ ಸರ್ವೋತ್ತಮ ಭೀಮಶಿ ಜಾರಕಿಹೊಳಿ ಅವರ ಬೆಂಬಲಿತ ಮಾರುತಿ ದೊಡಮನಿ ನೇತೃತ್ವದ 13 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.