RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ಮುಸ್ಲಿಂರಿಂದ ಗಣಪತಿ ಪ್ರತಿಷ್ಠಾಪನೆ: ಭಾವೈಕತೆಗೆ ಮತ್ತೊಂದು ಹೆಸರೇ ಮಹಾ ರಾಜ್ಯದ ಕುರಂದವಾಡ ಪಟ್ಟಣ

ಬೆಳಗಾವಿ:ಮುಸ್ಲಿಂರಿಂದ ಗಣಪತಿ ಪ್ರತಿಷ್ಠಾಪನೆ: ಭಾವೈಕತೆಗೆ ಮತ್ತೊಂದು ಹೆಸರೇ ಮಹಾ ರಾಜ್ಯದ ಕುರಂದವಾಡ ಪಟ್ಟಣ 

ಮುಸ್ಲಿಂರಿಂದ ಗಣಪತಿ ಪ್ರತಿಷ್ಠಾಪನೆ: ಭಾವೈಕತೆಗೆ ಮತ್ತೊಂದು ಹೆಸರೇ ಮಹಾ ರಾಜ್ಯದ ಕುರಂದವಾಡ ಪಟ್ಟಣ
ಬೆಳಗಾವಿ ಅ 28: ಸುಮಾರು 4 ದಶಕಗಳಿಂದಲೂ ಹೆಚ್ಚಿನ ಕಾಲವಾಯಿತು ಭಾವೈಕ್ಯೆತೆ ಸಾರುತಿದೆ ಮಹಿ ರಾಜ್ಯದ ಕುರಂದವಾಡ ಗ್ರಾಮ ಹಿಂದೂ ಮುಸ್ಲಿಂ ಭೇದಭಾವ ವಿಲ್ಲದೆ ಆ ಜಾತಿ ಈ ಜಾತಿ ಎಂಬ ಮೇಲುಕೀಳು ವಿಲ್ಲದೆ ಈ ಗ್ರಾಮದ ಜನ ಎಲ್ಲ ಹಬ್ಬಗಳನ್ನು ಒಟ್ಟಾಗಿ ಸೇರಿ ವಿಜಂಭ್ರನೆಯಿಂದ ಆಚರಿಸಿ ಭಾವೈಕ್ಯೆತೆಗೆ ಸಾಕ್ಷಿಯಾಗುತ್ತಿದ್ದಾರೆ ಕಳೆದ ಸುಮಾರು 40 ವರ್ಷಗಳಿಂದ ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಏಕತೆ ಸಾರುವ ಗಣಪತಿಯನ್ನು ಪ್ರತಿಷ್ಠಾಪಿಸುತ್ತಿದ್ದಾರೆ ಅದು ಈ ಪಟ್ಟಣದ ವಿಶೇಷತೆಯಾಗಿದೆ
ಹೌದು , ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಕುರಂದವಾಡ ಪಟ್ಟಣದಲ್ಲಿ ಕಳೆದ 40 ವರ್ಷಗಳಿಂದ ಅಲ್ಲಿನ ಮುಸ್ಲಿಂ ಸಮುದಾಯ ಮಸೀದಿಗಳಲ್ಲಿ, ದರ್ಗಾಗಳಲ್ಲಿ ಗಣಪತಿ ಹಬ್ಬವನ್ನು ಆಚರಣೆ ಮಾಡುವ ಮೂಲಕ ದೇವನೊಬ್ಬ ನಾಮ ಹಲವು ಎಂಬುದನ್ನು ಸಾರುವ ಮೂಲಕ ನಿಜಕ್ಕೂ ಮುಸ್ಲಿಂ ಮತ್ತು ಹಿಂದೂ ಭಾಯಿ-ಭಾಯಿ ಆಗಿದ್ದಾರೆ. 

ಪಟ್ಟಣದ ಬೈರಕಬಾರಿ ಮಸೀದಿ, ಕುಡೆಖಾನ್ ಮಸೀದಿ, ಕಾರಖಾನ ಪೀಠ ಮಸೀದಿ, ಸೇರಿದಂತೆ ಸುಮಾರು 10 ಕ್ಕೂ ಹೆಚ್ಚು ಮಸೀದಿಗಳಲ್ಲಿ ಮುಸ್ಲಿಂ ಸಮುದಾಯ ಹಿಂದೂ ಸಂಪ್ರದಾಯದಂತೆ ಗಣೇಶ ಚತುರ್ಥಿ ಆಚರಿಸುತ್ತಿದೆ. ಭಕ್ತಿ ಗೀತೆಗಳನ್ನು ಹಾಡಿ ಪ್ರತಿನಿತ್ಯ ಗಣೇಶನನ್ನು ಆರಾಧಿಸುತ್ತಾರೆ. ವಿಶೇಷವೆಂದರೆ ಪ್ರತಿ 12 ವರ್ಷಕ್ಕೊಮ್ಮೆ ಮೊಹರಂ ಮತ್ತು ಗಣೇಶ ಚತುರ್ಥಿ ಹಬ್ಬ ಏಕಕಾಲಕ್ಕೆ ಬರಲಿದ್ದು, ಒಂದೆಡೆ ಮೊಹರಂ ಮತ್ತೊಂದೆಡೆ ಗೌರಿ ಗಣೇಶ ಹಬ್ಬ ಆಚರಿಸಲಾಗುತ್ತದೆ ಎಂದು ಸ್ಥಳೀಯ ಭಂಡಾರಿ ನಕ್ಕು ಹೇಳುತ್ತಾರೆ 


ಕುರಂದವಾಡ ಪಟ್ಟಣದಲ್ಲಿ ಗೌರಿ ಗಣೇಶ ಹಬ್ಬವನ್ನು ಮಸೀದಿಗಳಲ್ಲಿ ಆಚರಿಸಿ ನಾವೆಲ್ಲರೂ ಒಂದೇ ಎಂಬ ಏಕತೆಯನ್ನು ಸಾರಿದೆ. ಕಳೆದ 2 ತಿಂಗಳ ಹಿಂದೆ ಮುಸ್ಲಿಂ ಸಮುದಾಯಕ್ಕೆ ಉಡುಪಿಯ ಶ್ರಿಕೃಷ್ಣಮಠದಲ್ಲಿ ಪೇಜಾವರಶ್ರೀ ಇಫ್ತಿಯಾರ್‌ ಕೂಟ ಏರ್ಪಡಿಸಿ, ಭಾವೈಕ್ಯತೆ ಮೆರೆದಿದ್ದರು. 

ಮತಾಂಧತೆ, ಕೋಮುಗಲಭೆ ಇದೆಲ್ಲವನ್ನು ಮೆಟ್ಟಿನಿಂತು ಮಾನವ ಕುಲ ತಾನೊಂದೆ ವಲಂ ಎಂಬಂತೆ ಸಾಮರಸ್ಯದಿಂದ ಬದುಕುತ್ತಿರುವ ಕುರಂದವಾಡದ ಜನ ಇಡೀ ದೇಶಕ್ಕೆ ಮಾದರಿಯಾಗುತ್ತಾರೆ

Related posts: