ಗೋಕಾಕ:ಖಾಸಗಿ ವೈದ್ಯರು ಮತ್ತು ಫಾರ್ಮಾಸಿ ಮಾಲೀಕರು ಕಡ್ಡಾಯವಾಗಿ ಕೆ.ಪಿ.ಎಂ.ಎ ನಿಯಮಗಳನ್ನು ಪಾಲಿಸಿ : ಡಾ.ಜಗದೀಶ ಜಿಂಗಿ ಕರೆ
ಖಾಸಗಿ ವೈದ್ಯರು ಮತ್ತು ಫಾರ್ಮಾಸಿ ಮಾಲೀಕರು ಕಡ್ಡಾಯವಾಗಿ ಕೆ.ಪಿ.ಎಂ.ಎ ನಿಯಮಗಳನ್ನು ಪಾಲಿಸಿ : ಡಾ.ಜಗದೀಶ ಜಿಂಗಿ ಕರೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 17 :
ಖಾಸಗಿ ವೈದ್ಯರು ಮತ್ತು ಫಾರ್ಮಾಸಿ ಮಾಲೀಕರು ಕಡ್ಡಾಯವಾಗಿ ಕೆ.ಪಿ.ಎಂ.ಎ ನಿಯಮಗಳನ್ನು ಪಾಲಿಸವಂತೆ ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ಕರೆ ನೀಡಿದರು
ಶುಕ್ರವಾರದಂದು ಸಾಯಂಕಾಲ ನಗರದ ಸರಕಾರಿ ಆಸ್ಪತ್ರೆಯಲ್ಲಿ ಜರುಗಿದ ಖಾಸಗಿ ವೈದ್ಯರ ಮತ್ತು ಫಾರ್ಮಾಸಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಕೊರೋನಾ ನಿಯಂತ್ರಣಕ್ಕೆ ನಗರದ ಖಾಸಗಿ ಆಸ್ಪತ್ರೆಗಳಿಗೆ ಅವಶ್ಯಕತೆ ಅನುಗುಣವಾಗಿ 50 ಬೆಡ್ ಗಳನ್ನು ಮೀಸಲಿಡಬೇಕು. ಸರಕಾರದ ಹಾಗೂ ಇಲಾಖೆಯ ನಿರ್ದೇಶನದಂತೆ ಕೊರೋನಾ ಸೋಂಕಿತರ ಆರೈಕೆ ಮಾಡಿ ಕೊರೋನಾ ಮಹಾಮಾರಿಯನ್ನು ಓಡಿಸಲು ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಔಷಧಿ ಅಂಗಡಿಯವರು ಔಷಧಿ ವಿತರಿಸುವಾಗ ಕೆ.ಪಿ.ಎಂ.ಎ ನಿಯಮಗಳನ್ನು ಪಾಲಿಸಿ ರೋಗಿಗಳ ವಿವರಗಳನ್ನು ಪಡೆದುಕೊಳ್ಳುವಂತೆ ಡಾ.ಜಗದೀಶ ಜಿಂಗಿ ಹೇಳಿದರು
ಸಭೆಯಲ್ಲಿ ನಗರದ ಎಲ್ಲ ಖಾಸಗಿ ಆಸ್ಪತ್ರೆಯ ವೈದ್ಯರು , ಫರ್ಮಾಸಿಯ ( ಔಷಧಿ ಅಂಗಿಡಿ) ಮಾಲೀಕರು ಉಪಸ್ಥಿತರಿದ್ದರು.