ಗೋಕಾಕ:4 ಜನ ವೈದ್ಯರು ಸೇರಿದಂತೆ 41 ಜನರಿಗೆ ಕೊರೋನಾ ಸೋಂಕು ದೃಡ : ಡಾ. ಜಗದೀಶ ಜಿಂಗಿ ಮಾಹಿತಿ
4 ಜನ ವೈದ್ಯರು ಸೇರಿದಂತೆ 41 ಜನರಿಗೆ ಕೊರೋನಾ ಸೋಂಕು ದೃಡ : ಡಾ. ಜಗದೀಶ ಜಿಂಗಿ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 18 :
4 ವೈದ್ಯರು ಸೇರಿದಂತೆ ತಾಲೂಕಿನ 41 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ಗೋಕಾಕ ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ
ಈ ಕುರಿತು ಪ್ರತಿಕೆಯೊಂದಿಗೆ ಮಾತನಾಡಿರುವ ಅವರು ಗೋಕಾಕ ತಾಲೂಕಿನಲ್ಲಿ ಇಲ್ಲಿಯವರೆಗೆ ಒಟ್ಟು 69 ಜನರಿಗೆ ಕೊರೋನಾ ಪಾಜಿಟಿವ ಪ್ರಕರಣಗಳು ಪತ್ತೆಯಾಗಿದ್ದು, 3 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಉಳಿದ ಸೋಂಕಿತರು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸೋಂಕು ದೃಡಪಟ್ಟವರಲ್ಲಿ ಸಾಮಾನ್ಯ ಲಕ್ಷಣ ಉಳ್ಳ ಸೋಂಕಿತರನ್ನು ಗೋಕಾಕ ನಗರದಲ್ಲಿ ಸಿದ್ದಪಡಿಸಿರುವ ಕೊರೋನಾ ವಾರ್ಡಗಳಲ್ಲಿ ಚಿಕಿತ್ಸೆ ನೀಡಲಾಗುವದು ಎಂದು ತಿಳಿಸಿರುವ ಅವರು ಗೋಕಾಕ ನಗರದಲ್ಲಿ – 18, ಅಕ್ಕತಂಗೇರಹಾಳ – 8 , ತವಗ -9 , ಕುಲಗೋಡ – 1, ತುಕ್ಕಾನಟ್ಟಿ -1, ಬೆಟಗೇರಿ – 1, ಬಳೋಬಾಳ -2, ಮತ್ತು ಮೂಡಲಗಿ ಪಟ್ಟಣದಲ್ಲಿ -1 ಸೇರಿದಂತೆ ಒಟ್ಟು 41 ಪ್ರಕರಣಗಳು ಪತ್ತೆಯಾಗಿದ್ದು , ಈ ಹಿಂದೆ ಗೋಕಾಕ ನಗರದ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮೂವರಿಗೆ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಸೋಂಕಿತರ ಪ್ರಾಥಮಿಕ ಸಂರ್ಪಕಕ್ಕೆ ಬಂದಿದ್ದ ನಾಲ್ಕು ವೈದ್ಯರು ಸೇರಿದಂತೆ 18 ಪ್ರಕರಣಗಳು ಪತ್ತೆಯಾಗಿವೆ. ಕೆಎಲ್ಇ ಆಸ್ಪತ್ರೆ ಸೇರಿದಂತೆ ಕೋರೋನಾ ದೃಡಪಟ್ಟಿರುವ ಪ್ರದೇಶಗಳ ಸುತ್ತಮುತ್ತ 50 ಮೀಟರ ಪ್ರದೇಶವನ್ನು ಸಿಲ್ಡೌನ ಮಾಡಲಾಗುವದು.
ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸರಕಾರ ನೀಡುವ ನಿರ್ದೇಶನಗಳನ್ನು ಪಾಲಿಸಿ ಕೊರೋನಾ ಮಾಹಾಮಾರಿ ಹೊಡೆದೊಡಿಸಲು ಎಲ್ಲ ಇಲಾಖೆಯ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕು. ಗೋಕಾಕ ತಾಲೂಕಿನಲ್ಲಿ ಕೊರೋನಾ ವೈರಸ್ ಸಮುದಾಯದಲ್ಲಿ ಹರಡಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಧರಿಸಿ, ಅನಾವಶ್ಯಕವಾಗಿ ಮನೆಯಿಂದ ಹೊರಬರದೆ , ಅವಶ್ಯಕತೆ ಅನುಗುಣವಾಗಿ ಮಾತ್ರ ಹೊರ ಬಂದು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜಾಗೃಕತೆಯಿಂದ ಇರಬೇಕು ಎಂದು ಡಾ.ಜಗದೀಶ ಜಿಂಗಿ ಮನವಿ ಮಾಡಿಕೊಂಡಿದ್ದಾರೆ.
500 ಹಾಸಿಗೆ (ಬೆಡ್) ಉಳ್ಳ ಕೊರೋನಾ ಕೇರ್ ಸಿದ್ದ ಪಡಿಸುವ ಯೋಜನೆ ಮಾಡಿದ್ದು, ಟಾಸ್ಕಪೋರ್ಸ ಕಮಿಟಿ ಸಭೆಯಲ್ಲಿ ನಿರ್ಧರಿಸಿ ಸದ್ಯದಲ್ಲಿ ದಿನದಲ್ಲಿ ಕೊವಿಡ್ ಕೇರ ವಾರ್ಡನ್ನು ಪ್ರಾರಂಭಿಸಲಾಗುವದು ಸಾರ್ವಜನಿಕರು ಯಾವುದೇ ಭಯ ಪಡದೆ ಕೊರೋನಾ ಸೋಲಿಸಲು ಸಹಕಾರ ನೀಡಬೇಕು ಎಂದು ಡಾ.ಜಗದೀಶ ಜಿಂಗಿ ವಿನಂತಿಸಿದ್ದಾರೆ.