ಗೋಕಾಕ:ಬೆಟಗೇರಿ ಗ್ರಾಮದ ಯುವಕನೋರ್ವನಿಗೆ ಕರೊನಾ ಸೋಂಕು ದೃಡ : ಸೋಂಕಿತನ ಸುತ್ತಲಿನ ಪ್ರದೇಶ ಸಿಲ್ಡೌನ
ಬೆಟಗೇರಿ ಗ್ರಾಮದ ಯುವಕನೋರ್ವನಿಗೆ ಕರೊನಾ ಸೋಂಕು ದೃಡ : ಸೋಂಕಿತನ ಸುತ್ತಲಿನ ಪ್ರದೇಶ ಸಿಲ್ಡೌನ
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಜು 18 :
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಯುವಕನೋರ್ವನಿಗೆ ಕರೊನಾ ಸೋಂಕು ತಗುಲಿರುವದು ದೃಡಪಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕಿತನ ಮನೆಯ ಸುತ್ತಲಿನ ಸುಮಾರು 50ಮೀ ಪ್ರದೇಶವನ್ನು ಶನಿವಾರದಂದು ಸೀಲ್‍ಡೌನ್ ಮಾಡಲಾಗಿದೆ.
ಸೋಂಕಿತ ಯವಕನಿಗೆ ಗೋಕಾಕದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರಗೆ ಸ್ಥಳಾಂತರಿಸಲಾಗುವದು ಎಂದು ಮಮದಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀಧರ ವಾಲಿಕಾರ ಪತ್ರಿಕೆಗೆ ತಿಳಿಸಿದ್ದಾರೆ.
ಗ್ರಾಮದ ವ್ಯಕ್ತಿಯೊರ್ವನಿಗೆ ಕರೊನಾ ಸೋಂಕು ತಗುಲಿರುವದು ದೃಡಪಟ್ಟ ಸುದ್ದಿ ಗ್ರಾಮದೆಲ್ಲಡೆ ತಿಳಿಯುತ್ತಿದ್ದಂತೆ ಅನವಶ್ಯಕವಾಗಿ ಓಡಾಡುವ ಜನರ ಓಡಾಟ ಸ್ಥಗಿತಗೊಂಡಿತಲ್ಲದೇ, ವಿವಿಧ ಅಂಗಡಿ-ಮುಂಗಟ್ಟುಗಳು ಬಾಗಿಲು ಬಂದ್ ಮಾಡಿದ್ದರಿಂದ ಗ್ರಾಮದೆಲ್ಲಡೆ ಸ್ತಬ್ಧ ವಾತಾವರಣ ನಿರ್ಮಾಣವಾಗಿದೆ
ಗ್ರಾಮ ಪಂಚಾಯತಿ ಪಿಡಿಒ ಎಚ್.ಎನ್.ಬಾವಿಕಟ್ಟಿ, ಗ್ರಾಮಲೆಕ್ಕಾಧಿಕಾರಿ ಜೆ.ಎಮ್.ನದಾಫ್, ಕುಲಗೋಡ ಪೊಲೀಸ್ ಠಾಣೆಯ ಗ್ರಾಮದ ಬೀಟ್ ಪೊಲೀಸ್ ಪೇದೆ ಬ್ರಹ್ಮಾನಂದ ಬಿರಾದಾರ, ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ, ಶ್ರೀಧರ ದೇಯಣ್ಣವರ, ಗ್ರಾಪಂ ಕಾರ್ಯದರ್ಶಿ ಪರಶುರಾಮ ಇಟಗೌಡ್ರ, ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಆರೋಗ್ಯ ಸಹಾಯಕ ಪ್ರಕಾಶ ಹಡಪದ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಮತ್ತು ಗ್ರಾಪಂ ಸಿಬ್ಬಂದಿ, ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು