ಗೋಕಾಕ:ವಿಕಾಸ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಮನೆ ಮನೆಗೆ ತೆರಳಿ ಕೊರೋನಾ ಜಾಗೃತಿ
ವಿಕಾಸ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಮನೆ ಮನೆಗೆ ತೆರಳಿ ಕೊರೋನಾ ಜಾಗೃತಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 20 :
ಕೊರೋನಾ ಮಹಾಮಾರಿ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಮಹತ್ವದಾಗಿದೆ ಎಂದು ಕರ್ನಾಟಕ ಮುಸ್ಲಿಂ ವಿಕಾಸ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸಾದಿಕ ಹಲ್ಯಾಳ ಹೇಳಿದರು
ಸೋಮವಾರದಂದು ಅಂಬೇಡ್ಕರ್ ನಗರದ ವಾರ್ಡ ನಂ 21 ರಲ್ಲಿ ಕರ್ನಾಟಕ ಮುಸ್ಲಿಂ ವಿಕಾಸ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಮನೆ ಮನೆಗೆ ತೆರಳಿ ಕೊರೋನಾ ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಮನೆಗಳಿಗೆ ಭೇಟಿನೀಡಿ ಅವರು ಮಾತನಾಡಿದರು.
ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹರಡಿ ಜನಜೀವನದ ಮೇಲೆ ತೀವ್ರ ಪರಿಣಾಮ ಬಿರುತ್ತಿದ್ದೆ, ಕೊರೋನಾ ವೈರಸ್ ನ ಚೈನ್ ಮುರಿಯಲು ಜನರು ಕಡ್ಡಾಯವಾಗಿ ಮಾಸ್ಕ ಧರಿಸಿ , ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ನಾವು ಕೊರೋನಾ ವೈರಸ್ ನಿಂದ ಮುಕ್ತರಾಗಬಹುದು ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷ ಅಬ್ಬಾಸ ದೇಸಾಯಿ ಮಾತನಾಡಿ ಕೊರೋನಾ ವೈರಸ ಹರಡದಂತೆ ತಡೆಯುವ ಕೆಲಸ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು . 10 ವರ್ಷದ ಒಳಗಿನ ಮಕ್ಕಳು ಮತ್ತು 60 ವರ್ಷ ಮೇಲ್ಪಟವರು ಅನಗತ್ಯವಾಗಿ ಮನೆಯಿಂದ ಹೊರಗಡೆ ಹೋಗದೆ ಸಕರಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿಬೇಕು, ಲಾಕಡೌನ ತೆರುವು ಆದ ಮೇಲೆ ಮಾರ್ಕೆಟ್ ಸೇರಿದಂತೆ ಇನ್ನೀತರ ಪ್ರದೇಶಗಳಲ್ಲಿ ತಿರುಗಾಡುವಾಗ ಜಾಗೃಕತೆ ವಹಿಸಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ಮುಖಂಡ ಕಾಸೀಮ ಖಲೀಫ್, ಪರಿಷತ್ತಿನ ಪದಾಧಿಕಾರಿಗಳಾದ ಖಾಜಾಸಾಬ ಮತ್ತೆ, ರಫೀಕ್ ಗುಳೆದಗುಡ್ಡ , ಮಗುಟ ಪೈಲವಾನ, ಯಾಸೀನ ಮುಲ್ಲಾ , ಇರ್ಷಾದ್ ಪೀರಜಾದೆ, ಇಮ್ತಿಯಾಜ ಮೊಮೀನ ,ಇಮಾಮ ಅಂಗಡಿ ಇದ್ದರು.