ಗೋಕಾಕ:ನಗರಸಭೆಯಿಂದ ಕೋವಿಡ್ ನಿಯಂತ್ರಣಕ್ಕಾಗಿ ಟಾಸ್ಕಪೋರ್ಸ ಸಮಿತಿ ಸಭೆ
ನಗರಸಭೆಯಿಂದ ಕೋವಿಡ್ ನಿಯಂತ್ರಣಕ್ಕಾಗಿ ಟಾಸ್ಕಪೋರ್ಸ ಸಮಿತಿ ಸಭೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 20 :
ಕೋವಿಡ್ ನಿಯಂತ್ರಣಕ್ಕಾಗಿ ಸರಕಾರದ ನಿರ್ದೇಶನದಂತೆ ಟಾಸ್ಕಪೋರ್ಸ ಸಮಿತಿ ಹಾಗೂ ಬೂಥ ಮಟ್ಟದ ಸಮಿತಿಯವರಿಗೆ ನಗರಸಭೆಯಿಂದ ಸೋಮವಾರದಂದು ಆನ್ ಲೈನ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿಯು ನಗರಸಭೆಯ ಸಮೂದಾಯ ಭವನದಲ್ಲಿ ಮತ್ತು ನಗರಸಭೆಯ ಸಭಾಂಗಣದಲ್ಲಿ ಒಟ್ಟು 450 ಸಮಿತಿ ಸದ್ಯಸರಿಗೆ ತರಬೇತಿ ನೀಡಲಾಯಿತು ಎಂದು ನಗರಸಭೆಯ ಪೌರಾಯುಕ್ತ ಶಿವಾನಂದ ಹಿರೇಮಠ ಮತ್ತು ಪರಿಸರ ಅಭಿಯಂತ ಎಂ.ಎಚ್.ಗಜಾಕೋಶ ತಿಳಿಸಿದ್ದಾರೆ.