ಗೋಕಾಕ:ನಾಳೆಯಿಂದ ಮಧ್ಯಾಹ್ನ 1 ಘಂಟೆಯಿಂದ ಜು 30 ವರೆಗೆ ಶರತ್ತುಬದ್ದ ಹಾಫಲಾಕಡೌನ ಜಾರಿ : ತಹಶೀಲ್ದಾರ ಪ್ರಕಾಶ ಮಾಹಿತಿ
ನಾಳೆಯಿಂದ ಮಧ್ಯಾಹ್ನ 1 ಘಂಟೆಯಿಂದ ಜು 30 ವರೆಗೆ ಶರತ್ತುಬದ್ದ ಹಾಫಲಾಕಡೌನ ಜಾರಿ : ತಹಶೀಲ್ದಾರ ಪ್ರಕಾಶ ಮಾಹಿತಿ ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 21 :
ವಾರದ ಲಾಕಡೌನ ಬುಧವಾರ ಬೆಳ್ಳಿಗೆ 7 ಘಂಟೆಗೆ ಮುಗಿಯಲ್ಲಿದ್ದು, ನಾಳೆಯಿಂದ ಮಧ್ಯಾಹ್ನ 1 ಘಂಟೆಯಿಂದ ಜು 30 ವರೆಗೆ ಶರತ್ತುಬದ್ದ ಹಾಫಲಾಕಡೌನ ಜಾರಿಯಲ್ಲಿರುತ್ತದೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ . ಮಂಗಳವಾರದಂದು ನಗರದ ತಹಶೀಲ್ದಾರ ಕಛೇರಿಯಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರನ್ನು ಉದ್ಧೇಶಿಸಿ ಮಾತನಾಡಿದ ಅವರು ಬುಧವಾರದಿಂದ ಬೆಳಿಗ್ಗೆ 5.00 ಗಂಟೆಯಿಂದ ಮದ್ಯಾಹ್ನ 1.00 ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಸಲು ಯಾವುದೇ ನಿರ್ಭಂದ ನ ಇರುವುದಿಲ್ಲ. ಮದ್ಯಾಹ್ನ 1.00 ಗಂಟೆಯಿಂದ ಷರತ್ತು ಬದ್ಧ ಲಾಕ್ ಡೌನ್ ಘೋಷಿಸಿದ್ದು, ಈ ಮೊದಲಿನ ಲಾಕ್ ಡೌನ್ ಶರತ್ತುಗಳು ಈ ಲಾಕಡೌಗೆ ಅನ್ವಯಿಸುತ್ತವೆ. ಬೇರೆ ತಾಲೂಕಿಗಳಿಗೆ ಸಂಚರಿಸಲು ಬಸ್ ಸಂಚಾರ ಶುರು ಇದ್ದು, ಮಧ್ಯಾಹ್ನ 1.00 ರ ನಂತರ ಲೋಕಲ್ ಬಸ್ ಸಂಚಾರ ಇರುವುದಿಲ್ಲ. ಮತ್ತು ಮದ್ಯ ಮಾರಾಟಕ್ಕೆ ಪಾರ್ಸಲ್ ಒಯ್ಯಲು ಮಾತ್ರ ಅವಕಾಶ ಇರುತ್ತದೆ. ಮಧ್ಯಾಹ್ನ 1 ಗಂಟೆಯ ನಂತರ ಅಗತ್ಯ ವಸ್ತುಗಳಾದ ಔಷಧ ಅಂಗಡಿ, ಆಸ್ಪತ್ರೆಗಳು, ಪೆಟ್ರೋಲ್ ಬಂಕ್ ಗಳು ಸೇರಿದಂತೆ ಇತರ ಅಗತ್ಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ. ತಾಲೂಕಾಡಳಿತ ವಿರೋಧ ಪಕ್ಷಗಳಿಗೆ ವಿಶ್ವಾಸಕ್ಕೆ ತಗೆದುಕೊಳ್ಳದೆ ಏಕಪಕ್ಷೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೆ ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಅವರ ಆರೋಪದ ಬಗ್ಗೆ ಕೇಳಲಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಲಾಕಡೌನ ಸಂದರ್ಭದಲ್ಲಾಗಲಿ ಅಥವಾ 7 ದಿನಗಳ ಲಾಕಡೌನ ವಿಸ್ತರಿಸುವ ಸಂದರ್ಭದಲ್ಲಿ ಎಲ್ಲ ರಾಜಕೀಯ ಪ್ರತಿನಿಧಿಗಳ , ವ್ಯಾಪಾರಸ್ಥರು ಮತ್ತು ಎಲ್ಲ ಸಮಾಜಿಕ ಸಂಘಟನೆಗಳ ಗಮನಕ್ಕೆ ತಂದು ಅವರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ. ಕೆಲಸದ ಒತ್ತಡದಲ್ಲಿ ಕೆಲವೊಂದು ಸಾರಿ ಕಣ್ಣುತಪ್ಪಿನಿಂದ ಸಣ್ಣ ವಿಷಯಗಳು ನಡೆಯುತ್ತವೆ ಅದನ್ನು ಸರಿಪಡಿಸುತ್ತೇವೆ ಎಂದರು. ಕೊರೋನಾ ತಡೆಗಟ್ಟುವಲ್ಲಿ ತಾಲೂಕಾ ಅಧಿಕಾರಿಗಳಲ್ಲಿ ಸಮನ್ವಯತೆಯ ಕೊರತೆ ಎದ್ದು ಕಾಣುತ್ತದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಇದು ಶುದ್ದ ಸುಳ್ಳು ಲಾಕಡೌನ ಒಂದನೇಯ ದಿನದಿಂದ
ಎಲ್ಲ ತಾಲೂಕಾ ಅಧಿಕಾರಿಗಳು ಸಮನ್ವಯತೆಯಿಂದ , ಯಾವುದೇ ತಾರತಮ್ಯ ವಿಲ್ಲದೆ ಕಾರ್ಯನಿರ್ವಹಿಸಿದ್ದಾರೆ ಅದರಲ್ಲೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಮಗೆ ನೀಡಿದ ಸಮಯದಲ್ಲಿ
ಕಾರ್ಯ ನಿರ್ವಹಿಸಿ ಕೊರೋನಾ ತಡೆಗಟ್ಟುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಂತ್ರಿಗಳು ಬೆಳಗಾವಿ ಜಿಲ್ಲೆಯಲ್ಲಿ ಲಾಕಡೌನ ಅವಶ್ಯಕತೆ ಇಲ್ಲ ಎಂದು ಹೇಳಿದರು ಸಹ ತಾವು ತಾಲೂಕಿನಲ್ಲಿ ಶರತ್ತುಬದ್ದ ಹಾಫಲಾಕಡೌನ ಜಾರಿಗೊಳಿಸಿದ್ದಿರಿ ಎಂದು ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ಅವರು ಜಿಲ್ಲಾಧಿಕಾರಿ ಮತ್ತು ಸಚಿವರ ಅಭಿಪ್ರಾಯ ಸರಿಯಾಗಿದೆ ಆದರೆ ಸ್ಥಳೀಯವಾಗಿ ಬರುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಚಿವರ ಗಮನಕ್ಕೆ ತಂದು ಸ್ಥಳೀಯರ ಮನೊಭೀಲಾಶೆಯಂತೆ ನಾಳೆಯಿಂದ ಜು 30 ವರೆಗೆ ಮಧ್ಯಾಹ್ನ 1 ರಿಂದ ಮರುದಿನ ಬೆಳ್ಳಗೆ 5 ಘಂಟೆಯವರೆಗೆ ಹಾಫಲಾಕಡೌನ ಜಾರಿ ಮಾಡಲಾಗಿದೆ ತಾಲೂಕಿನ ಎಲ್ಲ ಸಾರ್ವಜನಿಕರು ಈ ಹಾಫಲಾಕಡೌನಗೆ ಸಾಥ್ ನೀಡಿ ಕೊರೋನಾ ಹರಡದಂತೆ ತಡೆಗಟ್ಟಲು ಸಹಕರಿಸಬೇಕೆಂದು ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ವಿನಂತಿಸಿದರು. ಅಂಗಡಿಕಾರರಿಗೆ ಖಡಕ ಸೂಚನೆ : ಕೊರೋನಾ ಪ್ರಕರಣಗಳು ಸಮುದಾಯಕ್ಕೆ ಹಬ್ಬುತ್ತಿರುವ ಪರಿಣಾಮ ಲಾಕಡೌನ ಸಡಲಿಕೆ ಸಂದರ್ಭದಲ್ಲಿ ನಗರದಲ್ಲಿ ವ್ಯಾಪಾರ ವಹಿವಾಟು ನಡೆಸುವ ಸಮಯದಲ್ಲಿ ಅಂಗಡಿಕಾರರು ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ ಸೂಚಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ನಡೆಸಬೇಕು ಈ ನಿಯಮಗಳನ್ನು ಪಾಲಿಸದ ಅಂಗಡಿಕಾರರನ್ನು ಗುರುತಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಮಾಸ್ಕ ಇಲ್ಲದೆ ತಿರುಗಾಡುವವರ ವಿರುದ್ಧ ದಂಡ ವಿಧಿಸಲು ಪೊಲೀಸ ಇಲಾಖೆಗೆ ಸೂಚಿಸಲಾಗುವುದು ಎಂದು ಹೇಳಿದ ತಹಶೀಲ್ದಾರ ಅವರು ಒಟ್ಟಾರೆ ಸಾರ್ವಜನಿಕರು ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಬೀಗಿಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಬೆಂಗಳೂರುನಲ್ಲಿ ಇಲ್ಲದ ಲಾಕಡೌನ ಗೋಕಾಕದಲ್ಲಿ ಜಾರಿ : ರಾಜ್ಯದ ರಾಜಧಾನಿ ಬೆಂಗಳೂರುನಂತಹ ಮಹಾನಗರದಲ್ಲಿ ಪ್ರತಿದಿನ ಸಾವಿರ ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿದ್ದರು ಸಹ ಮುಖ್ಯಮಂತ್ರಿ ಯಡಿಯೂರಪ್ಪ ನವರು ಕೊರೋನಾ ತಡೆಗೆ ಲಾಕಡೌನ ಉತ್ತರವಲ್ಲ ಬೆಂಗಳೂರಿನಲ್ಲಿ ಮತ್ತೆ ಲಾಕಡೌನ ವಿಸ್ತರಿಸುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಮಾಹಿತಿ ನೀಡಿದ್ದಾರೆ. ಅದರಂತೆ ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ನಿನ್ನೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನನ್ನ ಅಭಿಪ್ರಾಯ ಮತ್ತು ಮುಖ್ಯಮಂತ್ರಿಗಳ ಅಭಿಪ್ರಾಯ ಒಂದೇ ಇದೆ ಕೊರೋನಾ ತಡೆಯಲು ಲಾಕಡೌನ ಪರಿಹಾರವಲ್ಲ ಈಗ ಸದ್ಯಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಲಾಕಡೌನ ವಿಸ್ತರಿಸುವ ಯಾವುದೇ ಪ್ರಸ್ತಾವನೆ ಇಲ್ಲ , ವಿಸ್ತರಿಸುವುದಾರೆ ಮುಂದೆ ಚರ್ಚಿಸಿ ನಿರ್ಧಾರ ತಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆದರೂ ಸಹ ಸಚಿವರ ಸ್ವ ತಾಲೂಕಿನಲ್ಲಿ ನಾಳೆಯಿಂದ ಜು 30 ರವರೆಗೆ ಹಾಫಲಾಕಡೌನ ಜಾರಿಯಲ್ಲಿರುತ್ತದೆ ಎಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಪ್ರತಿಕೆಗಳಿಗೆ ಮಾಹಿತಿ ನೀಡಿದ್ದಾರೆ.