ಗೋಕಾಕ:ಮುಖ್ಯಮಂತ್ರಿಗಳ ಹೇಳಿಕೆಯಿಂದ ಎಚ್ಚರಗೊಂಡ ತಹಶೀಲ್ದಾರ : ನಾಳೆಯಿಂದ ಗೋಕಾಕದಲ್ಲಿ ಯಾವುದೇ ಲಾಕಡೌನ ಇರುವುದಿಲ್ಲ ಪ್ರಕಾಶ ಹೋಳೆಪ್ಪಗೋಳ ಸ್ವಷ್ಟನೆ
ಮುಖ್ಯಮಂತ್ರಿಗಳ ಹೇಳಿಕೆಯಿಂದ ಎಚ್ಚರಗೊಂಡ ತಹಶೀಲ್ದಾರ : ನಾಳೆಯಿಂದ ಗೋಕಾಕದಲ್ಲಿ ಯಾವುದೇ ಲಾಕಡೌನ ಇರುವುದಿಲ್ಲ ಪ್ರಕಾಶ ಹೋಳೆಪ್ಪಗೋಳ ಸ್ವಷ್ಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 21 :
ನಾಳೆಯಿಂದ ರಾಜ್ಯದಲ್ಲಿ ಯಾವುದೇ ಲಾಕಡೌನ ಇರುವುದಿಲ್ಲ ಮುಖ್ಯಮಂತ್ರಿಗಳ ಪತ್ರಿಕಾ ಗೋಷ್ಠಿ ನಡೆಸುತ್ತಿದ್ದಂತೆ ಎಚ್ಚೆತ್ತ ಗೋಕಾಕ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಅವರು ನಾಳೆಯಿಂದ ಗೋಕಾಕದಲ್ಲಿ ಯಾವುದೇ ಲಾಕಡೌನ ಇರುವುದಿಲ್ಲ ಎಂದು ಸ್ವಷ್ಟಪಡಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಾನ್ಯ ಮುಖ್ಯಮಂತ್ರಿಗಳು ಅವರು ಇಂದು ಸಂಜೆ ಪತ್ರಿಕಾ ಗೋಷ್ಠಿಯಲ್ಲಿ ನಾಳೆಯಿಂದ ರಾಜ್ಯದಲ್ಲಿ ಯಾವುದೇ ಲಾಕಡೌನ ಇರುವುದಿಲ್ಲ ಎಂದು ತಿಳಿಸಿದ್ದಾರೆ ಅದರಂತೆ ಗೋಕಾಕ್ ತಾಲೂಕಿನಲ್ಲಿ ಲಾಕ್ ಡೌನ್ ಇರುವುದಿಲ್ಲ. ಸಾರ್ವಜನಿಕರು ಎಂದಿನಂತೆ ಸಾಮಾಜಿಕ ಅಂತರ , ಮಾಸ್ಕ ಧರಿಸಿ ವ್ಯವಹರಿಸಬೇಕು . ಸಾರ್ವಜನಿಕರಿಗೆ ಕೊರೋನಾ ವೈರಾಣು ಹರಡುವಿಕೆ ತಡೆಗಟ್ಟಲು ಇರುವ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಉಳಿದ ಎಲ್ಲಾ ನಿರ್ಬಂಧಗಳನ್ನು ಸಡಿಲಿಸಲಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ.
ಹೇಳಿಕೆ ಬದಲಾಯಿಸಿದ ತಹಶೀಲ್ದಾರ : ಮಂಗಳವಾರ ಮಧ್ಯಾಹ್ನವಷ್ಷೇ ಅವರನ್ನು ಭೇಟಿಯಾಗಿದ್ದ ಪತ್ರಕರ್ತರನ್ನು ಉದ್ಧೇಶಿಸಿ ಹಾಗೂ ಮಾಧ್ಯಮ ಮಿತ್ರರಿಗೆ ಹಾಫಲಾಕಡೌನ ಜಾರಿಯಲ್ಲಿರುತ್ತದೆ ಎಂದು ಹೇಳಿಕೆ ಕಳುಹಿಸಿದ್ದ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಅವರು ಮುಖ್ಯಮಂತ್ರಿಗಳು ರಾಜ್ಯವನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ ಎಚ್ಚರವಾಗಿ ತಮ್ಮ ಹೇಳಿಕೆಯನ್ನು ಹಿಂದೆಪಡೆದು ನಾಳೆಯಿಂದ ಯಾವುದೇ ಲಾಕಡೌನ ಇರುವದಿಲ್ಲ ಎಂದು ಬೇರೊಂದು ಹೇಳಿಕೆಯನ್ನು ಮಾಧ್ಯಮಗಳಿಗೆ ಕಳುಹಿಸಿದ್ದಾರೆ. ತಹಶೀಲ್ದಾರ ಅವರಿಗೆ ಭೇಟಿಯಾದ ಸಮಯದಲ್ಲಿ ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಲಾಕಡೌನ ಅವಶ್ಯಕತೆ ಇಲ್ಲ ಎನ್ನುತ್ತಿದ್ದಾರೆ ಆದರೂ ಗೋಕಾಕದಲ್ಲಿ ಹಾಫಲಾಕಡೌನ ಜಾರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ತಹಶೀಲ್ದಾರ ಅವರು ಸಚಿವರ ಗಮನಕ್ಕೆ ತಂದು ಸ್ಥಳೀಯರ ಮನೊಭೀಲಾಶೆಯಂತೆ ಶರತ್ತುಬದ್ದ ಹಾಫಲಾಕಡೌನ ಜಾರಿ ಮಾಡಲಾಗಿದೆ ಎಂದಿದ್ದರು ಆದರೆ ಮುಖ್ಯಮಂತ್ರಿಗಳ ಅಧಿಕೃತ ಹೇಳಿಕೆ ಹೋರಬಿಳುತ್ತಿದ್ದಂತೆ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಅವರು ತಮ್ಮ ಹೇಳಿಕೆಯನ್ನು ಹಿಂದೆ ಪಡೆದಿದ್ದಾರೆ.