RNI NO. KARKAN/2006/27779|Thursday, March 13, 2025
You are here: Home » breaking news » ಗೋಕಾಕ:ಮಾಜಿ ಸಚಿವ ಮುರಗೇಶ ನಿರಾಣಿ ಅವರಿಂದ ಅವಹೇಳನಕಾರಿ ಸಂದೇಶ ಕ್ಷತ್ರೀಯ ಯುವ ಬ್ರಿಗೇಡ್‍ ಆಕ್ರೋಶ

ಗೋಕಾಕ:ಮಾಜಿ ಸಚಿವ ಮುರಗೇಶ ನಿರಾಣಿ ಅವರಿಂದ ಅವಹೇಳನಕಾರಿ ಸಂದೇಶ ಕ್ಷತ್ರೀಯ ಯುವ ಬ್ರಿಗೇಡ್‍ ಆಕ್ರೋಶ 

ಮಾಜಿ ಸಚಿವ ಮುರಗೇಶ ನಿರಾಣಿ ಅವರಿಂದ ಅವಹೇಳನಕಾರಿ ಸಂದೇಶ ಕ್ಷತ್ರೀಯ ಯುವ ಬ್ರಿಗೇಡ್‍ ಆಕ್ರೋಶ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 22 :

 

ಶಾಸಕ ಹಾಗೂ ಮಾಜಿ ಸಚಿವ ಮುರಗೇಶ ನಿರಾಣಿ ಅವರು ಹಿಂದು ದೇವರಗಳ ಕುರಿತು ಅವಹೇಳನಕಾರಿ ಸಂದೇಶ ರವಾನಿಸಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯ ಕ್ಷತ್ರೀಯ ಯುವ ಬ್ರಿಗೇಡ್‍ನ ಪದಾಧಿಕಾರಿಗಳು ತಹಶೀಲದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಬುಧವಾರದಂದು ನಗರದ ಮಿನಿ ವಿಧಾನದ ಸೌಧ ಮುಂದೆ ಸೇರಿದ ಪದಾಧಿಕಾರಿಗಳು ಶಾಸಕ ಹಾಗೂ ಮಾಜಿ ಸಚಿವ ಮುರಗೇಶ ನಿರಾಣಿ ಹಾಗೂ ಆಪ್ತರ ಮೇಲೆ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕೆಂದು ಆಗ್ರಹಿಸಿ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಅರ್ಪಿಸಿದರು.
ಶ್ರೀರಾಮಚಂದ್ರ ಒಳಗೊಂಡಂತೆ ಅನೇಕ ದೇವರುಗಳನ್ನು ಹಿಯಾಳಿಸಿ ಸಂದೇಶವನ್ನು ಶಾಸಕ ನಿರಾಣಿ ಅವರು ಸಾಮಾಜಿಕ ಜಾಲತಾಣದಲ್ಲಿ ರವಾನಿಸುವ ಮೂಲಕ ಹಿಂದುಗಳ ಭಾವನೆಗಳ ಮೇಲೆ ಧಕ್ಕೆ ತರುವ ಕಾರ್ಯವನ್ನು ಮಾಡಿದ್ದಾರೆ. ಅದರ ಕುರಿತು ಕ್ಷಮೆ ಯಾಚಿಸಿದರೂ ಸಾಲದು ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಪಕ್ಷದಿಂದ ಅವರನ್ನು ಉಚ್ಛಾಟನೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದಂತ್ಯ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ಪೂಜೇರಿ, ಪದಾಧಿಕಾರಿಗಳಾದ ರಘು ನಾಯಿಕ, ಮಂಜು ಗೋವಿಂದಪ್ಪಗೋಳ, ಶ್ರೀಕಾಂತ ಪೂಜೇರಿ, ಸಂಜು ಹುಚ್ಚಲಿ, ಸೇರಿದಂತೆ ಅನೇಕರು ಇದ್ದರು.

Related posts: