ಗೋಕಾಕ:ಗೋಕಾಕ ಸಿ.ಡಿ.ಪಿ.ಓ, ಸರಕಾರಿ ಆಸ್ಪತ್ರೆಯ ಇಬ್ಬರು ಕಿರಿಯ ಪ್ರಯೋಗಾಲಯ ತಜ್ಞರಿಗೆ ಕೊರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ
ಗೋಕಾಕ ಸಿ.ಡಿ.ಪಿ.ಓ, ಸರಕಾರಿ ಆಸ್ಪತ್ರೆಯ ಇಬ್ಬರು ಕಿರಿಯ ಪ್ರಯೋಗಾಲಯ ತಜ್ಞರಿಗೆ ಕೊರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 22 :
ಗೋಕಾಕ ಸಿ.ಡಿ.ಪಿ.ಓ ಮತ್ತು ಸರಕಾರಿ ಆಸ್ಪತ್ರೆಯ ಇಬ್ಬರು ಕಿರಿಯ ಪ್ರಯೋಗಾಲಯ ತಜ್ಞರು ಸೇರಿದಂತೆ ಒಟ್ಟು 5 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ತಾಲೂಕಿನ ಅಂಕಲಗಿ ಗ್ರಾಮದ 34 ವರ್ಷದ ಮಹಿಳೆಯೋರ್ವಳಿಗೆ , ಘಟಪ್ರಭಾ ಪಟ್ಟಣದ 45 ವರ್ಷದ ವ್ಯಕ್ತಿಗೆ ಹಾಗೂ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ 44 ವರ್ಷದ ಇಬ್ಬರು ಪ್ರಯೋಗಾಲಯ ತಜ್ಞರಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು , ಇದರಲ್ಲಿ ಒಬ್ಬರ ಗೋಕಾಕ ತಾಲೂಕಿನ ಮೆಳವಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾಗೂ ಇನ್ನೋಬ್ಬರು ರಾಯಬಾಗ ತಾಲೂಕಿನ ಎಲಿಮುನ್ನೋಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಯೋಗಾಲಯ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಇಂದು ಸೋಂಕು ದೃಡಪಟ್ಟ ಎಲ್ಲರನ್ನೂ ಗೋಕಾಕ ನಗರದಲ್ಲಿ ತೆರೆದಿರುವ ಕೊವಿಡ್ ಕೇರ ಸೆಂಟರದಲ್ಲಿ ದಾಖಲಿಸಲಾಗಿದೆ . ಗೋಕಾಕ ಸಿಡಿಪಿಓ ಮಾತ್ರ ಬೆಳಗಾವಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .
ಕಛೇರಿ ಬಂದ್ : ಮಂಗಳವಾರವಷ್ಷೇ ನಗರದ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳಿಗೆ ಕೊರೋನಾ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಕಛೇರಿಯನ್ನು ಸೈನಿಟೈಜರ ಮಾಡಿ ಮುಂದಿನ 48 ಗಂಟೆಗಳ ಕಾಲ ಬಂದ್ ಮಾಡಲಾಗಿದೆ ಎಂದು ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ