ಗೋಕಾಕ:11 ಜನರಿಗೆ ಸೋಂಕು ದೃಡ : 10 ಸೋಂಕಿತರು ಬಿಡುಗಡೆ , ತಪ್ಪುಮಾಹಿತಿ ನೀಡಿದ ಸೋಂಕಿತರ ವಿರುದ್ಧ ಪೊಲೀಸರಿಗೆ ದೂರು : ಡಾ.ಜಗದೀಶ ಮಾಹಿತಿ
11 ಜನರಿಗೆ ಸೋಂಕು ದೃಡ : 10 ಸೋಂಕಿತರು ಬಿಡುಗಡೆ , ತಪ್ಪುಮಾಹಿತಿ ನೀಡಿದ ಸೋಂಕಿತರ ವಿರುದ್ಧ ಪೊಲೀಸರಿಗೆ ದೂರು : ಡಾ.ಜಗದೀಶ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 24 :
ಗೋಕಾಕ ನಗರದಲ್ಲಿ 10 ಜನರಿಗೆ ಹಾಗೂ ಕುಲಗೋಡ ಗ್ರಾಮದ ಒಬ್ಬ ಯುವಕನಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು, ಶುಕ್ರವಾರದಂದು ಗುಣಮುಖರಾದ 10 ಕೊರೋನಾ ಸೋಂಕಿತರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಕಳೆದ ಕೆಲದಿನಗಳ ಹಿಂದೆ ನರಗದ ಸಂಗಮ ನಗರದಲ್ಲಿಯ ಸಂಬಂಧಿಕರೊಬ್ಬರ ಅಂತ್ಯಕ್ರಿಯೆದಲ್ಲಿ ಭಾಗವಹಿಸಲು ಬಾಗಲಕೋಟೆಯಿಂದ ಬಂದಿದ್ದ ಜನರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಸಂಗಮನಗರದ 8 ನಿವಾಸಿಗಳಿಗೆ ಕೊರೋನಾ ಸೋಂಕು ತಗುಲಿದೆ. ಬಾಗಲಕೋಟೆಯಿಂದ ಬಂದರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಹಿನ್ನೆಲೆಯಲ್ಲಿ ಈ 8 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು, ಇಂದು ಬಿಡುಗಡೆ ಗೊಂಡ ಆರೋಗ್ಯ ಬುಲೆಟಿನಲ್ಲಿ ಇವರ ವರದಿ ಪಾಸಿಟಿವ್ ಬಂದಿದೆ.
ಸೋಂಕಿತರಲ್ಲಿ 5 ಗಂಡು ಮತ್ತು 5 ಹೆಣ್ಣು ಎಂದು ಗುರುತಿಸಲಾಗಿದ್ದು, ಇದರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಒಬ್ಬ ಸೋಂಕಿತರು ತಮ್ಮ ಮೊಬೈಲ್ ಸಂಖ್ಯೆ ತಪ್ಪಾಗಿ ನಮೂದಿಸಿದ್ದರಿಂದ ಇನ್ನೂ ಇಲಾಖೆಯ ಸಂರ್ಪಕಕ್ಕೆ ಬಂದಿಲ್ಲ ಇವರ ಬಗ್ಗೆ ಗೋಕಾಕ ಪೊಲೀಸ ಠಾಣೆಯಲ್ಲಿ ದೂರ ದಾಖಲಿಸಿಲಾಗಿದ್ದು, ಸೋಂಕಿತರನ್ನು ನಗರದ ಕೊವಿಡ್ ಕೇರ ಸೆಂಟರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುವುದಲ್ಲದೆ ಸೋಂಕಿತರು ವಾಸಿಸುವ ಪ್ರದೇಶಗಳನ್ನು ಸಿಲ್ಡೌನ ಮಾಡಲಾಗುವುದು ಎಂದು ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.
10 ಸೋಂಕಿತರು ಬಿಡುಗಡೆ : ಕಳೆದ ವಾರ ಕೊರೋನಾ ಸೋಂಕು ತಗುಲಿ ನಗರದ ದೇವರಾಜ ಅರಸು ಹಾಸ್ಟೆಲ್ ನಲ್ಲಿ ತೆರದ ಕೊವಿಡ್ ಕೇರ ಸೆಂಟರನಲ್ಲಿ ಚಿಕಿತ್ಸೆಗೆ ದಾಖಲಾಗಿದವರಲ್ಲಿ ಇಂದು ಸಂಪೂರ್ಣ ಗುಣಮುಖ ಹೊಂದಿರುವ ಒಟ್ಟು 10 ಸೋಂಕಿತರನ್ನು ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆ. ಗೋಕಾಕನಲ್ಲಿ ತೆರಲಾಗಿರುವ ಒಟ್ಟು ಎರೆಡು ಕೊವಿಡ್ ಕೇರ ಸೆಂಟರಗಳಲ್ಲಿ ಒಟ್ಟು 46 ಕೊರೋನಾ ಸೋಂಕಿತರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅದರಲ್ಲಿ ಇಲ್ಲಿಯವರೆಗೆ ಒಟ್ಟು 37 ಸೋಂಕಿತರು ಸಂಪೂರ್ಣ ಗುಣುಮುಖರಾಗಿ ಬಿಡುಗಡೆ ಹೊಂದಿದ್ದಾರೆ ಇನ್ನೂ 9 ಜನ ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದವುದು ಬಾಕಿ ಇದ್ದು ಆದಷ್ಟು ಬೇಗ ಅವರು ಕೂಡಾ ಕೊರೋನಾ ಮುಕ್ತರಾಗಿ ಬಿಡುಗಡೆ ಹೊಂದಲಿದ್ದಾರೆ ಎಂದು ಅವರ ಆರೈಕೆ ಮಾಡುತ್ತಿರುವ ವೈದ್ಯರು ಆದ ತಾಲೂಕಾ ಆರೋಗ್ಯಾಧಿಕಾರಿ ಡಾ. ಜಗದೀಶ ಜಿಂಗಿ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.