ಗೋಕಾಕ:ಪವಿತ್ರ ನದಿಗಳ ನೀರು ಹಾಗೂ ಜಾಗೃತ ಮಠಗಳ ಮೃತ್ತಿಕೆ(ಮಣ್ಣು)ಯನ್ನು ಸಂಗ್ರಹಿಸಿ ಅಯೋಧ್ಯೆಗೆ ರವಾನೆ
ಪವಿತ್ರ ನದಿಗಳ ನೀರು ಹಾಗೂ ಜಾಗೃತ ಮಠಗಳ ಮೃತ್ತಿಕೆ(ಮಣ್ಣು)ಯನ್ನು ಸಂಗ್ರಹಿಸಿ ಅಯೋಧ್ಯೆಗೆ ರವಾನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 24 :
ಅಯೋಧ್ಯೆಯಲ್ಲಿ ಅಗಸ್ಟ್-5ರಂದು ಶ್ರೀರಾಮ ಮಂದಿರ ನಿರ್ಮಾಣದ ಶೀಲನ್ಯಾಸ ನಡೆಯುವ ಹಿನ್ನಲೆಯಲ್ಲಿ ದೇಶಾದ್ಯಾಂತ ಪವಿತ್ರ ಸ್ಥಳಗಳ ಮೃತ್ತಿಕೆ(ಮಣ್ಣು) ಹಾಗೂ ನದಿಗಳ ಜಲವನ್ನು ಅಯೋಧ್ಯಗೆ ಕಳುಹಿಸುವ ಕಾರ್ಯಕ್ರಮದ ನಿಮಿತ್ಯ ಇಲ್ಲಿಯ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಘಟಪ್ರಭೆ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳ ನೀರು ಹಾಗೂ ಇಲ್ಲಿಯ ಜಾಗೃತ ಮಠಗಳ ಮೃತ್ತಿಕೆ(ಮಣ್ಣು)ಯನ್ನು ಸಂಗ್ರಹಿಸಿ ಇಲ್ಲಿಯ ಪಟಗುಂದಿ ಮಾರುತಿ ದೇವರ ಮಂದಿರದಲ್ಲಿ ಶುಕ್ರವಾರದಂದು ಪೂಜೆ ಸಲ್ಲಿಸಿ ಅಯೋಧ್ಯೆಗೆ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ತಿನ ವಿಭಾಗ ಕಾರ್ಯದರ್ಶಿ ನಾರಾಯಣ ಮಠಾಧಿಕಾರಿ, ಭಜರಂಗದಳದ ವಿಭಾಗ ಸಂಚಾಲಕ ಸದಾಶಿವ ಗುದಗಗೋಳ, ಜಿಲ್ಲಾ ಸಂಚಾಲಕ ಲಕ್ಷ್ಮಣ ಮಿಶಾಳೆ, ತಾಲೂಕಾ ಸಂಚಾಲಕ ಗುರು ಬೆನವಾಡ, ಪುರುಷೋತ್ತಮ ವಡೇರ, ಬಬ್ಲೂ ಚಿಕೋರ್ಡೆ, ಲಕ್ಕಪ್ಪ ನಂದಿ, ಮಹೇಶ ಬಡೆಪ್ಪಗೋಳ, ಮಂಜುನಾಥ ಘಮಾಣಿ, ಪರಶುರಾಮ ತಪಾಸೆ ಸೇರಿದಂತೆ ಅನೇಕರು ಇದ್ದರು.