ಗೋಕಾಕ:ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರಿಂದ ಅನಾಥ ಮಕ್ಕಳಿಗೆ ಹಾಲು ವಿತರಣೆ ಮಾಡಿ ಪಂಚಮಿ ಆಚರಣೆ
ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರಿಂದ ಅನಾಥ ಮಕ್ಕಳಿಗೆ ಹಾಲು ವಿತರಣೆ ಮಾಡಿ ಪಂಚಮಿ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 25 :
ನಗರದ ಶಿವಾ ಪೌಂಡೇಶನ್ ನಲ್ಲಿರುವ ಅನಾಥ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಇಲ್ಲಿನ ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು ನಾಗರ ಪಂಚಮಿ ಹಬ್ಬವನ್ನು ಬಸವ ಪಂಚಮಿಯನ್ನಾಗಿ ಆಚರಣೆ ಮಾಡಿದರು.
ಹುತ್ತಕ್ಕೆ ಹಾಲೆರೆಯುವ ಬದಲು ಅದೇ ಹಾಲನ್ನು ಅಪೌಷ್ಟಿಕತೆಯಿಂದ ನರಳುವ ಮಕ್ಕಳು,ಅನಾಥರು ಹಾಗೂ ಬಡಜನರಿಗೆ ಹಂಚಿದರೆ ಪಂಚಮಿಗೆ ಅರ್ಥ ಬರುತ್ತದೆ ಎಂದು ವೇದಿಕೆಯ ಕಾರ್ಯಕರ್ತರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾನವ ಬಂದುತ್ವ ಏರಿಕೆಯ ಕಾರ್ಯಕರ್ತರಾದ ರಮೇಶ ಕೋಲಕಾರ, ಎ.ಬಿ.ಖಾಜಿ, ಶೆಟ್ಟೆಪ್ಪ ಶಿಂಗಳಾಪೂರ, ಸುನೀಲ ಮೇತ್ರಿ, ಮಂಜುನಾಥ್ ಕಳ್ಳಿಮನಿ, ಮಂಜು ಸನದಿ ಹಾಗೂ ಶಿವಾ ಫೌಂಡೇಶನ್ ವ್ಯವಸ್ಥಾಪಕರಾದ ರಮೇಶ ಪೂಜೇರಿ ಹಾಗೂ ಶಾನೂರ ಉಪಸ್ಥಿತಿತರಿದ್ದರು