ಗೋಕಾಕ:ಕೊರೋನಾ ಹಿನ್ನೆಲೆ : ವಾರ್ಡ ನಂ 29 ರಲ್ಲಿ ಟಾಸ್ಕಪೋರ್ಸ ಕಮಿಟಿಯ ಸಭೆ
ಕೊರೋನಾ ಹಿನ್ನೆಲೆ : ವಾರ್ಡ ನಂ 29 ರಲ್ಲಿ ಟಾಸ್ಕಪೋರ್ಸ ಕಮಿಟಿಯ ಸಭೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 25 :
ಇಲ್ಲಿನ ವಾರ್ಡ ನಂ 29 ರಲ್ಲಿ ಕೊರೋನಾ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ವಾರ್ಡ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯು ಶನಿವಾರದಂದು ನಡೆಯಿತು
ಈ ಸಂದರ್ಭದಲ್ಲಿ ಮಾತನಾಡಿದ ಟಾಸ್ಕ್ ಫೋರ್ಸ್ ಅಧಿಕಾರಿ ಎಂ.ಎಚ್. ಗಜಾಕೋಶ ಕೊರೋನಾ ಮಹಾಮಾರಿ ತಡೆಗಟ್ಟಲು ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ ಧರಿಸಿ , ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಬೇಕೆಂದು ಮನವಿ ಮಾಡಿದರು.
ನಗರಸಭೆ ಸದಸ್ಯೆ ಶ್ರೀಮತಿ ಲಕ್ಷ್ಮಿ ಬಸವರಾಜ್ ದೇಶನೂರ, ನಗರಸಭೆಯ ಅಧಿಕಾರಿ ಎಸ್.ಕೆ.ಹಳ್ಳೂರ ಮುಖಂಡರಾದ ಪ್ರವೀಣ್ ಚುನಮರಿ, ಬಸವರಾಜ್ ಶೇಗುಣಶಿ, ದರೀಶ್ ಕಲಗಾಣ, ಶಿವಪ್ಪ ಕುರಬೇಟ, ಮಹಾಂತೇಶ ಕುರಬೇಟ, ಶಿವಪ್ಪ ಹೊಸಮನಿ, ಗುರು ಕಂಬಾರ, ಪ್ರಮೋದ ಕುರಬೇಟ, ಶಿವಾನಂದ ಜುಗಳಿ, ಅಂತವ್ವ ಹಿಡಕಲ್ಲ, ಶೋಭಾ ಅಗಳನ್ನವರ ಸೇರಿದಂತೆ ಅನೇಕರು ಇದ್ದರು.