RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಖಾಸಗಿ ವೈದ್ಯರು ಕರೋನಾ ರೋಗಿಗಳ ಉಪಚಾರಕ್ಕೆ ಕೂಡಲೇ ಅನಿಯಾಗಬೇಕು : ಅಶೋಕ ಪೂಜಾರಿ ಮನವಿ

ಗೋಕಾಕ:ಖಾಸಗಿ ವೈದ್ಯರು ಕರೋನಾ ರೋಗಿಗಳ ಉಪಚಾರಕ್ಕೆ ಕೂಡಲೇ ಅನಿಯಾಗಬೇಕು : ಅಶೋಕ ಪೂಜಾರಿ ಮನವಿ 

ಖಾಸಗಿ ವೈದ್ಯರು ಕರೋನಾ ರೋಗಿಗಳ ಉಪಚಾರಕ್ಕೆ ಕೂಡಲೇ ಅನಿಯಾಗಬೇಕು : ಅಶೋಕ ಪೂಜಾರಿ ಮನವಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ 25 :

 

ರಾಜ್ಯ ಮತ್ತು ದೇಶದಲ್ಲಿ ಬಹುತೇಕ ಸಮುದಾಯ ಮಟ್ಟದಲ್ಲಿ ಹಬ್ಬಿರುವ ಕೋವಿಡ್-19 ರೋಗ ನಿಯಂತ್ರಣದಲ್ಲಿ ಖಾಸಗಿ ಆಸ್ಪತ್ರೆ ಮತ್ತು ವೈದ್ಯರುಗಳ ಪಾತ್ರ ಮುಂದಿನ ದಿನಗಳಲ್ಲಿ ಅತ್ಯಂತ ಮಹತ್ತರವಾಗಿದ್ದು, ನಿರೀಕ್ಷಿಸದ ಸಂಖ್ಯೆಯಲ್ಲಿ ಪ್ರಕಟಗೊಳ್ಳುತ್ತಿರುವ ಕರೋನಾ ಬಾದಿತರ ಸಂಖ್ಯೆಯನ್ನು ಪರಿಗಣಿಸಿ ಖಾಸಗಿ ಆಸ್ಪತ್ರೆಯವರು ಸರಕಾರ ನಿಗದಿಪಡಿಸಿದ ಬೆಡ್‍ಗಳು ಮತ್ತು ವೈದ್ಯಕೀಯ ಶುಲ್ಕದ ದರದೊಂದಿಗೆ ಕರೋನಾ ರೋಗಿಗಳ ಉಪಚಾರಕ್ಕೆ ಕೂಡಲೇ ಅನಿಯಾಗಬೇಕೆಂದು ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ಖಾಸಗಿ ವೈದ್ಯರುಗಳನ್ನು ವಿನಂತಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು ಗಡಿ ಕಾಯುವ ಸೈನಿಕ ಮತ್ತು ಅನಾರೋಗ್ಯ ಪಿಡಿತ ರೋಗಿಗಳ ಸೇವೆ ಮಾಡುವ ವೈಧ್ಯರು ಮತ್ತು ಸಿಬ್ಬಂದಿ ತಮ್ಮ ಕಾರ್ಯದಲ್ಲಿಯೇ ಸಾರ್ಥಕತೆ ಮತ್ತು ದೇವರನ್ನು ಕಾಣಬೇಕಗುವದು. ಅದೇ ಕಾರಣದಿಂದ ಖಾಸಗಿ ವೈಧ್ಯರು ಮತ್ತು ಸಿಬ್ಬಂದಿ ಇಂತಹ ಸಾರ್ಥಕ ಸೇವೆಯ ಸಂದರ್ಭದಲ್ಲಿ ರೋಗಿಗಳ ಸೇವೆಯೇ ಜೀವನದ ಸಾರ್ಥಕತೆ ಸಾಕರಗೊಳಿಸುತ್ತದೆ ಎಂದು ಹೇಳಿದ್ದಾರೆ.
ಈಗಾಗಲೇ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈಧ್ಯರು ಮತ್ತು ಸಿಬ್ಬಂದಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ವೈಧ್ಯರುಗಳು ಮತ್ತು ಸಿಬ್ಬಂದಿಯ ಮೇಲೆ ನಡೆಯುತ್ತಿರುವ ಹಲ್ಲೆಗಳು ಅಮಾನವೀಯ ಕೃತಿಗಳಾಗಿದ್ದು, ಖಂಡನೀಯವಾಗಿವೆ. ಸರಕಾರ ಅಂತಹ ಹಲ್ಲೆಕೊರರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದ್ದು, ಅದಾಗಲೇ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಅಂತಹ ವೈಧ್ಯರು ಮತ್ತು ಸಿಬ್ಬಂದಿಗೆ ನೈತಿಕ ಸ್ಥೈರ್ಯ ಮತ್ತು ಮನೋಬಲ ಹೆಚ್ಚಿಸಲು ಸಾಧ್ಯ ಎಂದು ತಿಳಿಸಿದ್ದಾರೆ.

Related posts: