ಗೋಕಾಕ:9 ಜನರಿಗೆ ಕೊರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ
9 ಜನರಿಗೆ ಕೊರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 26 :
ಗೋಕಾಕ,ಅಂಕಲಗಿ, ಕೌಜಲಗಿ, ಪಾಮಲದಿನ್ನಿ ಗ್ರಾಮಗಳಲ್ಲಿ ಒಟ್ಟು 9 ಜನರಿಗೆ ಇಂದು ಕೊರೋನಾ ಸೋಂಕು ದೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಗೋಕಾಕ ನಗರದಲ್ಲಿ ಮೂವರು ಪರುಷರಿಗೆ, ಅಂಕಲಗಿ ಗ್ರಾಮದ 4 ಪುರುಷರಿಗೆ , ಕೌಲಜಗಿ ಮತ್ತು ಪಾಮಲದಿನ್ನಿ ಗ್ರಾಮದ ಒಬ್ಬರಿಗೆ ರವಿವಾರದಂದು ಕೊರೋನಾ ಸೋಂಕು ತಗುಲಿದ್ದು, ಸೋಂಕಿತರನ್ನು ನಗರದ ಕೊವಿಡ್ ಕೇರ ಸೆಂಟರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.