ಗೋಕಾಕ:ಬೆಟಗೇರಿ-ಮುಗಳಿಹಾಳ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ಬೆಟಗೇರಿ-ಮುಗಳಿಹಾಳ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ :
ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮಾರ್ಗದರ್ಶನದಲ್ಲಿ ಬೆಟಗೇರಿ ಗ್ರಾಮದ ನಾಗರಿಕರಿಗೆ ಈಗಾಗಲೇ ಹಲವಾರು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಹೇಳಿದರು.
ಗೋಕಾಕ ಜಿಆರ್‍ಬಿಸಿ ಸಹಯೋಗದಲ್ಲಿ ಸೋಮವಾರ ಜು.27 ರಂದು ನಡೆದ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹೊರವಲಯದ ಬೆಟಗೇರಿ-ಮುಗಳಿಹಾಳ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಉಭಯ ಹಳ್ಳಿಗಳ ಸಂಪರ್ಕ ಕಲ್ಪಿಸುವ ಈ ರಸ್ತೆ ಈ ಭಾಗದ ರೈತರಿಗೆ, ಸಾರ್ವಜನಿಕರಿಗೆ, ವಿವಿಧ ಹಳ್ಳಿಗಳ ಪ್ರಯಾಣಿಕರಿಗೆ ಬಹಳ ಅನುಕೂಲಕರವಾಗಲಿದೆ ಎಂದರು.
ಗೋಕಾಕ ಜಿಆರ್‍ಬಿಸಿ ಅನುದಾನದಡಿಯ 1ಕೋಟಿ ರೂ.ಗಳ ವೆಚ್ಚದಲ್ಲಿ ಬೆಟಗೇರಿ-ಮುಗಳಿಹಾಳ ಸಂಪರ್ಕ ಕಲ್ಪಿಸುವ ಸುಮಾರು 3 ಕೀ.ಮೀ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಗೋಕಾಕ ಜಿಆರ್‍ಬಿಸಿ ಇಇ ಯು.ಜಿ.ಬೆಣ್ಣೇರ ತಿಳಿಸಿದ್ದಾರೆ.
ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗೋಕಾಕ ಜಿಆರ್‍ಬಿಸಿ ಎಇಇ ಎಸ್.ಎಸ್.ಬಿರಾದಾರ, ಜಿಆರ್‍ಬಿಸಿ, ಜೆಇ ಕೆ.ಪಿ.ಬಿರಾದಾರ, ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ, ಮಾಯಪ್ಪ ಬಾಣಸಿ, ಸುಭಾಷ ಕರೆಣ್ಣವರ, ರಾಮಣ್ಣ ಕತ್ತಿ, ಮಾರುತಿ ಬಣಜಗೇರ, ವಿಠಲ ಕೌಜಲಗಿ, ವಿಠಲ ಚಂದರಗಿ, ಸುಭಾಷ ಜಂಬಗಿ, ಸಿದ್ರಾಮ ಜಟೆಪ್ಪಗೋಳ, ಶಿವಲಿಂಗ ಭಾಗೋಜಿ, ಹಜರತ್ ಮಿರ್ಜಾನಾಯ್ಕ, ಗೋಕಾಕ ಜಿಆರ್‍ಬಿಸಿ ಸಿಬ್ಬಂದಿ ಸೇರಿದಂತೆ ಗ್ರಾಪಂ ಮಾಜಿ ಸದಸ್ಯರು, ಹಿರಿಯ ನಾಗರಿಕರು, ಗ್ರಾಮಸ್ಥರು, ಇತರರು ಇದ್ದರು.