ಗೋಕಾಕ:ಹಿರಿಯ ನಗರಸಭೆ ಸದಸ್ಯ ಸೇರಿದಂತೆ ಗೋಕಾಕ ಹಾಗೂ ಮೂಡಲಗಿ ತಾಲೂಕಲ್ಲಿ 14 ಸೋಂಕು ದೃಢ, ನ್ಯಾಯಾಲಯ ಸಂಕೀರ್ಣ ಸೀಲ್‍ಡೌನ್:
ಹಿರಿಯ ನಗರಸಭೆ ಸದಸ್ಯ ಸೇರಿದಂತೆ ಗೋಕಾಕ ಹಾಗೂ ಮೂಡಲಗಿ ತಾಲೂಕಲ್ಲಿ 14 ಸೋಂಕು ದೃಢ, ನ್ಯಾಯಾಲಯ ಸಂಕೀರ್ಣ ಸೀಲ್‍ಡೌನ್
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಜು-27:
ಹಿರಿಯ ನಗರಸಭೆ ಸದಸ್ಯರೊಬ್ಬರು ಸೇರಿದಂತೆ ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಸೋಮವಾರದಂದು 14 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ.
ಗೋಕಾಕ ನಗರ-12, ತಾಲೂಕಿನ ನಲ್ಲಾನಟ್ಟಿ-1 ಹಾಗೂ ಮೂಡಲಗಿ ತಾಲೂಕಿನ ಮುಸಗುಪ್ಪಿ-1 ಕೊರೋನಾ ಪಾಸಿಟಿವ್ ಪ್ರಕರಣಗಳ ವರದಿ ಬಂದಿದೆ. ಸೋಂಕಿತರು ವಾಸವಾಗಿದ್ದ ಸ್ಥಳಗಳನ್ನು ಸೀಲ್‍ಡೌನ್ ಮಾಡಲಾಗಿದೆ, ಕೋವಿಡ್ ಕೇರ್ ಸೆಂಟರ್‍ದಿಂದ ಓರ್ವರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆಂದು ಡಾ.ಜಿಂಗಿ ಅವರು ತಿಳಿಸಿದ್ದಾರೆ.
ನ್ಯಾಯಾಲಯ ಸಂಕೀರ್ಣ ಸೀಲ್‍ಡೌನ್: ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿರುವ 12ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೂರು ಹಿರಿಯ ದಿವಾಣಿ ನ್ಯಾಯಾಲಯಗಳು ಮತ್ತು ಮೂರು ಜೆ.ಎಂ.ಎಫ್.ಸಿ. ನ್ಯಾಯಾಲಯಗಳನ್ನು ಕೋವಿಡ್-19 ಭೀತಿಯ ಹಿನ್ನೆಲೆಯಲ್ಲಿ ಇಂದು ಸೀಲ್‍ಡೌನ್ ಮಾಡಲಾಗಿದೆ ಅದು. ದಿ. 28ರ ವರೆಗೆ ಮುಂದುವರೆಯಲಿದೆ. ನ್ಯಾಯಾಲಯದ ಇಬ್ಬರು ಸಿಬ್ಬಂದಿಗೆ ಸೋಂಕು ಪಾಸಿಟಿವ್ ಎಂದು ದೃಢಪಟ್ಟ ವರದಿಯ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಲಯದ ಆಡಳಿತ ಶಿರಸ್ತೆದಾರರು ವಕೀಲರ ಸಂಘದ ಪದಾಧಿಕಾರಿಗಳಿಗೆ ರವಾನಿಸಿರುವ ಸಂದೇಶದ ಮೂಲಕ ಮಾಹಿತಿ ನೀಡಿದ್ದಾರೆ.