ಘಟಪ್ರಭಾ : ಮುಸ್ಲೀಂ ಬಾಂದವರು ಮಸೀದಿಯಲ್ಲೆ ಅಂತರ ಕಾಯ್ದುಕೊಂಡು ಪ್ರಾರ್ಥನೆ ಮಾಡಿ : ಹಾಲಪ್ಪ ಬಾಲದಂಡಿ
ಮುಸ್ಲೀಂ ಬಾಂದವರು ಮಸೀದಿಯಲ್ಲೆ ಅಂತರ ಕಾಯ್ದುಕೊಂಡು ಪ್ರಾರ್ಥನೆ ಮಾಡಿ : ಹಾಲಪ್ಪ ಬಾಲದಂಡಿ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜು 28 :
ಮುಸ್ಲೀಂ ಬಾಂದವರು ಮಸೀದಿಯಲ್ಲೆ ಅಂತರ ಕಾಯ್ದುಕೊಂಡು ಪ್ರಾರ್ಥನೆ ಮಾಡುವದರ ಮೂಲಕ ಬಕ್ರೀದ ಹಬ್ಬವನ್ನು ಆಚರಿಸಬೇಕೆಂದು ಘಟಪ್ರಭಾ ಪಿ.ಎಸ್.ಆಯ್. ಹಾಲಪ್ಪ ಬಾಲದಂಡಿ ಹೇಳಿದರು.
ಅವರು ಸೋಮವಾರದಂದು ಸಂಜೆ ಸ್ಥಳೀಯ ಪೋಲಿಸ ಠಾಣೆಯಲ್ಲಿ ಕರೆಯಲಾದ ಬಕ್ರೀದ ಹಬ್ಬ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡುತ್ತ, ಮಾಸ್ಕವನ್ನು ಕಡ್ಡಾಯವಾಗಿ ಧರಿಸಬೇಕು. ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು ದೇಹದ ತಾಪಮಾನವನ್ನು ತಪಾಸಣೆ ಮಾಡಬೇಕು. ಕೈಗಳನ್ನು ಸೋಪು ಅಥವಾ ಸ್ಯಾನಿಟೈಜರ್ ನಿಂದ ಶುಚಿಗೊಳಿಸುವುದು. ನಮಾಜ ನಿರ್ವಹಿಸುವವರ ಮಧ್ಯ ಕನಿಷ್ಠ 6 ಅಡಿ ಅಂತರ ಕಾಯ್ದುಕೊಂಡಿರಬೇಕು ನಮಾಜದಲ್ಲಿ ಆಯಾ ಮಸೀದಿಗಳಲ್ಲಿ ಗರಿಷ್ಠ 50 ಜನರು ಮೀರದಂತೆ ಸಾಮೂಹಿಕ ಪ್ರಾರ್ಥನೆ ಮಾಡಬೇಕು. ಈದ್ಗಾÀಗಳಲ್ಲಿ ಹೋಗದೆ ಮಸೀದಿಯಲ್ಲಿ ನಮಾಜವನ್ನು ಮಾಡಿ ಕೋರೊನಾ ಹರಡದಂತೆ ಎಚ್ಚರವಹಿಸಬೇಕೆಂದು ಮುಸ್ಲಿಮ ಬಾಂದವರಿಗೆ ಹೇಳಿದರು. ನಮಾಜ ವೇಳೆಯಲ್ಲಿ ಸಾಮೂಹಿಕ ಅಂತರ ಮತ್ತು ಇತರ ಸೋಕು ಹರಡದಿರುವಂತೆ ಮುನ್ನೆಚ್ಛರಿಕೆ ಕ್ರಮ ಕೋಗೋಳ್ಳುಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಲ್ಲಾಪೂರ ಪಿ.ಜಿ, ಅರಬಾಂವಿ, ಶಿಂದಿಕುರಬೇಟ, ಸಂಗನಕೇರಿ, ಧುಪದಾಳ ಗ್ರಾಮದ ಮುಸ್ಲೀಂ ಸಮಾಜದ ಹಿರಿಯರು ಸೇರಿದಂತೆ ಅನೇಕರು ಇದ್ದರು.