RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಅರ್ದ ಶತಕ ಬಾರಿಸಿದ ಕೊರೋನಾ : ಇಂದು 57 ಜನರಿಗೆ ಸೋಂಕು ದೃಡ : ಡಾ.ಜಗದೀಶ ಜಿಂಗಿ ಮಾಹಿತಿ

ಗೋಕಾಕ:ಅರ್ದ ಶತಕ ಬಾರಿಸಿದ ಕೊರೋನಾ : ಇಂದು 57 ಜನರಿಗೆ ಸೋಂಕು ದೃಡ : ಡಾ.ಜಗದೀಶ ಜಿಂಗಿ ಮಾಹಿತಿ 

ಅರ್ದ ಶತಕ ಬಾರಿಸಿದ ಕೊರೋನಾ : ಇಂದು 57 ಜನರಿಗೆ ಸೋಂಕು ದೃಡ : ಡಾ.ಜಗದೀಶ ಜಿಂಗಿ ಮಾಹಿತಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 29 :

 
ದಿನದಿಂದ ದಿನಕ್ಕೆ ಕೊರೋನಾ ಸೋಂಕು ತನ್ನ ರುದ್ರನರ್ತನವನ್ನು ತೊರಿಸುತ್ತಿದ್ದು, ಬುಧವಾರದಂದು ಗೋಕಾಕ ನಗರದಲ್ಲಿ 24, ಸೇರಿದಂತೆ ತಾಲೂಕಿನಾದ್ಯಂತ ಒಟ್ಟು 57 ಜನರಿಗೆ ಸೋಂಕು ದೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಗೋಕಾಕ ನಗರದ ವಿದ್ಯಾ ನಗರದ ಒಂದೇ ಕುಟುಂಬದ
10 ಜನರಿಗೆ ಸೇರಿದಂತೆ ಒಟ್ಟು 24 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ.

ದುರದುಂಡಿ – 9, ಕೌಜಲಗಿ – 8, ಘಟಪ್ರಭಾ – 1, ಬಿರನಗಡ್ಡಿ- 1, ರಾಜಾಪೂರ – 1, ಬಳೋಬಾಳ -2, ಮೂಡಲಗಿ -2, ಮಾಲದಿನ್ನಿ -1, ಅಕ್ಕತಂಗೇರಹಾಳ – 1, ಕೊಣ್ಣೂರ – 2, ಸಾವಳಗಿ – 1, ಅಂಕಲಗಿ -2 , ಸುಲದಾಳ – 1, ಶಿಂಧಿಕೂರಬೇಟ – 1 ಗ್ರಾಮದ ಒಬ್ಬರಿಗೆ ಸೇರಿದಂತೆ ಒಟ್ಟು 57 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ಡಾ‌.ಜಗದೀಶ ಜಿಂಗಿ ತಿಳಿಸಿದ್ದಾರೆ.

ಒಟ್ಟು 162 ಸೋಂಕಿತರಿಗೆ ಚಿಕಿತ್ಸೆ : ಗೋಕಾಕ ತಾಲೂಕಿನಲ್ಲಿ ಇಲ್ಲಿಯವರೆಗೆ ಒಟ್ಟು 162 ಕೊರೋನಾ ಸೋಂಕಿತರು ಚಿಕಿತ್ಸೆಗಾಗಿ ದಾಖಲಾಗಿದ್ದು, 50 ಜನ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 112 ಸೋಂಕಿತರು ಸಕ್ರೀಯವಾಗಿದ್ದು , 33 ಜನ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ನಗರ ಹಾಗೂ ಮಲ್ಲಾಪೂರ ಪಿ.ಜಿ , ಮೂಡಲಗಿಯಲ್ಲಿ ತೆರೆಯಲಾದ ಕೊವಿಡ್ ಕೇರ ಸೆಂಟರಗಳಲ್ಲಿ ಉಳಿದ 79 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಇಂದು ಆಸ್ಪತ್ರೆಯಲ್ಲಿ 112 ಜನರಿಗೆ ನಡೆಸಲಾದ ಕೊರೋನಾ ಕ್ಷಿಪ್ರ ಪರೀಕೆಯಲ್ಲಿ ಒಟ್ಟು 22 ಜನರಿಗೆ ಕೋರೋನಾ ಸೋಂಕು ದೃಡಪಟ್ಟಿದೆ ಎಂದು ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.

Related posts: