RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಭಾನುವಾರದ ಸಂತೆಯನ್ನು ಕರೋನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ರದ್ದು : ಈಶ್ವರ ಬಳಿಗಾರ

ಗೋಕಾಕ:ಭಾನುವಾರದ ಸಂತೆಯನ್ನು ಕರೋನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ರದ್ದು : ಈಶ್ವರ ಬಳಿಗಾರ 

ಭಾನುವಾರದ ಸಂತೆಯನ್ನು ಕರೋನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ರದ್ದು : ಈಶ್ವರ ಬಳಿಗಾರ

 

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಅ 1 :

 
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಡೆಯುತ್ತಿದ್ದ ಭಾನುವಾರದ ಸಂತೆಯನ್ನು ಕರೋನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಆ.2, ಆ.9, ಆ.16, ಆ.23, ಆ30ರ ದಿನಗಳ ರವಿವಾರದ ಸಂತೆಯನ್ನು ಸಂಪೂರ್ಣ ರದ್ದು ಮಾಡಲಾಗಿದೆ. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಸಹಕರಿಸಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ ತಿಳಿಸಿದ್ದಾರೆ.
ಶನಿವಾರ ಆ.1 ರಂದು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಬೆಟಗೇರಿ ಗ್ರಾಮದ ಹಿರಿಯ ನಾಗರಿಕರ ಮಾರ್ಗದರ್ಶನದಂತೆ ಸರ್ಕಾರ ಲಾಕ್‍ಡೌನ್ ತೆರವುಗೊಳಿಸಿದರೂ ಕರೊನಾ ಸೋಂಕು ಹರಡುವಿಕೆ ಇನ್ನೂ ಸಂಪೂರ್ಣ ನಿಯಂತ್ರಣದಲ್ಲಿ ಇಲ್ಲದ ಕಾರಣ ಇನ್ನೂ ಒಂದು (ಆಗಸ್ಟ್) ತಿಂಗಳು ಪೂರ್ಣ ಅವಧಿ ತನಕ ರವಿವಾರದ ಸಂತೆ ಬರುವ ಅಂಗಡಿ-ಮುಂಗಟ್ಟುಗಾರರು ಮತ್ತು ರೈತರು ಗ್ರಾಮದಲ್ಲಿರುವ ಮನೆ ಮನೆಗೆ ಹೋಗಿ ಹಣ್ಣು, ತರಕಾರಿ ಮಾರಾಟ ಮಾಡಬೇಕು. ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತರಾಗಿ ಸ್ಥಳೀಯರು ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ ಮನವಿ ಮಾಡಿಕೊಂಡಿದ್ದಾರೆ.

Related posts: