ಗೋಕಾಕ:ದಿ 3 ರಿಂದ 7 ರವರೆಗೆ ದಸ್ತಾವೇಜುಗಳ ನೋಂದಣಿಯನ್ನು ಮಾಡದಂತೆ ಆಗ್ರಹಿಸಿ ದಸ್ತ ಬರಹಗಾರರ ಮನವಿ
ದಿ 3 ರಿಂದ 7 ರವರೆಗೆ ದಸ್ತಾವೇಜುಗಳ ನೋಂದಣಿಯನ್ನು ಮಾಡದಂತೆ ಆಗ್ರಹಿಸಿ ದಸ್ತ ಬರಹಗಾರರ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 3 :
ಗೋಕಾಕ ನಗರದಲ್ಲಿ ಕೋವಿಡ-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಗರದ ಉಪನೊಂದಣಿ ಕಛೇರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲದರಿಂದ ದಿ 3 ರಿಂದ 7 ರವರೆಗೆ ದಸ್ತಾವೇಜುಗಳ ನೋಂದಣಿಯನ್ನು ತಡೆಹಿಡಿಯುವಂತೆ ಆಗ್ರಹಿಸಿ ಇಲ್ಲಿನ ದಸ್ತ ಬರಹಗಾರರ ಸಂಘದ ಪದಾಧಿಕಾರಿಗಳು ತಹಶೀಲ್ದಾರ ಮುಖಾಂತರ ಜಿಲ್ಲಾ ನೊಂದಣಾಧಿಕರಿಗಳಿಗೆ ಮನವಿ ಸಲ್ಲಿಸಿ 5 ದಿನ ದಸ್ತಾವೇಜುಗಳ ನೋಂದಣಿ ಮಾಡದಿರಲು ನಿರ್ಧರಿಸಿದರು .
ಗೋಕಾಕ ಉಪನೊಂದಣೀ ಕಚೇರಿಯಲ್ಲಿ ದಿನಂಪ್ರತಿ ನೂರಾರು ದಸ್ತಾವೇಜುಗಳ ನೊಂದಣಿಗೆ ಸಾರ್ವಜನಿಕರು ಬಂದು ಜನದಟ್ಟಣೆ ಹೆಚ್ಚಾಗುತ್ತಿದೆ ಕಛೇರಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ನೊಂದಣಿಗೆ ವೃದ್ದರು ಮತ್ತು ಅನಾರೋಗ್ಯ ಪೀಡಿತರು ಬರುತ್ತಿರುವದರಿಂದ ಕೊರೋನಾ ಪ್ರಕರಣಗಳು ಹೆಚ್ಚಾಗುವ ಸಂಭವ ಇದ್ದು, ದಸ್ತ ಬರಹಗಾರೊಬ್ಬರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದರಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಅಗಸ್ಟ
3 ರಿಂದ ಅಗಸ್ಟ 7 ರವರೆಗೆ ದಸ್ತಾವೇಜುಗಳ ನೋಂದಣಿಯನ್ನು ಮಾಡದಿರಲು ತಿರ್ಮಾನಿಸಿದೆ
ಕಾರಣ ಉಪನೋಂದಣಿ ಅಧಿಕಾರಿಗಳು ಈ ದಿನಗಳಲ್ಲಿ ನೋಂದಣಿ ಮಾಡದಂತೆ ಮತ್ತು ಕಛೇರಿಯಲ್ಲಿ ಸಾರ್ವಜನಿಕರು ಸೇರದಂತೆ ಸುತ್ತೋಲೆ ಹೊರಡಿಸಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಕೊರೋನಾ ಸೋಂಕು ಹರಡದಂತೆ ಸಹಕರಿಸಲು ದಸ್ತ ಬರಹಗಾರರ ಸಂಘದವರು ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಹೇಶ ಕುಲಕರ್ಣಿ , ಪದಾಧಿಕಾರಿಗಳಾದ ಆನಂದ ಗೋಟಡಕಿ , ವಿಶ್ವಾಸ ಸುಣದೋಳಿ, ಮಹಮದಲ್ಲಿ ನೇಗಿನಾಳ, ನಾಸೀರ ನೇಗಿನಾಳ, ರಾಜು ಅಥಣಿ , ಯಾಸೀನ ಗೌಂಡಿ, ಪಂಚಾಕ್ಷರಿ ಹಿರೇಮಠ, ಬಿ.ಡಿ.ಶಿರಸಂಗಿ , ಎಸ್.ಡಿ ಶಿರಸಂಗಿ, ಎಸ್.ಎಂ.ಅಕ್ಕಿ, ಎಸ್.ಎಂ ಸುಣದೋಳಿ, ರವಿ ಕುಲಕರ್ಣಿ, ಎಂ.ಎನ್.ಶಿರಸಂಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು .