RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಇಬ್ಬರಿಗೆ ಕೊರೋನಾ ಸೋಂಕು ದೃಡ : ಶಹರ ಪೊಲೀಸ ಠಾಣೆ ಸಿಲ್ಡೌನ : 7 ಜನ ಸೋಂಕಿತರು ಬಿಡುಗಡೆ : ಡಾ.ಜಗದೀಶ ಜಿಂಗಿ

ಗೋಕಾಕ:ಇಬ್ಬರಿಗೆ ಕೊರೋನಾ ಸೋಂಕು ದೃಡ : ಶಹರ ಪೊಲೀಸ ಠಾಣೆ ಸಿಲ್ಡೌನ : 7 ಜನ ಸೋಂಕಿತರು ಬಿಡುಗಡೆ : ಡಾ.ಜಗದೀಶ ಜಿಂಗಿ 

ಇಬ್ಬರಿಗೆ ಕೊರೋನಾ ಸೋಂಕು ದೃಡ : ಶಹರ ಪೊಲೀಸ ಠಾಣೆ ಸಿಲ್ಡೌನ : 7 ಜನ ಸೋಂಕಿತರು ಬಿಡುಗಡೆ : ಡಾ.ಜಗದೀಶ ಜಿಂಗಿ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 3 :

 

ಗೋಕಾಕ ತಾಲೂಕಿನಲ್ಲಿ ಸೋಮವಾರದಂದು ಇಬ್ಬರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಗೋಕಾಕ ನಗರದಲ್ಲಿ ಒಬ್ಬರಿಗೆ ಮತ್ತು ಅಂಕಲಗಿ ಗ್ರಾಮದ ಒಬ್ಬರಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು , ಸೋಂಕಿತರನ್ನು ಚಿಕಿತ್ಸೆಗಾಗಿ ಕೊವಿಡ ಕೇರ ಸೆಂಟರಗಳಿಗೆ ದಾಖಲಿಸಲಾಗಿದೆ

ಶಹರ ಪೊಲೀಸ ಠಾಣೆ ಸಿಲ್ಡೌನ : ನಗರದ ಶಹರ ಪೊಲೀಸ ಠಾಣೆಯ ಪಿಎಸ್ಐ ಅವರಿಗೆ ಕೊರೋನಾ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಶಹರ ಪೊಲೀಸ ಠಾಣೆಯನ್ನು ಸಿಲ್ಡೌನ ಮಾಡಲಾಗಿದೆ ಎಂದು ಡಾ‌.ಜಗದೀಶ ಜಿಂಗಿ ತಿಳಿಸಿದ್ದಾರೆ.

ಗುಣಮುಖವಾದ 7 ಜನ ಸೋಂಕಿತರು ಬಿಡುಗಡೆ : ಕೊರೋನಾ ಸೋಂಕು ತಲುಗಿದ್ದ , 7 ಜನರು ಸಂಪೂರ್ಣ ಗುಣಮುಖರಾಗಿ ಸೋಮವಾರದಂದು ಕೇರ ಸೆಂಟರನಿಂದ ಬಿಡುಗಡೆ ಆಗಿದ್ದು, 179 ಜನರಿಗೆ ಕೊರೋನಾ ಸೋಂಕು ತಗುಲಿದ್ದು , 110 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಎಂದು ಡಾ.ಜಿಂಗಿ ತಿಳಿಸಿದ್ದಾರೆ.

Related posts: